Advertisement

ಆಸ್ಪತ್ರೆಗೆ ಸಂಸದ ಸುರೇಶ್‌ ಭೇಟಿ

04:36 PM Mar 31, 2020 | Suhan S |

ಕುಣಿಗಲ್‌: ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಡಿ.ಕೆ.ಚಾರಿಟಬಲ್‌ ಟ್ರಸ್ಟ್‌ನಿಂದ ಕುಣಿಗಲ್‌ ತಾಲೂಕಿನಲ್ಲಿ ಒಂದು ಲಕ್ಷ ಮಾಸ್ಕ್ ಹಾಗೂ ಒಂದು ಸಾವಿರ ಸಾನಿ ಟೈಸರ್‌ ಬಾಟಲ್‌ ವಿತರಣೆ ಮಾಡಲು ಕ್ರಮಕೈಗೊಳ್ಳ ಲಾಗಿದೆ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಕೊರೊನಾ ಹರಡುವಿಕೆ ತಡೆಗಟ್ಟಲು ಜಿಲ್ಲಾ ಡಳಿತ ಹಾಗೂ ತಾಲೂಕು ಅಡಳಿತ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಿ ಮಾತನಾಡಿದರು.ಡಿ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣ ಕಂಡು ಬಂದಿಲ್ಲ. ವಿದೇಶದಿಂದ ಬಂದಿದ್ದವರ ಕ್ವಾರಂಟೈನ್‌ ಅವಧಿಯೂ ಮುಗಿಯುತ್ತಾ ಬಂದಿದೆ. ಈ ಸಂಬಂಧ ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ. ತಾಲೂಕಿನಿಂದ ಉದ್ಯೋಗಕ್ಕಾಗಿ ಬೇರೆ ಬೇರೆ ಕಡೆಗಳಲ್ಲಿ ವಾಸವಾಗಿದ್ದ 27 ಸಾವಿರ ಮಂದಿ ಮರಳಿ ಬಂದಿದ್ದಾರೆ. ಇವರ ಮೇಲು ಸಂಪೂರ್ಣ ನಿಗಾ ವಹಿಸಲಾಗಿದೆ. ಇದಕ್ಕಾಗಿ ಪಿಡಿಒ, ವಿಎ, ಆಶಾ ಕಾರ್ಯಕರ್ತರನ್ನು ನಿಯೋಜನೆ ಮಾಡಲಾಗಿದ್ದು ಇವರು ಬೇರೆ ಊರು ಗಳಿಂದ ಬಂದಿರುವವರೆಗೆ ತಿಳಿವಳಿಕೆ ನೀಡಿದ್ದಾರೆ.

ತಾಲೂಕಿಗೆ ಅಗತ್ಯವಾಗಿ ನಾಲ್ಕು ವೆಂಟಿಲೇಟರ್‌ ಗಳನ್ನು ಪೂರೈಸುವಂತೆ ಜಿಲ್ಲಾಧಿಕಾರಿ ಜತೆ ಮಾತನಾಡಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಶಾಸಕ ಡಾ.ರಂಗನಾಥ್‌, ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌, ಡಿವೈಎಸ್‌ಪಿ ಜಗದೀಶ್‌, ಇಒ ಶಿವ ರಾಜಯ್ಯ, ತಾಲೂಕು ವೈದ್ಯಾಧಿಕಾರಿ ಡಾ.ಜಗದೀಶ್‌, ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next