ಕೊಚ್ಚಿ: ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಮಲಯಾಳಂ ಮೂಲದ ಬಹುಭಾಷಾ ನಟಿಯೊಬ್ಬರನ್ನು ಐವರು ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿ, ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಇಲ್ಲಿನ ಅಂಗಮಾಲಿ ಸಮೀಪದ ಅಥನಿಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಶೂಟಿಂಗ್ ಮುಗಿಸಿ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಎರ್ನಾಕುಳಂನಲ್ಲಿ ಶೂಟಿಂಗ್ ಮುಗಿಸಿದ್ದ ಈ ನಟಿ ಕಾರಿನಲ್ಲಿ ತೃಶ್ಶೂರ್ ಕಡೆಗೆ ಹೊರಟಿದ್ದರು. ರಾತ್ರಿ 10ರ ಸುಮಾಧಿರಿನಲ್ಲಿ ಅಥನಿ ಸಮೀಪದಲ್ಲಿ ಕಾರಿಗೆ ಹಿಂಬದಿಯಿಂದ ಟೆಂಪೋ ಟ್ರಾವೆಧಿಲರ್ ಅನ್ನು ಉದ್ದೇಶಧಿಪೂರ್ವಧಿಕವಾಗಿ ಢಿಕ್ಕಿ ಹೊಡೆಸಲಾಗಿದೆ. ಕಾರಿನ ಚಾಲಕ ಜಗಳಕ್ಕಿಳಿದಾಗ ಆತನನ್ನು ಕೆಳಗೆ ಹಾಕಿ, ದುಷ್ಕರ್ಮಿಗಳು ನಟಿ ಇದ್ದ ಕಾರನ್ನೇರಿ ಅಪಹರಿಸಿದ್ದಾರೆ. ಕಾರು ಚಲಾಯಿಸುತ್ತಲೇ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ ದುಷ್ಕರ್ಮಿಗಳು ಎರಡು ತಾಸು ನಗರವನ್ನು ಸುತ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.
ಪಲರಿವಟ್ಟಮ್‌ನಲ್ಲಿ ದುಷ್ಕರ್ಮಿಗಳು ಬೇರೊಂದು ಕಾರನ್ನು ಏರಿ ಪರಾರಿಯಾಗಿದ್ದಾರೆ. ತಡರಾತ್ರಿಯಲ್ಲಿ ಈ ನಟಿ ಸ್ವತಃ ಡ್ರೈವ್ ಮಾಡಿ ಸಮೀಪದ ತ್ರಿಕ್ಕಾಕರದಲ್ಲಿರುವ ನಿರ್ದೇಶಕ ಲಾಲ್ ಅವರ ಮನೆಗೆ ಹೋಗಿ ಅಲ್ಲಿ ರಕ್ಷಣೆ ಪಡೆದರು. ಶನಿವಾರ ಬೆಳಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾರಿನ ಮಾಜಿ ಡ್ರೈವರ್ ಸುನೀಲ್ ಕುಮಾರ್ ಈ ಕೃತ್ಯ ಎಸಗಿದ್ದಾನೆಂದು ಅನುಮಾನಿಸಲಾಗಿದೆ. ಡಿಜಿಪಿ ಲೋಕನಾಥ್ ಬೆಹೆರಾ ಜಂಟಿ ತನಿಖಾ ತಂಡವನ್ನು ರಚಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ಮಾರ್ಟಿನ್‌ನನ್ನು ಬಂಧಿಸಿ, ವಿಚಾರಣೆ ಗೊಳಪಡಿಸಿದ್ದಾರೆ. ಮಾರ್ಟಿನ್‌ನ ಫೋನ್ ಕರೆ ಪರಿಶೀಲಿಸಿದಾಗ ದುಷ್ಕೃತ್ಯವೆಸಗಿರುವ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಡಿಯೋ, ಫೋಟೋ ಸೆರೆ: ಒಂದೂ ವರೆ ತಾಸು ಕಿರುಕುಳದ ವೇಳೆ ನಟಿಯ ವಿಡಿಯೋ ರೆಕಾರ್ಡ್ ಮಾಡಿರುವ ದುಷ್ಕರ್ಮಿಗಳು, ಕೆಲವು ಫೋಟೋ ಗಳನ್ನೂ ತೆಗೆದುಕೊಂಡಿದ್ದಾರೆ ಎಂದು ಆಕೆ ದೂರಿನಲ್ಲಿ ಹೇಳಿದ್ದಾರೆ. ಬ್ಲ್ಯಾಕ್ಮೇಲ್ ಮಾಡುವ ದುರುದ್ದೇಶದಿಂದಲೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಘಟನೆಯನ್ನು ಕೇರಳದ ಎಲ್ಲ ರಾಜಕೀಯ ಪಕ್ಷಗಳೂ ತೀವ್ರವಾಗಿ ಖಂಡಿಸಿವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಈಕೆ ನಟಿಸಿದ್ದಾರೆ.