ರಾಮನಗರ: ಕೇಂದ್ರ ಸರ್ಕಾರದ ಸಾಧನೆ ಶೂನ್ಯ. ಅಭಿವೃದ್ಧಿ ಮಂತ್ರವೇ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಪ್ರಧಾನಿ ಮೋದಿ ಸರ್ಕಾರ 2.0 ಅವಧಿಯ ಮೊದಲ ವರ್ಷ ಮುಗಿದಿದೆ. ಬಿಜೆಪಿಯವರು ಸಂಭ್ರಮ ದಲ್ಲಿದ್ದಾರೆ. ಆದರೆ ಸಾಧನೆ ಶೂನ್ಯ. ಆರ್ಥಿಕ ಪರಿಸ್ಥಿತಿ ಕುಸಿದಿದೆ. ಜಿಡಿಪಿ 4.3ರಷ್ಟಿದೆ ಎನ್ನುತ್ತಿದ್ದಾರೆ.
ಆದರೆ ವಾಸ್ತವದಲ್ಲಿ ಇರೋದು 2.4 ಮಾತ್ರ. ಈ ಬಗ್ಗೆ ಕೇಂದ್ರ ಸುಳ್ಳು ಅಂಕಿ ಅಂಶ ನೀಡುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು. ಲಾಕ್‌ಡೌನ್ ಪದ ಬಿಟ್ಟರೆ ಬೇರೇನು ಹೇಳಲಿಲ್ಲ. ಎಮೋಷನಲ್ ಬ್ಲಾಕ್ ಮೇಲ್ ಬಿಟ್ಟರೆ ಬಿಜೆಪಿ ಬಳಿ ಏನೂ ಇಲ್ಲ. ತಮಟೆ, ಜಾಗಟೆ, ದೀಪ ನಾವು ಹಂಚಿದ್ದೆವೆ. ಇನ್ನೇನು ಮಾಡಬೇಕು ಹೇಳಿ. ಪ್ರಧಾನಿ ಮಾತಿಗೆ ನಾವು ಗೌರವ ಕೊಟ್ಟಿದ್ದೇವೆ. ಆದರೆ, ವಿರೋಧ ಪಕ್ಷದವರ ಮಾತನ್ನು ಪ್ರಧಾನಿಗಳು ಕೇಳುತ್ತಿಲ್ಲ ಎಂದರು.
ಕೋವಿಡ್ 19 ದೂರ ಇರೋದು ಲಾಕ್ ಡೌನ್‌ನಿಂದಾಗಿ ಅಲ್ಲ: ದೇಶವಾಸಿಗಳಲ್ಲಿ ಇಮ್ಯುನಿಟಿಯಿಂದಾಗಿ ಕೋವಿಡ್ 19 ನಮ್ಮನ್ನು ಹೆಚ್ಚಾಗಿ ಬಾಧಿಸಿಲ್ಲ. ಪ್ರಧಾನಿಗಳು ವಿಧಿಸಿದ ಲಾಕ್‌ಡೌನ್‌ನಿಂದ ಅಲ್ಲ ಎಂದು ವ್ಯಂಗ್ಯವಾಡಿ ದರು. ಆರ್ಥಿಕ ವ್ಯವಸ್ಥೆ ಸುಧಾರಿಸಬೇಕಾ ದವರು, ಸುಳ್ಳು ಹೇಳಿಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದರು.
ಜನರಿಗೆ ಬೇಕಿರುವುದು ಸಂಕಷ್ಟದಲ್ಲಿ ಮಾತ್ರವೇ ಪರಿಹಾರ. ಸರ್ಕಾರಗಳು ಇಂತಹ ಸಮಯದಲ್ಲಿ ನೆರವು ನೀಡಬೇಕು. ರಾಜ್ಯ ಸರಕಾರ ಘೋಷಣೆ ಮಾಡಿರುವ ಪರಿಹಾರದ ಯೋಜನೆಗಳಲ್ಲಿ ನಯಾ ಪೈಸೆ ಫಲಾನುಭವಿಗ ಳನ್ನು ಇಂದಿಗೂ ತಲುಪಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಗ್ರಾಪಂ ಚುನಾವಣೆ, ಆಶಾ ಕಾರ್ಯಕರ್ತಯರ ವೇತನ, ಮುಂದೂಡಿದ ಬಗ್ಗೆ , ಪೆಟ್ರೋಲ್, ಡೀಸಲ್ ದರ ಇಳಿಸದಿರುವ ಬಗ್ಗೆ, ಸಂಸದ ಡಿ.ಕೆ.ಸುರೇಶ್ ಟೀಕೆ ಮಾಡಿದರು.
ಡ್ರೆಸ್, ಡಿಸೈನೆರ್ ವೇರ್ ಜತೆಗೆ ಮ್ಯಾಚಿಂಗ್ ಮಾಸ್ಕ್ ಸಿದಟಛಿಪಡಿಸು ವುದು ಟ್ರೆಂಡ್ ಆಗುತ್ತಿದೆ ಎಂದು ಲೇವಡಿಯಾಡಿದರು. ಕಾಂಗ್ರೆಸ್‌ಗೆ ಕೋವಿಡ್ 19 ಪರಿಸ್ಥಿತಿ ನಿಭಾಯಿಸುವ ಶಕ್ತಿ ಇತ್ತು. ರಾಹುಲ್ ಗಾಂಧಿ, ಕೋವಿಡ್ 19 ನಿರ್ವಹಣೆ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದರು. ಆದರೆ ಮಾಧ್ಯಮ ಗಳು ಮತ್ತು ಜಾಲತಾಣಗಳಲ್ಲಿ ಅವರನ್ನು ಬಫೂನ್‌ನಂತೆ ತೋರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದ ಬಿಜೆಪಿ ಸರ್ಕಾರ ಉರುಳಿದರೆ, ಕಾಂಗ್ರೆಸ್ ಅದಕ್ಕೆ ಕಾರಣವಲ್ಲ ಎಂದರು.
20 ಲಕ್ಷ ಕೋಟಿ, ಸಾಲದ ರೂಪದ ಸಂಕಷ್ಟ: ಪ್ರಧಾನಿಗಳ ಆಡಿಯೋ ನೋಟ್‌ನಲ್ಲಿ ಲಾಕ್‌ಡೌನ್‌ನಲ್ಲಿ ನರಳಿದ ಕಾರ್ಮಿಕರು ಮತ್ತು ಬಡವರ ಬಗ್ಗೆ ಶನಿವಾರ ಪ್ರಸ್ತಾಪಿಸಲಿಲ್ಲ. ಸೈಕ್ಲೋನ್ ವಿಚಾರ ಮುಂದಿಟ್ಟು ಕೊಂಡು ಅಸಲಿ ವಿಷಯ ಮರೆಮಾಚಿ ದ್ದಾರೆ. 20 ಲಕ್ಷ ಕೋಟಿ ನೀಡಿದ್ದು ಪರಿಹಾರವಲ್ಲ. ಸಾಲದ ರೂಪದಲ್ಲಿ ಕೇಂದ್ರ ಸರ್ಕಾರ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಹರಿಹಾಯ್ದರು. ಬಡವರ ಸಂಕಷ್ಟಕ್ಕೆ ಸ್ಪಂದಿಸಿದೆ ಎನ್ನುವುದು ಸುಳ್ಳು, ಪುಡ್ ಸೆಕ್ಯುರಿಟಿ ಕಾಯ್ದೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಅಕ್ಕಿ, ಬೇಳೆ ಕೊಡಬೇಕು, ಕಾಯ್ದೆಯಂತೆ ಕೊಟ್ಟಿದ್ದಾರೆ. ಇನ್ನೇನು ಮಾಡಿದ್ದಾರೆ ಎಂದರು