Advertisement

ಮಧ್ಯಪ್ರದೇಶ; ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನೇನ್ ಭರವಸೆ ಇದೆ ಗೊತ್ತಾ?

06:27 PM Nov 10, 2018 | Sharanya Alva |

ಮಧ್ಯಪ್ರದೇಶ: ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಶನಿವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರತಿಯೊಂದು ಗ್ರಾಮ ಪಂಚಾಯ್ತಿ ಪ್ರದೇಶದಲ್ಲಿ ಗೋಶಾಲೆ ಸ್ಥಾಪನೆ, ರೈತರ ವಿದ್ಯುತ್ ದರ ಕಡಿತ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.

Advertisement

ವಚನ್ ಪತ್ರ್ ತಲೆಬರಹದಡಿಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿ 50 ಸಬ್ ಕ್ಯಾಟಗರಿ ಮಾಡಿ,ಅದರಲ್ಲಿ 973 ಅಂಶಗಳನ್ನು ಸೇರಿಸುವ ಮೂಲಕ ಭರ್ಜರಿ ಭರವಸೆಗಳನ್ನು ನೀಡಿದೆ ಎಂದು ವರದಿ ತಿಳಿಸಿದೆ.

ರೈತರಿಗೆ ವಿದ್ಯುತ್ ಬಿಲ್ ನಲ್ಲಿ ಶೇ.50ರಷ್ಟು ದರ ಕಡಿತ ಮಾಡಲಾಗುವುದು, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ಪ್ರತಿ ಗ್ರಾಮ ಪಂಚಾಯ್ತಿ ಪ್ರದೇಶದಲ್ಲಿ ಗೋ ಶಾಲೆ ಸ್ಥಾಪನೆ, ಕೃಷಿ ಸಾಲ ಮನ್ನಾ ಮಾಡುವುದು ಸೇರಿದಂತೆ ಹಲವು ಪ್ರಮುಖ ಅಂಶಗಳಿವೆ ಎಂದು ಪ್ರಣಾಳಿಕೆ ಬಿಡುಗಡೆ ನಂತರ ಮಧ್ಯಪ್ರದೇಶ ಕಾಂಗ್ರೆಸ್ ವರಿಷ್ಠ ಕಮಲ್ ನಾಥ್ ತಿಳಿಸಿರುವುದಾಗಿ ಎ ಎನ್ ಐ ವರದಿ ತಿಳಿಸಿದೆ.

ರಾಜ್ಯ ಹಾಗೂ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಇರುವ ರೈತರ ಸಾಲ ಮನ್ನಾ ಮಾಡಲಾಗುವುದು, 17 ಬೆಳೆಗಳಿಗೆ ಬೋನಸ್, ಪ್ರತಿ ಕುಟುಂಬದ ನಿರುದ್ಯೋಗಿ ಸದಸ್ಯನಿಗೆ 10 ಸಾವಿರ ರೂಪಾಯಿ ನೀಡಲಾಗುವುದು, ಹುಡುಗಿಯ ಮದುವೆಗೆ 51 ಸಾವಿರ ರೂಪಾಯಿ ಧನಸಹಾಯ,  ರಾಮವನ ಗಮನ ಪಥ ನಿರ್ಮಾಣ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next