Advertisement
ಅಧಿಕಾರಿಗಳೊಂದಿಗೆ ಶನಿವಾರ ಮೈಸೂರಿನಲ್ಲಿ ನರ್ಮ್ ಯೋಜನೆಯಲ್ಲಿ ಹಿನಕಲ್ ವೃತ್ತದಲ್ಲಿ ಕೈಗೊಳ್ಳಲಾಗಿರುವ ಗ್ರೇಡ್ ಸಪರೇಟರ್ ಕಾಮಗಾರಿ ಹಾಗೂ ಅಮೃತ್ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
Related Articles
Advertisement
ಈ ಯೋಜನೆಯಡಿ 57.65 ಕೋಟಿ ರೂ. ವೆಚ್ಚದಲ್ಲಿ ಮೇಳಾಪುರ ನೀರು ಸರಬರಾಜು ಯೋಜನೆ, 2.99 ಕೋಟಿ ರೂ. ವೆಚ್ಚದಲ್ಲಿ ಹೊಂಗಳ್ಳಿ 2ನೇ ಹಂತದ ನೀರು ಸರಬರಾಜು ಯೋಜನೆ, 51.01 ಕೋಟಿ ರೂ. ವೆಚ್ಚದಲ್ಲಿ ಹೊಂಗಳ್ಳಿ 3ನೇ ಹಂತದ ನೀರು ಸರಬರಾಜು ಯೋಜನೆ, 1.90 ಕೋಟಿ ರೂ. ವೆಚ್ಚದಲ್ಲಿ ಬೆಳಗೊಳ ನೀರು ಸರಬರಾಜು ಯೋಜನೆ,
25.80 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನ ವಿಜಯನಗರ 2ನೇ ಹಂತದ ಕೇಂದ್ರ ಜಲಸಂಗ್ರಹಾಗಾರದಲ್ಲಿ 26 ಎಂಎಲ್‌ಡಿ ಸಾಮರ್ಥ್ಯದ ಜಲಸಂಗ್ರಹಾಗಾರಗಳ ನಿರ್ಮಾಣ ಹಾಗೂ ಹಳೆಯ 4 ಎಂಜಿ ಮತ್ತು 6 ಎಂಜಿ ಸಾಮರ್ಥ್ಯದ ಜಲಸಂಗ್ರಹಾರಗಳ ದುರಸ್ತಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
5.99 ಕೋಟಿ ರೂ. ವೆಚ್ಚದಲ್ಲಿ ಎತ್ತರದ ಜಲಸಂಗ್ರಹಾಗಾರ ವ್ಯಾಪ್ತಿಯ ಪ್ರದೇಶಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳು, 1.60 ಕೋಟಿ ರೂ. ವೆಚ್ಚದಲ್ಲಿ ಸರಸ್ವತಿಪುರಂ 10 ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲ ಸಂಗ್ರಹಾಗಾರ ನಿರ್ಮಾಣ, 9.06 ಕೋಟಿ ರೂ. ವೆಚ್ಚದಲ್ಲಿ ಕಬಿನಿ ನೀರು ಸರಬರಾಜು ಯೋಜನೆಗೆ ಹೆಚ್ಚುವರಿ ಪಂಪುಗಳ ಅಳವಡಿಕೆ ಮಾಡಲಾಗುತ್ತಿದೆ.
ವಿಜಯನಗರದಲ್ಲಿರುವ ಕೇಂದ್ರ ಜಲ ಸಂಗ್ರಹಾಗಾರದಲ್ಲಿ 27.27 ಕೋಟಿ ರೂ. ವೆಚ್ಚದಲ್ಲಿ ಹೊಸ 26 ಎಂಎಲ್‌ಡಿ ಸಾಮರ್ಥ್ಯದ ಜಲ ಸಂಗ್ರಹಾಗಾರ ನಿರ್ಮಾಣ ಹಾಗೂ ಹಳೆ 4 ಎಂಜಿ ಮತ್ತು 6 ಎಂಜಿ ಜಲಸಂಗ್ರಹಾಗಾರಗಳ ದುರಸ್ತಿ ಕಾಮಗಾರಿಯನ್ನು ಹೈದ್ರಬಾದ್ ಮೂಲದ ಮೆ.ಡಿ.ಆರ್.ಎಸ್. ಇನಾ#†ಟೆಕ್ ಲಿ. ಕಂಪನಿಗೆ ವಹಿಸಿದೆ. ಈ ಕಾಮಗಾರಿಯಲ್ಲಿ 4 ಎಂ.ಜಿ. ಜಲ ಸಂಗ್ರಹಾಗಾರದ ದುರಸ್ತಿ ಕಾರ್ಯ ಮುಗಿದಿದ್ದು, ಫೆ.28ಕ್ಕೆ ಕಾರ್ಯಗತಗೊಳಿಸಲಾಗುವುದು.
ಇನ್ನುಳಿದ ಮೇಳಾಪುರ, ಹೊಂಗಳ್ಳಿ, ಬೆಳಗೊಳ,ಮತ್ತು ಕಬಿನಿ ನೀರು ಸರಬರಾಜು ಯೋಜನೆಗಳ 112.74 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಹೈದ್ರಬಾದ್‌ನ ಮೆ.ಪೂಚಮ್‌ಪಾಡ್ಡ್ ಕನ್ಸ$óಕ್ಷನ್ ಕಂ.ಲಿ ಗೆವಹಿಸಿದ್ದು, ಈ ಕಾಮಗಾರಿ ಪ್ರಗತಿಯಲ್ಲಿದೆ.
ಬಾಕಿ ಉಳಿದಿರುವ 66 ಕೆ.ವಿ ಸಾಮರ್ಥ್ಯದ ಸಬ್ ಸ್ಟೇಷನ್ ಮತ್ತು ಎಕ್ಸ್‌ಪ್ರೆಸ್ ಫೀಡರ್ ಕಾಮಗಾರಿಗಳಿಗೆ ಕೆಪಿಟಿಸಿಎಲ್ ನಿಂದ ಅಂದಾಜುಪಟ್ಟಿ ಪಡೆದು ಟೆಂಡರ್ ಪ್ರಕಟಣೆ ಹೊರಡಿಸಲಾಗುವುದು. ಈ ಎಲ್ಲಾ ಕಾಮಗಾರಿಗಳನ್ನು 2019ರ ಆಗಸ್ಟ್‌ನೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.