Advertisement

ಮೈಷುಗರ್‌ ಖಾಸಗೀಕರಣ ಮಾಡಲು ಹೇಳಿಲ್ಲ: ಸುಮಲತಾ

07:14 PM Jul 14, 2021 | Team Udayavani |

ಮದ್ದೂರು: ಮೈಷುಗರ್‌ ಕಾರ್ಖಾನೆಯನ್ನು ಖಾಸಗೀಕರಣ ಮಾಡಬೇಕೆಂದು ತಾವು ಎಲ್ಲಿ ಯೂ ಹೇಳಿಲ್ಲ. ಈ ಹಿಂದೆ ನೂರಾರು ಕೋಟಿ ರೂ.ಅನುದಾನ ನೀಡಿದ್ದರೂ ಮೈಷುಗರ್‌ ಅಭಿವೃದ್ಧಿ ಆಗಿಲ್ಲವೆಂಬ ವರದಿ ಮೇರೆಗೆ ಜಿಲ್ಲೆಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ನಡೆಸಲು ಸಾಧ್ಯವಾಗದಿದ್ದಲಿ ಬದಲಿ ಮಾರ್ಗ ಅನುಸರಿಸುವಂತೆ ಸಲಹೆ ನೀಡಿದ್ದಾಗಿ ಸಂಸದೆ ಸುಮಲತಾ ಸ್ಪಷ್ಟನೆ ನೀಡಿದರು.

Advertisement

ತಾಲೂಕಿನ ಗೆಜ್ಜಲಗೆರೆ ಮನ್‌ಮುಲ್‌ ಕಚೇರಿ ಹೊರ ಆವರಣದಲ್ಲಿ ರಾಜ್ಯ ರೈತ ಸಂಘ, ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಹಾಲು-ನೀರು ಮಿಶ್ರಿತ ಪ್ರಕರಣ ಹಾಗೂ ಮನ್‌ಮುಲ್‌ ಅವ್ಯವಹಾರ ಸಿಬಿಐ ತನಿಖೆಗೆ ವಹಿಸುವ ಸಂಬಂಧ ಆಯೋ ಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದ ಹಾಲು ಉತ್ಪಾದ ಕರು, ರೈತ ಸಂಘದ ಸದಸ್ಯರ ಧರಣಿ ವೇಳೆ ಮನವಿ ಸ್ವೀಕರಿಸಿ ಮಾತನಾಡಿ, ಅಕ್ರಮಗಳ ವಿರುದ್ಧ ದನಿ ಎತ್ತಿದರೆ ಮುಗಿಬೀಳುವ ನೀವು ಅಕ್ರಮಗಣಿಗಾರಿಕೆ, ಮನ್‌ಮುಲ್‌ ಅವ್ಯವಹಾರ ಕುರಿತು ತುಟಿ ಬಿಚ್ಚುತ್ತಿಲ್ಲವೇಕೆಂದು ಪ್ರಶ್ನಿಸಿದ ರಲ್ಲದೇ, ಕಾವೇರಿ ನದಿ ನೀರು ಸಮಸ್ಯೆ, ಅಕ್ರಮ ಗಣಿಗಾರಿಗೆ ಮತ್ತಿತರ ವಿಚಾರವಾಗಿ ಜಿಲ್ಲೆಯ ಮತ್ತು ರಾಜ್ಯದ ಪರ ಈಗಾಗಲೇ ಸಂಸತ್‌ನಲ್ಲಿ ಚರ್ಚಿಸಿರುವುದಾಗಿ ಹೇಳಿದರು.

ಸಿಬಿಐಗೆ ವಹಿಸಿ: ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಸುಮಲತಾರ ಹೋರಾ ಟಕ್ಕೆ ರಾಜ್ಯ ರೈತ ಸಂಘ ಸಾಥ್‌ ನೀಡುವುದಾಗಿ ಘೋಷಿಸಿದರು. ಮನ್‌ಮುಲ್‌ ಹಾಲು-ನೀರು ಮಿಶ್ರಿತ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವ ಸಂಬಂಧ ರೈತ ಸಂಘದ ನಿಲುವು ಅಚಲ ಎಂದರು.

ಪ್ರತಿಭಟನೆ ವೇಳೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಯರಗನಹಳ್ಳಿ ರಾಮಕೃಷ್ಣಯ್ಯ, ಜಿಲ್ಲಾಧ್ಯಕ್ಷ ಕೆಂಪೂ ಗೌಡ, ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿಯ ಮಧುಚಂದನ್‌, ಮೈಸೂರು ರೈತ ಕೂಟದ ಪ್ರಸನ್ನ, ರವೀಂದ್ರ, ವಿಎಸ್‌ಎಸ್‌ ಮುಖಂಡ ಗುರುಪ್ರಸಾದ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next