Advertisement

ಹಣ, ಬಿರಿಯಾನಿ ಹೇಳಿಕೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ

03:30 PM Oct 26, 2021 | Team Udayavani |

ಬಂಗಾರಪೇಟೆ: ಶಾಸಕ ಎಸ್‌.ಎನ್‌. ನಾರಾಯಣ ಸ್ವಾಮಿ ಹಾಗೂ ಕೆಜಿಎಫ್ ಶಾಸಕಿ ರೂಪಾಕಲಾ ತಮ್ಮ ಕ್ಷೇತ್ರಗಳ ಅಭಿವೃದ್ಧಿಗಿಂತಲೂ ಬಿಜೆಪಿಸರ್ಕಾರದ ಮೇಲೆ ಗೂಬೆ ಕೂರಿಸುವುದರಲ್ಲಿಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ ಟೀಕಿಸಿದರು.

Advertisement

ಪಟ್ಟಣದಿಂದ ಕೆಜಿಎಫ್ವರೆಗೂ ಹದಗೆಟ್ಟಿರುವ ರಸ್ತೆಗೆ ಕಾಂಕ್ರೀಟ್‌ ತೇಪೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಈ ರಸ್ತೆ ಹಲವು ವರ್ಷಗಳಿಂದ ಗುಂಡಿಗಳಿಂದ ಕೂಡಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಹಲವು ಮಂದಿ ಅಪಘಾತಕ್ಕೆ ತುತ್ತಾಗಿದ್ದಾರೆ. ಅದಕ್ಕೆ ಮೋಕ್ಷ ಕಲ್ಪಿಸಲು ಇಬ್ಬರು ಶಾಸಕರಿಂದ ಸಾಧ್ಯವಾಗದೆ ಇದ್ದರೂ, ಬಿಜೆಪಿಸರ್ಕಾರದ ಮೇಲೆ ಕೆಸರು ಎರೆಚುವ ಕೆಲಸ ಮಾತ್ರ ನಾಜೂಕಾಗಿ ಮಾಡುತ್ತಿದ್ದಾರೆ ಎಂದು ದೂರಿದರು.

ಅಧಿವೇಶನದಲ್ಲಿ ಏಕೆ ಧ್ವನಿ ಎತ್ತಲಿಲ್ಲ: ಎಸ್ಪಿ ಕಚೇರಿ ಸ್ಥಳಾಂತರಿಸುವ ಬಗ್ಗೆ ಸರ್ಕಾರ ಹೇಳಿಲ್ಲ, ಆದರೂ, ರಾಜಕೀಯ ಲಾಭ ಪಡೆಯಲು ಸುಳ್ಳುವದಂತಿಗಳನ್ನು ಸೃಷ್ಟಿಸಿ ಜನರನ್ನು ದಾರಿತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇವರಿಗೆ ಎಸ್ಪಿ ಕಚೇರಿ ಸ್ಥಳಾಂತರವಾಗುವ ವಿಷಯ ಮೊದಲೇ ತಿಳಿದಿದ್ದರೆ, ವಿಧಾನಸಭೆ ಅಧಿವೇಶನದಲ್ಲಿ ಯಾಕೆ ಇವರು ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದರು.

ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ: ಕೆಜಿಎಫ್ ಶಾಸಕಿ ರೂಪಕಲಾ ಜನರಿಗೆ ಹಣ, ಬಿರಿಯಾನಿ ಕೊಟ್ಟುತಮ್ಮ ಸತ್ಯಾಗ್ರಹ ಸಭೆಯಲ್ಲಿ ಭಾಗವಹಿಸುವಂತೆ ಮಾಡಿದ್ದಕ್ಕೆ ನಾನು ಆಕ್ಷೇಪವ್ಯಕ್ತಪಡಿಸಿದೆ. ಆದರೆ,ಇದನ್ನು ಸಂಘಟನೆಗಳ ಮುಖಂಡರು ತಪ್ಪಾಗಿಅರ್ಥೈಸಿಕೊಂಡು ತಮ್ಮ ವಿರುದ್ಧ ಪ್ರತಿಭಟನೆಮಾಡುವುದರಲ್ಲಿ ಅರ್ಥವಿಲ್ಲ ಎಂದು ಸ್ಪಷ್ಟಪಡಿಸಿದರು.

ಜನರ ಒಳಿತಿಗೆ ಬಳಸಿ: ಕಾಂಗ್ರೆಸ್‌ನ ಇಬ್ಬರು ಶಾಸಕರಿಗೆ ಜನರಿಗಿಂತ ತಮ್ಮ ಅಭಿವೃದ್ಧಿಮುಖ್ಯವಾಗಿದೆ. ನಿಜವಾದ ಜನಪ್ರತಿನಿಧಿಗಳು ಜನರ ಸಮಸ್ಯೆ ಆಲಿಸಿ ಸ್ಪಂದಿಸಬೇಕು. ಇವರುಜನರ ಮುಂದೆ ಡ್ರಾಮ ಮಾಡುತ್ತಿದ್ದಾರೆ. ಜನರಿಂದ ಹಾಗೂ ಸರ್ಕಾರಿ ಜಮೀನನ್ನುಲಪಟಾಯಿಸಿ ಕೊಳ್ಳೆ ಹೊಡೆದಿರುವ ಹಣಲ್ಲವೆ, ಅದನ್ನು ಜನರ ಒಳಿತಿಗಾಗಿ ಬಳಸಿ ಎಂದು ಸಲಹೆ ನೀಡಿದರು.

Advertisement

ಐಜಿಪಿಯಿಂದಲೂ ಸ್ಪಷ್ಟಿಕರಣ: ಈಗಾಗಲೇಕೆಜಿಎಫ್ನಲ್ಲಿರುವ ಜಿಲ್ಲಾ ಎಸ್ಪಿ ಕಚೇರಿ ಬಗ್ಗೆಎದ್ದಿರುವ ಊಹಾಪೋಹಗಳ ಬಗ್ಗೆ ಸಿಎಂ ಮತ್ತುಗೃಹಮಂತ್ರಿ ಜೊತೆ ಚರ್ಚೆ ಮಾಡಲಾಗಿದೆ.ಯಾವುದೇ ಕಾರಣಕ್ಕೂ ಕೆಜಿಎಫ್ ಎಸ್ಪಿ ಕಚೇರಿಎತ್ತಂಗಡಿಯಾಗದು. ಐಜಿಪಿ ಅವರೂ ಟ್ವಿಟರ್‌ಮೂಲಕ ಸ್ಪಷ್ಟೀಕರಣ ನೀಡಿದ್ದಾರೆಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್‌, ಕೆಜಿಎಫ್ ನಗರ ಬಿಜೆಪಿ ಅಧ್ಯಕ್ಷ ಕಮಲ್‌ನಾಥ್‌,ಪುರಸಭೆ ಸದಸ್ಯ ಕಪಾಲಿ ಶಂಕರ್‌, ಪ್ರಭಾಕರ್‌ರಾವ್‌, ಯುವ ಮೋರ್ಚಾ ಅಧ್ಯಕ್ಷ ಬಿಂದುಮಾಧವ್‌, ಎಸ್‌ಸಿ ಮೋರ್ಚಾಧ್ಯಕ್ಷ ವೆಂಕಟೇಶ್‌,ಪ್ರಧಾನ ಕಾರ್ಯದರ್ಶಿ ಹೂವು ಆರ್‌.ಬಾಬು,ಬೆಂಗನೂರು ನಾರಾಯಣಗೌಡ, ದೊಡೂxರು ತ್ಯಾಗರಾಜ್‌, ಡಿ.ಕೆ.ಹಳ್ಳಿ ಗ್ರಾಪಂ ಸದಸ್ಯ ರಾಮಯ್ಯ, ದೋಣಿಮಡಗು ಮಂಜುನಾಥ್‌, ಆಲದಮರ ಬಾಬು, ಜೋಗಿ, ಎಸ್‌ಜಿ ಕೋಟೆ ಚಂದ್ರಶೇಖರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next