Advertisement

Movies: ಚಿತ್ರೋತ್ಸವಗಳಲ್ಲಿ ಸಿನೆಮಾಗಳೇ ಮೆರೆಯಬೇಕು-ಟಿ.ಎಸ್‌. ನಾಗಾಭರಣ

11:35 AM Nov 24, 2023 | Team Udayavani |

ಪಣಜಿ: ಚಿತ್ರೋತ್ಸವಗಳಲ್ಲಿ ವಾಸ್ತವ ವಾಗಿ ಸಿನೆಮಾಗಳು ಮೆರೆಯಬೇಕೇ ಹೊರತು ಯಾವುದೇ ವ್ಯಕ್ತಿಗಳಲ್ಲ. ಆದರೆ ಇಂದಿನ ಚಿತ್ರೋತ್ಸವಗಳಲ್ಲಿ ಯಾವುದು ಆಗಬಾರದೋ ಅದೇ ಹೆಚ್ಚಾಗುತ್ತಿದೆ. ಇದು ಆರೋಗ್ಯಕರವಾದುದಲ್ಲ ಎಂದು ಖ್ಯಾತ ಚಿತ್ರ ನಿರ್ದೇಶಕ ಹಾಗೂ ಇಫಿ ಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದ ಆಯ್ಕೆ ಸಮಿತಿ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.

Advertisement

ಇಫಿ ಚಿತ್ರೋತ್ಸವದಲ್ಲಿ ಭಾಗಿಯಾಗಿ ರುವ ಅವರು “ಉದಯವಾಣಿ’ಯೊಂ ದಿಗೆ ಮಾತನಾಡುತ್ತಾ, ಚಿತ್ರೋತ್ಸವಗಳಲ್ಲಿ ಅದ್ಭುತ ಸಿನೆಮಾಗಳನ್ನು ಮೆರೆಸಬೇಕು. ಸಿನೆಮಾ ನಿರ್ದೇಶಕರು, ತಂತ್ರಜ್ಞರು-ಹೀಗೆ ಸಮಗ್ರ ಸಿನೆಮಾ ವರ್ಗದವರಿಗೆ ಪ್ರಾಮು ಖ್ಯ ಸಿಗಬೇಕು. ಆದರೆ ಈಗ ಸ್ಟಾರ್‌ಗಳ ಪ್ರದರ್ಶನ ನಡೆಯುತ್ತಿದೆ. ದುಡ್ಡುಕೊಟ್ಟು ಸ್ಟಾರ್‌ ಗಳನ್ನು ಕರೆಸುವ ಚಾಳಿ ಬೆಳೆ ಯುತ್ತಿದೆ. ಇವೆಲ್ಲವೂ ಚಿತ್ರೋತ್ಸವಗಳ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರು.

ಇಂಥ ಹಲವು ಅನಾರೋಗ್ಯಕರ ಬೆಳವಣಿಗೆಗಳಿಂದ ಚಿತ್ರೋತ್ಸವಗಳು ತಮ್ಮ ಮೂಲೋದ್ದೇಶದಿಂದ ವಿಮುಖ ವಾಗ ತೊಡಗಿವೆ. ಒಳ್ಳೆಯ ಸಿನೆಮಾಗಳನ್ನು ಉಳಿಸಲು ಹುಟ್ಟಿಕೊಂಡ ಚಿತ್ರೋ ತ್ಸವಗ ಳನ್ನು ನಮ್ಮ ಕೈಯಿಂದ ಜಾರದಂತೆ ನೋಡಿ ಕೊಳ್ಳಬೇಕಿದೆ. ಈಗಲೇ ಎಚ್ಚರ ವಹಿಸಿದರೆ ಸಾಧ್ಯವಾಗಬಹುದು. ಹಾಗಾಗಿ ಅದು ಎಷ್ಟರಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆಯಿ ದ್ದರೂ ಉಳಿಸಿಕೊಳ್ಳುವುದರತ್ತ ಕ್ರಿಯಾಶೀ ಲವಾಗುವುದೇ ಮುಖ್ಯ ಎಂದರು. “ಈ ಮಾತು ಇಫಿಗೂ ಅನ್ವಯಿಸುತ್ತದೆ. ಚಿತ್ರೋತ್ಸವಗಳು ಈಗ ಸಾಗುತ್ತಿರುವ ಹಾದಿಯಲ್ಲೇ ಸಾಗಿದರೆ ಇನ್ನು ಕೆಲವೇ ವರ್ಷಗಳಲ್ಲಿ ಒಂದಿಷ್ಟು ಖಾಸಗಿ ವಾಹಿನಿ ಗಳ, ಕಾರ್ಪೊರೇಟ್‌ ಕಂಪೆನಿಗಳ ಸ್ವತ್ತಾಗಿ ಬಿಡುತ್ತದೆ. ಇದರಲ್ಲಿ ಯಾವುದೇ ಸಂದೇ ಹವಿಲ್ಲ. ಈ ಹಿನ್ನೆಲೆಯಲ್ಲಿ ಉತ್ಸವಗಳನ್ನು ಉಳಿಸಿಕೊಳ್ಳಲು ಪ್ರಯತ್ನ ಶೀಲರಾಗು ವುದೊಂದೇ ಇರುವ ಮಾರ್ಗ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.

ಚಿತ್ರೋತ್ಸವಗಳು ಆರಂಭವಾಗಿದ್ದು ಸ್ವತಂತ್ರ ನಿರ್ದೇಶಕರ ಸಿನೆಮಾಗಳಿಗೆ ವೇದಿಕೆ ಕಲ್ಪಿಸಲು. ಅಂಥದೊಂದು ಪ್ರಬಲ ಸಿನೆಮಾ ಚಳವಳಿಯ ಭಾಗವಾಗಿ ಹುಟ್ಟಿಕೊಂಡಿದ್ದು. ಆದರೆ ಇಂದು ಯಾವುದನ್ನು ಮಾಡಬಾರದಿತ್ತೋ ಅದನ್ನೇ ಮಾಡುತ್ತಿವೆ. ಕೆಲವು ಖಾಸಗಿ ಕಂಪೆನಿಗಳ ಸಾಧನಗಳಾಗಿ ಬಳಕೆಯಾ ಗತೊಡಗಿವೆ. ಇದನ್ನು ತಡೆಯುವ ಅಗತ್ಯ ತುರ್ತಿನದು ಎಂದು ಪ್ರತಿಪಾದಿಸಿದರು.
ಭಾರತೀಯ ಭಾಷೆಗಳಲ್ಲಿ ಒಳ್ಳೆಯ ಸಿನೆಮಾಗಳಿಗೆ ಕೊರತೆಯಿಲ್ಲ. ಆದರೆ ಅದನ್ನು ಬಿಂಬಿಸುವ ಅವಕಾಶಗಳು ಕಡಿಮೆಯಾಗುತ್ತಿರುವುದು ನಿಜ. ಇದಕ್ಕೆ ಪರ್ಯಾಯ ಮಾರ್ಗವನ್ನೂ ಹುಡುಕಿ ಕೊಳ್ಳಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಆ ನಿಟ್ಟಿನಲ್ಲಿ ಕೆಲವರು ಕಾರ್ಯಪ್ರವೃತ್ತರಾಗಿ¨ªಾರೆ ಎಂದು ನಾಗಾಭರಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next