Advertisement

ಹುಣಸೂರಿನಲ್ಲಿ 20 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ ಆರಂಭ : ಸಂಸದ ಪ್ರತಾಪ ಸಿಂಹ

08:03 PM May 28, 2021 | Team Udayavani |

ಹುಣಸೂರು : ಸಾರ್ವಜನಿಕ ಆಸ್ಪತ್ರೆ, ತಾಲೂಕಿನ ಮೂರು ಕೋವಿಡ್ ಕೇರ್ ಸೆಂಟರ್‌ ಗಳ ಜೊತೆಗೆ  ಸಿಗ್ಮ ಆಸ್ಪತ್ರೆಯಲ್ಲಿ ಡಾ.ಸಿದ್ದೇಶ್ ನೇತೃತ್ವದಲ್ಲಿ 20 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ ಆರಂಭಿಸಲಾಗುವುದೆಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

Advertisement

ಹುಣಸೂರು ತಾಲೂಕಿನ ಸೋಂಕಿತರು ಹೆಚ್ಚಿರುವ ಕಟ್ಟೆಮಳಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಗ್ರಾಮದಲ್ಲಿ ನಡೆಯುತ್ತಿರುವ ಸರ್ವೇ ವೀಕ್ಷಿಸಿದರು,  ಗಾವಡಗೆರೆ, ಬಿಳಿಗೆರೆ, ಮುಳ್ಳೂರು ಗ್ರಾ.ಪಂ.ಗಳಿಗೆ ತಹಸೀಲ್ದಾರ್ ಬಸವರಾಜ್, ಇ.ಓ.ಗಿರೀಶ್‌ರೊಂದಿಗೆ ಭೇಟಿ ನೀಡಿದ್ದ ಸಂಸದರು ಮನೆ-ಮನೆ ಸಮೀಕ್ಷೆ ಬಗ್ಗೆ ಮಾಹಿತಿ ಪಡೆದುಕೊಂಡ ನಂತರ ಅಲ್ಲಿನ ಸಿಬ್ಬಂದಿಗಳಿಗೆ ಮೇ.31ರೊಳಗೆ ಮನೆಮನೆ ಸರ್ವೇ ಮುಗಿಸಲು ಸೂಚಿಸಿದ್ದಾರೆ.

ಇದನ್ನೂ ಓದಿ :  ನೆನಪಿಡಿ… ನಿಮ್ಮ ಬದುಕು ನಿಮ್ಮನ್ನು ಚೆಂದಾಗಿ ಬದುಕಿಸುತ್ತದೆ..!

ನಂತರ ನಗರದ ಆಂಜನೇಯ ದೇವಾಲಯದ ಬಳಿಯಲ್ಲಿ ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್‌ ನಲ್ಲಿ ಸಿಗ್ಮಾ ಆಸ್ಪತ್ರೆ ವತಿಯಿಂದ ಆರಂಭಿಸಲುದ್ದೇಶಿಸಿರುವ ಆಸ್ಪತ್ರೆಯಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ, ಅಲ್ಲಿನ ಕಾರ್ಯ ವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು.

ನಗರ ಪ್ರದೇಶದಲ್ಲಿ ಸೋಂಕು ಕಡಿಮೆಯಾಗುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವುದರಿಂದ ಜೂ.3ರವರೆಗೆ ವಿಧಿಸಿರುವ ಲಾಕ್‌ ಡೌನ್‌ ಗೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

Advertisement

ಸಬ್ಬನಹಳ್ಳಿ ಕೋವಿಡ್ ಸೆಂಟರ್‌ ನಲ್ಲಿ ಸೋಂಕಿರೊಂದಿಗೆ ಚರ್ಚಿಸಿ, ತಾಯಿ ಹಾಗೂ 2 ಮತ್ತು 3 ವರ್ಷದ ಮಗುವಿರುವುದರಿಂದ ಇವರಿಗೆ ಹೋಂ ಐಸ್ಸೊಲೇಷನ್ ಗೊಳಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು,  ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲು ಬಂದಿರುವ ದೀಪಕ್ ಮಾಹಿತಿ ನೀಡಿ ವಿವಿಧೆಡೆ ಇಂಜಿನಿಯರ್‌ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ  ಮೈಸೂರು ವಾಲೆಂಟಿಯರ್ಸ್ ಫೋರಂವತಿಯಿಂದ ಅಳಿಲು ಆರ್ಗನೈಜೇಷನ್‌ ನ ವಾಲೆಂಟಿಯರ್ಸ್ ತಂಡ ರಚಿಸಿಕೊಂಡು ಗ್ರಾಮೀಣ ಭಾಗದಲ್ಲಿ ಕೊವಿಡ್ ಸೋಂಕಿತರ ಸೇವೆಗಾಗಿ ಬಂದಿದ್ದು. ಸೋಂಕಿತ ರೋಗಿಯ ಎಲ್ಲಾ ಮಾಹಿತಿಯನ್ನು ಕಂಪ್ಯೂಟರ್‌ ನಲ್ಲಿ ಅಪ್ ಲೋಡ್ ಮಾಡಲಾಗುವುದು. ಈ ಆಸ್ಪತ್ರೆಯನ್ನು ಮೈಸೂರಿನ ಸಿಗ್ಮಾ ಆಸ್ಪತ್ರೆಯಿಂದಲೇ ತಜ್ಞರು ಮಾನಿಟರಿಂಗ್ ಮಾಡಲಿದ್ದಾರೆ. ಹೀಗಾಗಿ ಗುಣಮಟ್ಟದ ಚಿಕಿತ್ಸೆ ನಿಗಲಿದೆ ಎಂದು ಮಾಹಿತಿ ನೀಡಿದರು. ಅಳಿಲು ಸ್ವಯಂಸೇವಾ ಸಂಸ್ಥೆಯ  ಲಿಖಿತ್,ಮೈಯೂರ್, ಮಧು, ಶೃತ ಮತ್ತಿತರರು ಇದ್ದರು.

ಇದನ್ನೂ ಓದಿ : ಬಿಗ್‌ಬಾಸ್ಕೆಟ್‌ ಮಾಲೀಕತ್ವ ‘ಟಾಟಾ’ ಹೆಗಲಿಗೆ : ಶೇ. 64.3 ಷೇರು ಖರೀದಿಸಿದ ಟಾಟಾ ಡಿಜಿಟಲ್‌

ಮೇ 30ಕ್ಕೆ ಸೆಂಟರ್ ಉದ್ಘಾಟನೆ:

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಮೇ.30 ರಂದು ಕೋವಿಡ್ ಸೋಂಕಿನ ನಿಯಂತ್ರಣ ಸಂಬಂಧ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದು. ಅಂದೇ ಇಲ್ಲಿ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸದರು ತಿಳಿಸಿದರು.

ನಂತರ ಇತ್ತೀಚೆಗೆ ಕೊರೋನಾದಿಂದ ನಿಧನರಾದ ಬಿಜೆಪಿ ಹಿರಿಯ ಮುಖಂಡ ರಾಜೇಂದ್ರರವರ ಮನೆಗೆ ಭೇಟಿ ನೀಡದರು. ತಹಸೀಲ್ದಾರ್ ಬಸವರಾಜ್, ಇ.ಓ. ಗಿರೀಶ್, ಪೌರಾಯುಕ್ತ ರಮೇಶ್, ಬಿಳಿಗೆರೆ, ಮುಳ್ಳೂರು, ಹಳೇಬೀಡು ಗ್ರಾ.ಪಂ.ಅಧ್ಯಕ್ಷರಾದ ಮೋಹನ್, ಮಹೇಶ್, ಜಯಲಕ್ಷ್ಮಿಮಹದೇವ್,ಆಯಾಪಂಚಾಯ್ತಿ ಪಿ.ಡಿ.ಓಗಳು,  ತಾಲೂಕು ಬಿಜೆಪಿ  ಅಧ್ಯಕ್ಷ ಹಳ್ಳದ ಕೊಪ್ಪಲು ನಾಗಣ್ಣಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಾನಂದ ಕುಮಾರ್, ನಗರಸಭಾ ಸದಸ್ಯರಾದ ವಿವೇಕಾನಂದ, ಸಾಯಿನಾಥ್, ಮುಖಂಡ ವೀರೇಶ ರಾವ್ ಬೋಬಡೆ, ಅರಗು ಮಂಜುನಾಥ್, ನಾಗೇಂದ್ರ, ನಿಂಗರಾಜ ಮಲ್ಲಾಡಿ ಇತರರಿದ್ದರು.

ಇದನ್ನೂ ಓದಿ : ಸಾಮೂಹಿಕ ಅತ್ಯಾಚಾರ ಪ್ರಕರಣ: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರ ಕಾಲಿಗೆ ಗುಂಡೇಟು

Advertisement

Udayavani is now on Telegram. Click here to join our channel and stay updated with the latest news.

Next