Advertisement

ಮಧ್ಯಪ್ರದೇಶ ಸ್ಥಳೀಯ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ

10:06 PM Jul 17, 2022 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದಿದ್ದ ಮೊದಲನೇ ಹಂತದ ಚುನಾವಣೆಯ ಫ‌ಲಿತಾಂಶ ಭಾನುವಾರ ಹೊರಬಿದ್ದಿದೆ.

Advertisement

11 ಮುನ್ಸಿಪಾಲ್‌ ಕಾರ್ಪೋರೇಷನ್‌ಗಳ ಪೈಕಿ ಬಿಜೆಪಿ ಐದು ಸ್ಥಾನಗಳಲ್ಲಿ ಗೆದ್ದು, ಗೆಲುವಿನ ನಗೆ ಬೀರಿದೆ. ಕಾಂಗ್ರೆಸ್‌ ಎರಡು ಸ್ಥಾನ ತನ್ನದಾಗಿಸಿಕೊಂಡಿದೆ. ಇದೇ ಮೊದಲ ಬಾರಿ ಆಮ್‌ ಆದ್ಮಿ ಪಕ್ಷವು ಒಂದು ಸ್ಥಾನದಲ್ಲಿ ಗೆದ್ದಿದೆ. ಆ ಮೂಲಕ ಎಎಪಿಯ ರಾಣಿ ಅಗರ್ವಾಲ್‌ ಸಿಂಗ್ರೌಲಿ ಕ್ಷೇತ್ರದ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಉಳಿದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದರೆ, ಒಂದರಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

ಸೋತ ನೋವಿನಲ್ಲೇ ಹೃದಯಾಘಾತ, ಸಾವು:
ಚುನಾವಣೆಯಲ್ಲಿ ಸೋತ ವಿಚಾರ ಕೇಳುತ್ತಿದ್ದಂತೆಯೇ ಅಭ್ಯರ್ಥಿ ಹೃದಯಾಘಾತಕ್ಕೀಡಾಗಿ, ಸಾವನ್ನಪ್ಪಿರುವ ಘಟನೆಯೂ ನಡೆದಿದೆ. ರೇವಾದ ಮುನ್ಸಿಪಾಲ್‌ ಕೌನ್ಸಿಲ್‌ನ ಕಾಂಗ್ರೆಸ್‌ ಅಭ್ಯರ್ಥಿ ಹರಿನಾರಾಯಣ ಗುಪ್ತಾ ಮೃತರು. ಅವರನ್ನು ಪಕ್ಷೇತರ ಅಭ್ಯರ್ಥಿ ಅಖೀಲೇಶ್‌ ಗುಪ್ತಾ ಅವರು 14 ಮತಗಳಿಂದ ಸೋಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next