Advertisement

ಗೋ ಸಚಿವಾಲಯ ಸ್ಥಾಪಿಸಿ: ಮಧ್ಯ ಪ್ರದೇಶ ಸಚಿವ ಒತ್ತಾಯ

04:25 PM Jun 20, 2018 | udayavani editorial |

ಭೋಪಾಲ : ಸಾಧುಗಳು ಮತ್ತು ಸನ್ಯಾಸಿಗಳಿಗೆ ಉನ್ನತ ರಾಜಕೀಯ ಹುದ್ದೆಗಳನ್ನು ಕೊಡುತ್ತಿದ್ದಾರೆಂಬ ಕಾರಣಕ್ಕೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಚೌಹಾಣ್‌ ತೀವ್ರ ಟೀಕೆಗೆ ಗುರಿಯಾಗಿರುವ ನಡುವೆಯೇ ಇದೀಗ ಅವರ ಕ್ಯಾಬಿನೆಟ್‌ ಸಚಿವ ಅಖೀಲೇಶ್ವರಾನಂದ ಅವರು ರಾಜ್ಯದಲ್ಲಿ ದನಗಳ ಸಂರಕ್ಷಣೆಗಾಗಿ “ಗೋ ಸಚಿವಾಲಯ’ ವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ. 

Advertisement

ಗೋ ರಕ್ಷಣಾ ಮಂಡಳಿಯ ಅಧ್ಯಕ್ಷರಾಗಿದ್ದ ಅಖೀಲೇಶ್ವರಾನಂದ ಅವರನ್ನು ಕಳೆದ ವಾರದಲ್ಲಷ್ಟೇ ಕ್ಯಾಬಿನೆಟ್‌ ಸಚಿವರನ್ನಾಗಿ ಮಾಡಲಾಗಿತ್ತು. 

”ನಾನು ಮಧ್ಯಪ್ರದೇಶದ ಗೋ ರಕ್ಷಣಾ ಮಂಡಳಿಯ ಅಧ್ಯಕ್ಷನಾಗಿ ತೋರಿರುವ ದಕ್ಷ ಕಾರ್ಯನಿರ್ವಹಣೆಯಿಂದಾಗಿ ತನಗೆ ಅರ್ಹತೆಯ ಆಧಾರದಲ್ಲಿ ಸಚಿವ ಪದ ನೀಡಲಾಗಿದೆ” ಎಂದು ಅಖೀಲೇಶ್ವರನಾಂದ ಹೇಳಿಕೊಂಡಿದ್ದರು. 

ರಾಜ್ಯದಲ್ಲಿ ಗೋ ಸಚಿವಾಲಯವನ್ನು ಸ್ಥಾಪಿಸಬೇಕೆಂದು ಸಚಿವ ಅಖೀಲೇಶ್ವರಾನಂದ ಅವರು ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಿಪಡಿಸಿದ್ದು ಅದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಇನ್ನೂ ಎಷ್ಟೋ ಗಂಭೀರ ಸಮಸ್ಯೆಗಳಿದ್ದು ಆ ಬಗ್ಗೆ ಸರಕಾರ ಚಿಂತಿಸಬೇಕಿದೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next