ಚಿಕ್ಕೋಡಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ನೆರವು ನೀಡುವುದರ ಜೊತೆಗೆ ನೇರವಾಗಿ ಸೋಂಕಿತರ ಜೊತೆ ಸಂವಾದ ನಡೆಸಿ ಮನೋಬಲ ಹೆಚ್ಚಿಸುವುದರ ಮೂಲಕ ಮಾದರಿ ಜನಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ.
ಮಂಗಳವಾರ ನಿಪ್ಪಾಣಿಯಲ್ಲಿನ ಪಬ್ಲಿಕ್ ಸ್ಕೂಲ್ ಕೋವಿಡ್ ಉಪಚಾರ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರನ್ನು ನೇರವಾಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಗಮನ ಸೆಳೆದರು.
ಕೋವಿಡ್ ಉಪಚಾರ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಸಂಸದ ಜೊಲ್ಲೆ ಅವರು ಪಿಪಿಇ ಕಿಟ್ ಧರಿಸಿ ಸೋಂಕಿತರೊಂದಿಗೆ ಅರ್ಧ ಗಂಟೆ ಕಾಲ ಸಂವಾದ ನಡೆಸಿದರು. ರೋಗಿಗಳ ಆರೋಗ್ಯದ ಬಗ್ಗೆ ವಿಚಾರಿಸಿ, ವೈದ್ಯರಿಂದ ರೋಗಿಗಳ ಆರೋಗ್ಯದ ಮಾಹಿತಿ ಪಡೆದರು.
ಗಡಿ ಭಾಗದಲ್ಲಿ ಜೊಲ್ಲೆ ಚಾರಿಟಿ ಫೌಂಡೇಶನ್ ವತಿಯಿಂದ ಆರಂಭಿಸಿರುವ ಕೋವಿಡ್ ಕೇಂದ್ರಗಳಿಗೆ ಆಗಾಗ ಭೇಟಿ ನೀಡುತ್ತಿದ್ದೆ. ಆದರೆ ನೇರವಾಗಿ ಸೋಂಕಿತರ ವಾರ್ಡ್‌ಗೆ ಹೋಗಿ ಸೋಂಕಿತರೊಂದಿಗೆ ಸಂವಾದ ಮಾಡಿರಲಿಲ್ಲ. ಆದರೆ ಮಂಗಳವಾರ ನೇರವಾಗಿ ಸೋಂಕಿತರ ಆರೋಗ್ಯ ವಿಚಾರಿಸಿದೆ. ಧೈರ್ಯದಿಂದ ಕೊರೊನಾ ಗೆಲ್ಲಬೇಕೆಂದು ಹೇಳಿದಾಗ ಸೋಂಕಿತರ ಮೊಗದಲ್ಲಿ ಉಲ್ಲಾಸ ಕಂಡು ಸಂತಸವಾಯಿತು. ಸೋಂಕಿತರಿಗೆ ಅವಶ್ಯಕವಾಗಿ ಬೇಕಾಗಿರುವ ಊಟ. ಮಾತ್ರೆ ಕೊರತೆ ಆಗದಂತೆ ವೈದ್ಯರಿಗೆ ಸೂಚಿಸಿದ್ದೇನೆ ಎಂದರು.
ಡಾ. ಸಂಜಯ್ ಬಾಳೇಕುಂದ್ರಿ, ಡಾ. ಹರ್ಷಲ್ ಜಾಧವ, ಡಾ. ಜ್ಯೋತಿಬಾ ಚೌಗುಲೆ, ಡಾ. ಸಂಗೀತಾ ದೇಶಪಾಂಡೆ ಹಾಗೂ ವೈದ್ಯಕೀಯ ಸಿಬ್ಬಂದಿ ಇದ್ದರು.