Advertisement

ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ಗುರಿಯಾಗಲಿ

04:14 PM Dec 24, 2020 | Suhan S |

ದಾವಣಗೆರೆ: ಜಿಲ್ಲಾ ಪಂಚಾಯತ್‌ ನೂತನ ಅಧ್ಯಕ್ಷರಿಗೆ ಇಡೀ ದಾವಣಗೆರೆಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಗುರಿಯಾಗಿರಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದ್ದಾರೆ.

Advertisement

ಬುಧವಾರ ಜಿಪಂ ಅಧ್ಯಕ್ಷರಾಗಿಆಯ್ಕೆಯಾಗಿ ಕೆ.ವಿ. ಶಾಂತಕುಮಾರಿಅವರನ್ನು ಅಭಿನಂದಿಸಿ ಮಾತನಾಡಿದಅವರು, ವಾಸ್ತವಿಕವಾಗಿ ನೀವು ಜಿಪಂನಒಂದು ಕ್ಷೇತ್ರವನ್ನು ಪ್ರತಿನಿಧಿ ಸಿದರೂಕೂಡ ಇಡೀ ದಾವಣಗೆರೆ ಜಿಲ್ಲೆಯಸರ್ವತೋಮುಖ ಅಭಿವೃದ್ಧಿ ನಿಮ್ಮ ಗುರಿಯಾಗಿರಲಿ ಎಂದರು.

ದೊರೆತಿರುವ ಕನಿಷ್ಠ ಅವಧಿಯಲ್ಲಿ ಗರಿಷ್ಠ ಮಟ್ಟದ ಕೆಲಸ ಮಾಡಿ ತೋರಿಸುವ ಎಲ್ಲಾ ಅವಕಾಶ ನಿಮಗಿದೆ. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಕೆಲಸ ಮಾಡಿ. ಅಧ್ಯಕ್ಷರನ್ನಾಗಿ ಮಾಡಿರುವ ನಮಗೂ ಮತ್ತು ಸಮಾಜಕ್ಕೂ ಹೆಸರು ಬರುವಂತೆ ಮಾಡಿ ಎಂದು ಕಿವಿಮಾತು ಹೇಳಿದರು.

ಸಾಕಷ್ಟು ಅನುದಾನ ಜಿಪಂಗೆ ಹರಿದು ಬರುತ್ತವೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಸರಿದೂಗಿಸಿಕೊಂಡುಹೋಗಿ. ನಾನು ಲೋಕಸಭಾಚುನಾವಣೆ ಸಮಯದಲ್ಲಿ ನಿಮ್ಮನ್ನುಒಂದು ಅವಧಿಗೆ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಕೊಟ್ಟ ಮಾತಿನಂತೆ ನಮ್ಮ ಎಲ್ಲಾ ಶಾಸಕರ ಹಾಗೂ ಜಿಪಂ ಸದಸ್ಯರಸಹಕಾರದೊಂದಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೇನೆ ಎಂದರು.

ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ, ಆರೋಗ್ಯ ಕ್ಷೇತ್ರದತ್ತ ಹೆಚ್ಚಿನಗಮನ ಹರಿಸಿ. ಕೆರೆ ತುಂಬಿಸುವಯೋಜನೆಗಳು ಪ್ರಗತಿಯಲ್ಲಿದ್ದು,ಅವುಗಳ ಪರಿಣಾಮಕಾರಿ ಅನುಷ್ಠಾನದತ್ತ ಹೆಚ್ಚಿನ ಗಮನ ನೀಡಿ ಎಂದು ತಿಳಿಸಿದರು.

Advertisement

ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿ, ಸಂಸದರು ಕೊಟ್ಟ ಮಾತಿಗೆ ಎಂದೂ ತಪ್ಪುವವರಲ್ಲ. ಜಗಳೂರು ತಾಲೂಕಿಗೆ ಅಧ್ಯಕ್ಷಸ್ಥಾನ ದೊರಕಿಸಿಕೊಟ್ಟಿರುವುದಕ್ಕಾಗಿಜಗಳೂರು ತಾಲೂಕಿನ ಸಮಸ್ತಜನತೆಯ ಪರವಾಗಿ ಹಾಗೂ ಯಾದವ ಸಮಾಜದ ಪರವಾಗಿ ಅಭಿನಂದನೆಸಲ್ಲಿಸುತ್ತೇನೆ ಎಂದರು.

ಯಾದವ ಸಮಾಜದ ಭೀಮಸಮುದ್ರದ ಸಿದ್ದಣ್ಣ, ಐಗೂರು ತಿಪ್ಪಣ್ಣ, ಹಿರೇಗುಂಟನೂರು ಕ್ಷೇತ್ರದ ತಾಪಂ ಸದಸ್ಯ ಸುರೇಶ್‌, ಹೊಳಲ್ಕೆರೆಪಟ್ಟಣ ಪಂಚಾಯತ್‌ ಸದಸ್ಯ ಕೆ.ಸಿ.ರಮೇಶ್‌, ಜಿಪಂ ಸದಸ್ಯರಾದಕೆಂಚಮ್ಮನಹಳ್ಳಿ ಮಂಜುನಾಥ್‌, ಮುಖಂಡರಾದ ಟಿ.ಎಸ್‌. ಜಗದೀಶ್‌,ಟಿ.ವಿ. ರಾಜು. ಸೋಮನಹಳ್ಳಿ ಶ್ರೀನಿವಾಸ್‌ ಇತರರು ಇದ್ದರು.

ಜಿಲ್ಲೆಯಲ್ಲಿ ಯಾದವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿದ್ದರೂಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದಜಿಪಂ ಅಧ್ಯಕ್ಷ ಸ್ಥಾನವನ್ನು ಯಾದವಸಮಾಜದವರಿಗೆ ನೀಡಿದ್ದಕ್ಕೆ ಯಾದವಸಮಾಜದ ಜಿಲ್ಲಾ ಮುಖಂಡರುಇದೇ ಸಂದರ್ಭದಲ್ಲಿ ಸಂಸದ ಸಿದ್ದೇಶ್ವರಹಾಗೂ ಶಾಸಕ ಎಸ್‌.ವಿ. ರಾಮಚಂದ್ರ ಅವರನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next