Advertisement

Lok Sabha Elections; ಮತ್ತೆ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ ಸಂಸದ ಅನಂತ್‌ ಹೆಗಡೆ

10:22 PM Jan 08, 2024 | Team Udayavani |

ಯಲ್ಲಾಪುರ: ಕೆಲವು ವೈಯಕ್ತಿಕ ಕಾರಣದಿಂದ ಕಾರ್ಯಕರ್ತರಿಂದ ದೂರ ಉಳಿಯುವಂತಾಗಿತ್ತು¤. ಮುಂದಿನ ದಿನಗಳಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ. ನಿಮ್ಮ ಸಹಕಾರವನ್ನೂ ಬಯಸುತ್ತೇನೆ. ಬೆಂಬಲಿ ಸುತ್ತೀರಿ ಎಂಬ ನಂಬಿಕೆಯಿದೆ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ. ಈ ಮೂಲಕ ಮತ್ತೂಮ್ಮೆ ಅವರು ಲೋಕಸಭೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

Advertisement

ಸೋಮವಾರ ಹಳಿಯಾಳಕ್ಕೆ ತೆರಳುವ ವೇಳೆ ಯಲ್ಲಾಪುರಕ್ಕೆ ಬಂದಿದ್ದ ಅವರು ಕಾರ್ಯಕರ್ತರ ಜತೆ ಮಾತನಾಡಿದರು. ಕಾರ್ಯಕರ್ತ ರೊಂದಿಗೆ ಮೊದಲಿನಂತೆ ಉಳಿಯಲು ಸಾಧ್ಯವಾಗಿಲ್ಲ ಎಂಬ ನೋವಿದೆ. ದಯಮಾಡಿ ಯಾರೂ ಇದನ್ನು ತಪ್ಪಾಗಿ ಭಾವಿಸಬೇಡಿ. ಮುಂದಿನ ದಿನಗಳಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ. ನಿಮ್ಮ ಸಹಕಾರವನ್ನೂ ಬಯಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿಯೇ ಗೆಲ್ಲಲಿದೆ. ಬಿಜೆಪಿ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದರು.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸ ‌ಬೇಕೆಂದು ಬೆಂಬಲಿಗರು ಮನೆಗೆ ಬಂದು ಒತ್ತಾಯಿಸಿದ ಬೆನ್ನಲ್ಲೇ ಸಂಸದ ಹೆಗಡೆ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿರುವುದು ಕುತೂಹಲ ಮೂಡಿಸಿದೆ. ಆದರೆ ಉತ್ತರಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬ ಬಗ್ಗೆ ಏನನ್ನೂ ಹೇಳಲಿಲ್ಲ.

ಈ ಹಿಂದೆ ಚುನಾವಣೆ ರಾಜಕೀಯ ದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದ ಅವರು, ಯಲ್ಲಾಪುರಕ್ಕೆ ಬಂದಿರುವ ಸುದ್ದಿ ತಿಳಿಯುತ್ತಲೇ ನೂರಾರು ಕಾರ್ಯಕರ್ತರು ಪ್ರವಾಸಿ ಮಂದಿರಕ್ಕೆ ಆಗಮಿಸಿ ಅವರನ್ನು ಭೇಟಿ ಮಾಡಿದರು. ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ ಹೆಗಡೆ, ಬಳಿಕ ಕೆಲವರ ಮನೆಗಳಿಗೂ ಭೇಟಿ ನೀಡಿದ್ದಾರೆ.

ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್‌, ವಿವಿಧ ಸ್ಥರದ ಪ್ರಮುಖರಾದ ರಾಮಚಂದ್ರ ಚಿಕ್ಯಾನಮನೆ, ಶ್ರುತಿ ಹೆಗಡೆ, ಚಂದ್ರಕಲಾ ಭಟ್ಟ, ಕಲ್ಪನಾ ಗಜಾನನ ನಾಯ್ಕ, ಸುಬ್ಬಣ್ಣ ಉದ್ದಾಬೈಲ್‌, ನರಸಿಂಹ ಬೋಳಪಾಲ್‌, ರೇಖಾ ಹೆಗಡೆ, ಪ್ರದೀಪ್‌ ಯಲ್ಲಾಪುರಕರ್‌, ರಾಧಾ ಗುಡಿಗಾರ್‌, ವೀಣಾ ಯಲ್ಲಾಪುರಕರ್‌, ನಟರಾಜ ಗೌಡರ್‌, ಸುರೇಶ ಶಾನಭಾಗ, ನಾರಾಯಣ ನಾಯಕ, ನಮೀತಾ ಬೀಡಿಕರ್‌ ಮತ್ತಿತರರಿದ್ದರು.

Advertisement

ಕಾರ್ಯಕಾರಿಣಿ ದಿಢೀರ್‌ ರದ್ದು
ಈ ಮಧ್ಯೆ ಪಟ್ಟಣದ ಅಡಿಕೆ ಭವನದಲ್ಲಿ ಸೋಮವಾರ ಬೆಳಗ್ಗೆ ನಡೆಯಬೇಕಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಹಠಾತ್ತಾಗಿ ರದ್ದುಗೊಂಡಿದೆ. ವರಿಷ್ಠರ ಸೂಚನೆಯಂತೆ ಸಭೆ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾ ಘಟಕ ತಿಳಿಸಿದೆ. ಸಂಸದ ಅನಂತಕುಮಾರ್‌ ಹೆಗಡೆ ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಯಾವ ಹಿನ್ನೆಲೆಯಲ್ಲಿ ಸಭೆ ರದ್ದಾಯಿತು ಎಂಬುದು ತಿಳಿದಿಲ್ಲ. ಆದರೆ ಹಳಿಯಾಳಕ್ಕೆ ಹೋಗುವ ಮುನ್ನ ಸಂಸದ ಹೆಗಡೆ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿ ಮಾತನಾಡಿ ಹೋಗಿದ್ದಾರೆ. ಸಂಸದರು ಬರುತ್ತಿದ್ದಂತೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಪ್ರವಾಸಿ ಮಂದಿರದಲ್ಲಿ ಜಮಾಯಿಸಿದ್ದರು. ಬಹಳ ದಿನಗಳ ಬಳಿಕ ಸಂಸದರ ಈ ಭೇಟಿ ಅಚ್ಚರಿ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next