ಇಂದೋರ್ : ವಿವಾದಿತ ಸ್ವಯಂಘೋಷಿತ ದೇವಮಾನವ ನಾಮದೇವ್ ದಾಸ್ ತ್ಯಾಗಿ ‘ಕಂಪ್ಯೂಟರ್ ಬಾಬಾ’ ಶನಿವಾರ ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದು ಬಿಜೆಪಿ ವ್ಯಾಪಕ ಟೀಕಾ ಪ್ರಹಾರ ನಡೆಸಿದೆ.
ಈ ಹಿಂದೆ ಅತಿಕ್ರಮಣ ಪ್ರಕರಣದಲ್ಲಿ ಬಂಧಿತರಾಗಿರುವಂತಹ ಆರೋಪಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂದು ಆಡಳಿತಾರೂಢ ಬಿಜೆಪಿ ಪ್ರಶ್ನಿಸಿದೆ.
ಬೆಳಗ್ಗೆ ಅಗರ್ ಮಾಲ್ವಾ ಜಿಲ್ಲೆಯ ಮಹುದಿಯಾ ಗ್ರಾಮದಲ್ಲಿ ತ್ಯಾಗಿ ಯಾತ್ರೆಯಲ್ಲಿ ಗಾಂಧಿ ಜೊತೆಗೂಡಿದರು. ಅವರು ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರೊಂದಿಗೆ ಸಂವಾದ ನಡೆಸುತ್ತಿದ್ದರು ಮತ್ತು ಅವರೊಂದಿಗೆ ಕೆಲವು ನಿಮಿಷಗಳ ಕಾಲ ಹೆಜ್ಜೆ ಹಾಕಿದರು.
ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಮಾಜಿ ಸಚಿವ ರಾಜ್‌ಕುಮಾರ್ ಪಟೇಲ್, ಹಲವಾರು ದಾರ್ಶನಿಕರು ಮತ್ತು ಧಾರ್ಮಿಕ ಮುಖಂಡರು ಭಾರತ್ ಜೋಡೋ ಯಾತ್ರೆಯ ಭಾಗವಾಗುತ್ತಿದ್ದಾರೆ. ದೇಶದ ಹಿತದೃಷ್ಟಿಯಿಂದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಸ್ವಾಗತವಿದೆ ಎಂದಿದ್ದಾರೆ.
Related Articles
ಇಂದೋರ್ ಬಳಿಯ ಅವರ ಆಶ್ರಮದಲ್ಲಿ ಆಪಾದಿತ ಅಕ್ರಮ ನಿರ್ಮಾಣವನ್ನು ಕೆಡವುವ ಮೊದಲು ಪ್ರಕರಣವೊಂದರಲ್ಲಿ ಆರೋಪದ ಮೇಲೆ ತ್ಯಾಗಿ ಅವರನ್ನು 2020 ರಲ್ಲಿ ಬಂಧಿಸಲಾಗಿತ್ತು.