ಬೆಂಗಳೂರು: ಡಿ ಕೆ ಶಿವಕುಮಾರ್ ಅವರ ಫೋನ್ ಕದ್ದಾಲಿಕೆ ವಿಚಾರ ಕೇವಲ ಆರೋಪವಲ್ಲ. ಇದು ಸತ್ಯ. ರಾಜ್ಯ ಸರ್ಕಾರ ಇದನ್ನು ಮೊದಲು ಪರಿಗಣಿಸಬೇಕು. ಇಲ್ಲವಾದರೆ ನಾನೇ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ದಿನಗಳಿಂದ ಫೋನ್ ಡಿಸ್ಟರ್ಬೆನ್ಸ್ ಬರುತ್ತಿದೆ. ಕೆಲವರು ದೂರು ಕೊಡುವಂತೆ ಹೇಳಿದ್ದರು. ಅದಕ್ಕೆ ಈಗ ದೂರು ಕೊಟ್ಟಿದ್ದಾರೆ. ಫೋನ್ ಟ್ಯಾಪಿಂಗ್ ಮಾಡುವುದರಲ್ಲಿ ಬಿಜೆಪಿಯವರು ಎಕ್ಸ್ ಫರ್ಟ್ ಎಂದು ಸುರೇಶ್ ಹೇಳಿದರು.
ಬೇರೆಯವರ ಮೇಲೆ ಹಾಕಿ ಬಿಜೆಪಿಯವರು ತಪ್ಪಿಸಿಕೊಳ್ಲುವುದಲ್ಲ. ಒಂದು ಪಕ್ಷದ ಅಧ್ಯಕ್ಷರು ಇದನ್ನುಗಂಭೀರವಾಗಿ ಹೇಳಿದ್ದಾರೆ. ಇದನ್ನು ಲಘುವಾಗಿ ಪರಿಗಣಿಸೋಕೆ ಸಾಧ್ಯವಿಲ್ಲ. ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹಗರಣ ಮಾಡೋಕೆ ಅವಕಾಶವಿಲ್ಲ. ಇದರ ಬಗ್ಗೆ ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಗೃಹ ಸಚಿವರು ಲಘುವಾಗಿ ಮಾತನಾಡಬಾರದು ಎಂದರು.
ಇದನ್ನೂ ಓದಿ: ಡಿಕೆ ಶಿವಕುಮಾರ್ ಬೆಳಗಾವಿ-ಬಾಗಲಕೋಟೆ ನೆರೆ ವೀಕ್ಷಣೆ ಪ್ರವಾಸ ರದ್ದು
ಡಿಜೆ ಹಳ್ಳಿ ಪ್ರಕರಣಕ್ಕೂ ಟ್ಯಾಪಿಂಗ್ ಪ್ರಕರಣಕ್ಕೂ ಸಂಬಂಧವಿಲ್ಲ. ಡಿಜೆ ಹಳ್ಳಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ವಾಸ್ತವಾಂಶ ಬೇರೆ ಇದೆ. ಬಿಬಿಎಂಪಿ ಚುನಾವಣೆಗಳು ಬರುತ್ತಿವೆ. ಅದಕ್ಕೆ ಇಲ್ಲಿನ ಬಿಜೆಪಿ ನಾಯಕರು ಈ ರೀತಿ ಮಾಡುತ್ತಿದ್ದಾರೆ. ಅದಕ್ಕೆ ಪೊಲೀಸರ ಮೇಲೆ ಒತ್ತಡ ತರುತ್ತಿದ್ದಾರೆ. ಸಾವಿನ ಮೇಲೆ ಹೆಣದ ರಾಜಕೀಯ ಮಾಡಿದ್ದರು, ಈಗ ಈ ಪ್ರಕರಣವನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಡಿ.ಕೆ.ಸುರೇಶ್ ಆರೋಪ ಮಾಡಿದ್ದಾರೆ.