Advertisement

ರಾಷ್ಟ್ರ ರಾಜಕಾರಣದಲ್ಲೇ ಮುಂದುವರೆಯುವೆ : ಸಂಸದ ಬಿ.ವೈ.ರಾಘವೇಂದ್ರ

04:46 PM Oct 12, 2021 | Team Udayavani |

ಶಿವಮೊಗ್ಗ : ತಾವು ರಾಜ್ಯ ರಾಜಕಾರಣದತ್ತ ಮುಖಮಾಡಲಿದ್ದಾರೆ ಎನ್ನುವ ವದಂತಿಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತೆರೆ ಎಳೆದರು.

Advertisement

ನಗರದಲ್ಲಿಂದು ಈ ವಿಚಾರವಾಗಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಮೂರು ಬಾರಿ ಸಂಸದನಾಗಿ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿದ್ದಾರೆ. ಆ ದಿಕ್ಕಿನಲ್ಲೇ ಮುಂದುವರೆಯುವ ಅಪೇಕ್ಷೇ ಇದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತಗೊಳ್ಳದೇ, 8 ತಾಲೂಕಿನಲ್ಲೂ ಸೇವೆ ಮಾಡುತ್ತೇನೆ ಎಂದರು.

ಕ್ಯಾಬಿನೆಟ್ ನಲ್ಲಿ  ಬಿ.ವೈ.ವಿಜಯೇಂದ್ರಗೆ ಸಚಿವ ಸ್ಥಾನ ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಘವೇಂದ್ರ, ಅದರ ಪ್ರಶ್ನೆ ಬರಲ್ಲ. ಯಡಿಯೂರಪ್ಪ ಅವರು ಕೂಡ ಎಲ್ಲೂ ಹೇಳಿಲ್ಲ‌. ವಿಜಯೇಂದ್ರ ಕೂಡ ಅದನ್ನು ಯಾವತ್ತು ಅಪೇಕ್ಷೆ ಪಟ್ಟಿಲ್ಲ. ಅವನ ಪಾಡಿಗೆ ಅವನು ಸಂಘಟನೆಯ ಚೌಕಟ್ಟಿನಲ್ಲಿ ಕೆಲಸ ಮಾಡ್ತಿದ್ದಾನೆ. ಕ್ಯಾಬಿನೆಟ್ ಮತ್ತೀತರ ವಿಚಾರಗಳು ಚುನಾಯಿತ ಪ್ರತಿನಿಧಿಗಳ ಚೌಕಟ್ಟಿನಲ್ಲಿ ಬರುತ್ತೇ. ಇದು ವಿಜಯೇಂದ್ರಯವರ ಗಮನಕ್ಕೂ ಇದೆ. ಅವರು ಕೂಡ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ ಎಂದರು.

ಇನ್ನು ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ರಾಘವೇಂದ್ರ, ಐಟಿ ರೈಡ್ ಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ. ಉಮೇಶ್ ಬಹಳ ವರ್ಷದಿಂದ ಸಿಎಂ ಆಫೀಸ್ ನಲ್ಲೇ ಕೆಲಸ ಮಾಡುತ್ತಿದ್ದರು‌. ಐಟಿ ಇಲಾಖೆ ಬೇರೆಯವರಂತೆ ಇವರ ಮೇಲೂ ದಾಳಿ ಮಾಡಿದೆ. ಐಟಿ ತನಿಖೆ ನಡೆಯುತ್ತಿದ್ದು, ಹೊರಗೆ ಬಂದ ಮೇಲೆ ವಿಚಾರ ತಿಳಿಯುತ್ತೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next