Advertisement

ಭಕ್ತರೇ ಸೂಕ್ತವಾದ ವಸ್ತ್ರ ಧರಿಸಿ ದೇಗುಲಕ್ಕೆ ಬನ್ನಿ

01:55 PM Dec 28, 2022 | Team Udayavani |

ಮೈಸೂರು: ಸರ್ಕಾರ ಕಟ್ಟುಪಾಡು ಜಾರಿಗೆ ತಂದು ಅನುಷ್ಠಾನಗೊಳಿಸುವ ಬದಲಿಗೆ, ಭಕ್ತರೇ ಸೂಕ್ತವಾದ ವಸ್ತ್ರ ಧರಿಸಿ ಚಾಮುಂಡೇಶ್ವರಿ ದೇಗುಲಕ್ಕೆ ಬನ್ನಿ ಎಂದು ಸಂಸದ ಪ್ರತಾಪ್‌ಸಿಂಹ ಮನವಿ ಮಾಡಿದರು.

Advertisement

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವ ವಿಚಾರವನ್ನು ಸಾರ್ವಜನಿಕರು ಹಲವು ಬಾರಿ ನನ್ನ ಗಮನಕ್ಕೂ ತಂದಿದ್ದಾರೆ. ಕೇರಳದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರೂ ಮಹಿಳೆಯರು ಕಡ್ಡಾಯವಾಗಿ ಸೀರೆ, ಪುರುಷರು ಪಂಚೆ, ಶಲ್ಯ ಧರಿಸಿರಬೇಕು ಎಂಬ ನಿಯಮವಿದೆ. ಹೀಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಭಕ್ತಿಯಿಂದ ಚಾಮುಂಡೇಶ್ವರಿ ದರ್ಶನ ಪಡೆಯಬೇಕೆಂದು ಸಂಘಟನೆಗಳು ನಡೆಸುತ್ತಿರುವ ಅಭಿಯಾನಕ್ಕೆ ನನ್ನ ಸಹಮತವಿದೆ. ಕಾನೂನಿನ ಮೂಲಕ ಇದನ್ನು ಅನುಷ್ಠಾನಗೊಳಿಸುವ ಬದಲಿಗೆ ಭಕ್ತರೇ ಆಚರಣೆಗೆ ತಂದರೆ ಸೂಕ್ತ ಎಂದರು.

ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿರುವುದಕ್ಕೆ ನಾವು ಭಯ ಪಡುವ ಅಗತ್ಯವಿಲ್ಲ. ಚೀನಾದಲ್ಲಿ ಕೋವಿಡ್‌ ಹೆಚ್ಚಾದ ಮಾತ್ರಕ್ಕೆ ಇಲ್ಲಿಗೆ ಭೂತ ಬಂತು ಭೂತ ಎನ್ನುವ ಕತೆ ಬೇಡ. ಚೀನಾದಲ್ಲಿನ ಪರಿಸ್ಥಿತಿಯೇ ಬೇರೆ, ನಮ್ಮ ಪರಿಸ್ಥಿತಿಯೇ ಬೇರೆ. ಚೀನಾದಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿಯುತ್ತಿಲ್ಲ. ಕೋವಿಡ್‌ ನಿಭಾಯಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಎರಡು ವರ್ಷಗಳ ಅನುಭವವಿದೆ. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ದೇಶಗಳಿಗಿಂತ ಮೊದಲೇ ಸ್ವದೇಶಿ ತಯಾರಿತ ಕೋವಿಡ್‌ ವ್ಯಾಕ್ಸಿನ್‌ ಕೊಡಿಸಿದ್ದರಿಂದ ಜನರು ಅಪಾಯದಿಂದ ಪಾರಾಗಿದ್ದಾರೆ. ಕೋವಿಡ್‌ ವಿಚಾರದಲ್ಲಿ ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ನಿಭಾಯಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಇದರಲ್ಲಿ ಅನಗತ್ಯವಾಗಿ ಯಾವುದೇ ರೀತಿಯ ಆತಂಕ ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next