ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ, ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಮತ್ತು ಅ ಧಿಕಾರಿಗಳ ತಂಡ ಸೋಮವಾರ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿದರು.
ಶಿವಾಲಿ ಚಿತ್ರಮಂದಿರ, ಹಿಂದೂ ರುದ್ರಭೂಮಿ, ಗಾಂ ಧಿ ನಗರ ವೃತ್ತ, ಅಂಬೇಡ್ಕರ್ ವೃತ್ತ, ಬಾಷಾನಗರ, ಎಸ್‌ಪಿಎಸ್ ನಗರ, ಯಲ್ಲಮ್ಮ ನಗರ, ಕುಂದವಾಡ ಕೆರೆ ಹಾಗೂ ಸುತ್ತಮುತ್ತ ಪ್ರದೇಶದಲ್ಲಿನ ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು. ವಿವಿಧ ಭಾಗದಲ್ಲಿ ಕಾಮಗಾರಿ ವಿಳಂಬ, ಕಳಪೆ ಕಾಮಗಾರಿ ಗಮನಿಸಿ ಅಧಿಕಾರಿಗಳು ಮತ್ತು ಸಂಬಂಧಿತ ಗುತ್ತಿಗೆದಾರರನ್ನು ಸಂಸದರು ತರಾಟೆಗೆ ತೆಗೆದುಕೊಂಡರು.
ರಿಂಗ್ ರಸ್ತೆಯಲ್ಲಿ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿಯಲ್ಲಿ ಸ್ಲಾಬ್‌ಗಳು ಬಿದ್ದಿರುವುದನ್ನು ಕಂಡು ಕುಪಿತಗೊಂಡ ಅವರು, ಗುಣಮಟ್ಟದದ ಕಾಮಗಾರಿ ಕೈಗೊಳ್ಳಬೇಕು. ಅರ್ಧಂಬರ್ಧ ಕಾಮಗಾರಿ ನಡೆಸಿದರೆ ಹೇಗೆ ಎಂದು ಇಂಜಿನಿಯರ್‌ಗೆ ತರಾಟೆಗೆ ತೆಗೆದುಕೊಂಡರು. ಜಲಸಿರಿ ಕಾಮಗಾರಿ ವಿಳಂಬದಿಂದ ಟ್ಯಾಂಕ್ ಕೆಲಸ ಎಂಟು ತಿಂಗಳಾದರೂ ಮುಗಿಯುತ್ತಿಲ್ಲ. ಇತರೆ ತೊಂದರೆ ಬಗ್ಗೆ ಸಾರ್ವಜನಿಕರು ಗಮನ ಸೆಳೆದಾಗ, ಜಲಸಿರಿ ಯೋಜನೆ ಕಾಮಗಾರಿ ಬಹಳ ಆಮೆಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ತ್ವರಿತಗತಿಯಲ್ಲಿ ಕೆಲಸ ಮಾಡಬೇಕು ಎಂದು ಜಲಸಿರಿ ಯೋಜನೆ ಇಂಜಿನಿಯರ್‌ಗೆ ಸೂಚಿಸಿದರು.
ಕಾಮಗಾರಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಸ್ಮಾಟ್ ìಸಿಟಿ ಯೋಜನೆಯ ಕಾಮಗಾರಿಗಳು ಸಮರ್ಪಕ ಹಾಗೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಶಿವಾಲಿ ಟಾಕೀಸ್ ಸುತ್ತಮುತ್ತ ಇರುವ ಒಳಚರಂಡಿ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅಲ್ಲಿ ವಾಸಿಸುವ ಜನರು ಕಸ-ಕಡ್ಡಿಗಳನ್ನು ಎಲ್ಲೆಂದರಲ್ಲಿಯೇ ಎಸೆಯುತ್ತಿರುವುದರಿಂದ ಮಾಲಿನ್ಯ ಉಂಟಾಗಿ ರೋಗ-ರುಜಿನ ಹೆಚ್ಚುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸ್ವತ್ಛತೆಯ ಕೆಲಸವಾಗಬೇಕಾಗಿದೆ. ಅಧಿ ಕಾರಿಗಳು ಜನರಲ್ಲಿ ಸ್ವತ್ಛತೆಯ ಕುರಿತು ಅರಿವು ಮೂಡಿಸಬೇಕು. 2021ರಲ್ಲಿ ಮುಗಿಯಬೇಕಿದ್ದ ಜಲಸಿರಿ ಯೋಜನೆಯ ಕಾಮಗಾರಿಯನ್ನು 2022 ರೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಒಂದು ವೇಳೆ ಈ ಕಾಮಗಾರಿಗಳು ತ್ವರಿತ ಗತಿಯಲ್ಲಿ ನಡೆಯದಿದ್ದರೆ ಸಂಬಂಧಿ ಸಿದ ಅಧಿ ಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕುಂದುವಾಡ ಕೆರೆ ಕಾಮಗಾರಿ ಭರದಿಂದ ಸಾಗುತ್ತಿದೆ. ಹೆಚ್ಚು ಪ್ರಮಾಣದಲ್ಲಿ ನೀರು ಸಂಗ್ರಹದೊಂದಿಗೆ ಕೆರೆಯ ಸೌಂದಯೀìಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಾಗರಿಕರಿಗೆ ಸಾಕಷ್ಟು ನೀರು ಒದಗಿಸಲಾಗುತ್ತಿದೆ. ಹಾಗೂ ಬೆಳಗಿನ ವಾಯುವಿಹಾರಕ್ಕೆ ಉತ್ತಮ ಪರಿಸರವಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕುಂದವಾಡ ಕೆರೆಯ ಪಶ್ಚಿಮ ಭಾಗದಲ್ಲಿ ನೀರು ಸೋರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಎಚ್. ಡಿ.ಇ.ಪಿ ಪ್ಲಾಸ್ಟಿಕ್ ಅಳವಡಿಸಲಾಗಿದೆ. ಕೆರೆಯ ಸುತ್ತಮುತ್ತ ಇರುವ ಕಾರ್ಖಾನೆ, ಹೊಲ-ಗದ್ದೆ ಗಳಿಂದ ಬರುವ ಕಲುಷಿತ ನೀರನ್ನು ಕೆರೆಗೆ ಹರಿಸದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಮುಂದಿನ ದಿನಗಳಲ್ಲಿ 10 ದಿನಗಳಿಗೊಮ್ಮೆ ಅಧಿ ಕಾರಿಗಳು ಮೂರು-ನಾಲ್ಕು ತಂಡ ರಚಿಸಿಕೊಂಡು ನಗರದ ಸುತ್ತಮುತ್ತ ಸಂಚರಿಸಿ ಕಾಮಗಾರಿ ಹಾಗೂ ಸ್ವತ್ಛತೆ ಕುರಿತು ಪರಿಶೀಲನೆ ನಡೆಸಿ ತಮಗೆ ವರದಿ ನೀಡಬೇಕು ಎಂದರು. ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಡಿ. ಮಲ್ಲಾಪುರ ಇದ್ದರು