ಮಂಗಳೂರು: ಮಂಗಳೂರು ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಡಿ.30 ರಂದು ಮಂಗಳೂರಿನಿಂದ ಚಾಲನೆ ಸಿಗಲಿಗೆ. ಆ ಹಿನ್ನೆಲೆ ಸಂಸದ ನಳಿನ್ ಕುಮಾರ್ ಕಟೀಲ್ ಡಿ.29ರ ಶುಕ್ರವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.
ಬಳಿಕ ಹೊಸದಾಗಿ ನಿರ್ಮಾಣವಾಗಿರುವ 4-5ನೇ ಫ್ಲಾಟ್ ಫಾರ್ಮ್ ಪರಿಶೀಲಿಸಿದರು. ಇದೇ ವೇಳೆ ನಿಲ್ದಾಣದ ಪಿಟ್ ಲೈನ್ ನಲ್ಲಿ ನಿಲ್ಲಿಸಲಾಗಿರುವ ವಂದೇ ಭಾರತ್ ರೈಲನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಕರಾವಳಿಯ ಎರಡು ನಗರಗಳನ್ನು ಬೆಸೆಯುವ ವಂದೇ ಭಾರತ್ ರೈಲು, ಪ್ರವಾಸೋದ್ಯಮ, ವಾಣಿಜ್ಯ, ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್, ಪಲಕ್ಕಾಡ್ ವಿಭಾಗದ ಡಿಆರ್ ಎಂ ಅರುಣ್ ಕುಮಾರ್ ಚತುರ್ವೇದಿ, ಎಡಿಆರ್ ಎಂ ಜಯಕೃಷ್ಣನ್, ಮನಪಾ ಸದಸ್ಯ ಶೈಲೇಶ್ ಶೆಟ್ಟಿ, ಮಂಗಳೂರು ನಗರ ದಕ್ಷಿಣ ಮಂಡಲ ಬಿಜೆಪಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ರೈಲ್ವೇ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.