ಭೋಪಾಲ್ : ಭಾರತ್ ಬಂದ್ ಪ್ರಯುಕ್ತ ಮಧ್ಯಪ್ರದೇಶದಲ್ಲಿ ಇಂದು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು; ಆದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರನ ಹೂವಿನ ಮಳಿಗೆ ಬಿಗಿ ಭದ್ರತೆಯ ಬಲದಲ್ಲಿ ತೆರೆದುಕೊಂಡಿತ್ತು.
“ನಾವು ಮುಖ್ಯಮಂತ್ರಿಗಳ ಮಗನ ಹೂವಿನ ಮಳಿಗೆಗೆ ಭದ್ರತೆ ನೀಡಲು ಇಲ್ಲಿ ನಿಂತಿಲ್ಲ; ಕಾನೂನು ಮತ್ತು ಶಿಸ್ತನ್ನು ಒಟ್ಟಾರೆಯಾಗಿ ಕಾಪಿಡುವ ಸಲುವಾಗಿ ಇಲ್ಲಿಯ ಸಮಗ್ರ ಪ್ರದೇಶದಲ್ಲಿ ನಿಂತಿದ್ದೇವೆ’ ಎಂದು ಪೊಲೀಸರು ಹೇಳಿದರು.
ಬಾಲಕಿ ಸಾವು : ಬಿಹಾರದಲ್ಲಿ ಪ್ರತಿಭಟನಕಾರರಿಂದ ವಾಹನವೊಂದು ತಡೆಯಲ್ಪಟ್ಟ ಕಾರಣ ತ್ವರಿತವಾಗಿ ಆಸ್ಪತ್ರೆಗೆ ದಾಖಲಾಗಬೇಕಿದ್ದ ವಾಹನದಲ್ಲಿದ್ದ ಎರಡು ವರ್ಷ ಪ್ರಾಯದ ಬಾಲಕಿ ಕೊನೆಯುಸಿರೆಳೆದ ಘಟನೆ ನಡೆಯಿತು.
ದಿಲ್ಲಿಯ ರಾಮ ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆಳುವ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಎಲ್ಲ ವಿರೋಧ ಪಕ್ಷಗಳು ಒಂದಾಗಿ ನಿಂತಿವೆ ಎಂದು ಹೇಳಿಕೊಂಡರು. ಆದರೆ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಗೈರಾಗಿರುವುದು ಎದ್ದು ಕಾಣುತ್ತಿತ್ತು.
ವಿರೋಧ ಪಕ್ಷಗಳ ಭಾರತ್ ಬಂದ್ ಬಗ್ಗೆ ಬಿಜೆಪಿ ನಾಯಕ ಸಚಿವ ರವಿ ಶಂಕರ್ ಪ್ರಸಾದ್ “ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ ನಿಜ. ಆದರೆ ಇವತ್ತು ಏನಾಗುತ್ತಿದೆ. ಪೆಟ್ರೋಲ್ ಪಂಪ್‌ಗ್ಳನ್ನು ಬಸ್ಸುಗಳನ್ನು ಸುಟ್ಟು ಹಾಕಲಾಗುತ್ತಿದೆ; ಜನರ ಜೀವಕ್ಕೆ ಅಪಾಯ ಉಂಟುಮಾಡಲಾಗುತ್ತಿದೆ; ಭಾರತ್ ಬಂದ್ ವಿಫಲವಾಗಿದೆ’ ಎಂದು ಹೇಳಿದರು.
ವಿವಾದಾತ್ಮಕ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಭಾರತ್ ಬಂದ್ ನಲ್ಲಿ ಭಾಗವಹಿಸಿದ್ದಾರೆ.