Advertisement

ಪಾರ್ಟಿ ಗಯೀ ತೇಲ್‌ ಲೇನೆ: ಮ.ಪ್ರ. ಕೈ ಶಾಸಕನಿಂದ ಪಕ್ಷಕ್ಕೆ ಅವಮಾನ

03:47 PM Oct 23, 2018 | udayavani editorial |

ಇಂದೋರ್‌ : ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಶಾಸಕರೋರ್ವರು ತನ್ನ ಪಕ್ಷವನ್ನೇ ಅವಮಾನಿಸುತ್ತಾ ತನಗೆ ಮತ ಹಾಕುವಂತೆ ಮತದಾರರನ್ನು ಓಲೈಸಿದ ವಿಡಿಯೋ ಚಿತ್ರಿಕೆಯೊಂದು ವೈರಲ್‌ ಆಗಿದೆ.

Advertisement

ಕಾಂಗ್ರೆಸ್‌ ಶಾಸಕ ಜಿತು ಪಟ್ವಾರಿ ಅವರು “ಮೇರಾ ಖಯಾಲ್‌ ರಖ್ನಾ, ಮೇರಿ ಇಜ್ಜತ್‌ ರಖ್ನಾ, ಪಾರ್ಟಿ ಗಯೀ ತೇಲ್‌ ಲೇನೇ (ಪಕ್ಷವನ್ನು (ಕಾಂಗ್ರೆಸ್‌) ಬದಿಗಿಡಿ; ನನಗೆ ಮತಹಾಕಿ, ನನ್ನ ಮಾನ ಕಾಪಾಡಿ)’ ಎಂದು ತನ್ನ ಪಕ್ಷವನ್ನೇ ಅವಮಾನಿಸುತ್ತಾ ಮತದಾರರಲ್ಲಿ  ಮತಕ್ಕಾಗಿ ಮನವಿ ಮಾಡುವ ವಿಡಿಯೋ ಚಿತ್ರಿಕೆಯು ಇದೀಗ ಕಾಂಗ್ರೆಸ್‌ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದೆ. 

ಶಾಸಕ ಪಟ್ವಾರಿ ಅವರು ಮನೆಮನೆಗೆ ತೆರಳಿ ಮತದಾರರನ್ನು ಅವರ ಮನೆ ಬಾಗಿಲಲ್ಲೇ ಭೇಟಿಯಾಗಿ ತನಗಾಗಿ ಮತ ಯಾಚಿಸುವಾಗ ಈ ಮಾತುಗಳನ್ನು ಹೇಳಿದ್ದಾರೆ. ವಿಶೇಷವೆಂದರೆ ಪಟ್ವಾರಿ ಅವರಿ ಮಧ್ಯ ಪ್ರದೇಶ ಕಾಂಗ್ರೆಸ್‌ ಕಾರ್ಯಾಧ್ಯಕ್ಷರೂ ಹಾಲಿ ಶಾಸಕರೂ ಆಗಿದ್ದಾರೆ.

ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಕಾಂಗ್ರೆಸ್‌ ಪಕ್ಷಕ್ಕೆ ವೈರಲ್‌ ಆಗಿರುವ ಶಾಸಕ ಪಟ್ವಾರಿ ಅವರ ವಿಡಿಯೋ ಇರಿಸುಮುರಿಸು ಉಂಟು ಮಾಡಿದೆ ಮತ್ತು ಆ ಕಾರಣಕ್ಕಾಗಿ ಅದು ಪಟ್ವಾರಿ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next