ಮಡಿಕೇರಿ: ನೀವು ಹಿಜಾಬ್ ಹಾಕಿಕೊಂಡಾದರು ಹೋಗಿ, ಬುರ್ಖಾ ಹಾಕಿಕೊಂಡಾದರು ಹೋಗಿ ಅಥವಾ ಪರದೆ ಅಕಾರದ ಟೋಪಿ ಬೇಕಾದರೂ ಹಾಕಿಕೊಂಡಾದರು ಹೋಗಿ ಅಥವಾ ಮೊಣಕಾಲು ಕಾಣುವಂತಹ ಜುಬ್ಬ ಪೈಜಾಬ ಹಾಕಿಕೊಂಡಾದರು ಹೋಗಿ. ನೀವು ಹೋಗಬೇಕಾದ ಸ್ಥಳ ಶಾಲಾ ಕಾಲೇಜಲ್ಲ, ಮದರಸಾ ಎಂದು ಕೊಡಗು, ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಅಥವಾ ಖಾಸಗಿ ಶಾಲಾ, ಕಾಲೇಜುಗಳಲ್ಲಿ ಶಿಕ್ಷಣ ವ್ಯವಸ್ಥೆಯಡಿ ಸಮವಸ್ತ್ರ ಇದೆ, ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು. ನಿಮ್ಮ ಮನಸೋ ಇಚ್ಛೆ ಇರ್ತೀನಿ ಅಂದ್ರೆ ಅದಕ್ಕೆ ಮದರಸಾ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಮ್ಮ ಧರ್ಮನೇ ಮುಖ್ಯ ಅನ್ನೋದಾದ್ರೆ 1947 ರಲ್ಲೇ ನಿಮಗೆ ಪ್ರತ್ಯೇಕ ದೇಶ ನೀಡಿದಾಗ ಅಲ್ಲಿಗೇ ಹೋಗಬಹುದಿತ್ತಲ್ಲ, ಇಲ್ಲಿ ಉಳಿದ ಮೇಲೆ ಈ ದೇಶದ ನೀತಿ ನಿಯಮಗಳನ್ನು ಪಾಲಿಸಿ, ಗೌರವಿಸಬೇಕು. 1947 ರಲ್ಲಿ ದೇಶವನ್ನು ವಿಭಜನೆ ಮಾಡಿ ಎರಡು ದೇಶವನ್ನು ನಿಮಗೇ ನೀಡಲಾಗಿತ್ತಲ್ಲ, ಅಲ್ಲಿಗೇ ತೊಲಗಬೇಕಾಗಿತ್ತು” ಎಂದರು.
ಗಣೇಶ, ಸರಸ್ವತಿ ಪೂಜೆ, ಕುಂಕುಮ, ಬಳೆಯ ಬಗ್ಗೆ ಮಾತನಾಡುವರರು ಮೊದಲು ತಿಳಿಯಬೇಕಾಗಿರುವುದು ಇದು ಬ್ರಿಟಿಷರ್ ಇಂಡಿಯಾ ಅಲ್ಲ ಎನ್ನುವುದನ್ನು. ಇದು ಭಾರತ, ಭಾರತದ ಬುನಾದಿಯೇ ಹಿಂದೂ ಧರ್ಮ, ಈ ದೇಶದ ಸಂಸ್ಕೃತಿಯನ್ನು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ. ಮುಸಲ್ಮಾನರು,ಕ್ರೈಸ್ತರು ನೆಲೆ ಹುಡುಕಿಕೊಂಡು ಈ ದೇಶಕ್ಕೆ ಬಂದವರು. ಸಂವಿಧಾನದಲ್ಲಿ ಸಮಾನ ಹಕ್ಕು ನಿಮಗೆ ನೀಡಲಾಗಿದೆ, ಆದರೆ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಪ್ರಶ್ನೆ ಮಾಡುವ ಹಕ್ಕು ನಿಮಗೆ ನೀಡಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ರವಿಕುಶಾಲಪ್ಪ ಹಾಗೂ ಮೂಡ ಅಧ್ಯಕ್ಷ ರಮೇಶ್ ಹೊಳ್ಳ ಉಪಸ್ಥಿತರಿದ್ದರು.