Advertisement

Movies: ಓಶೋ ರಜನೀಶ್‌ ಪಾತ್ರ ಮಾಡಬೇಕೆಂಬ ಆಶಯ- ನವಾಜುದ್ದೀನ್‌ ಸಿದ್ದಿಕಿ

12:13 AM Nov 26, 2023 | Team Udayavani |

ಓಶೋ ರಜನೀಶ್‌ ಅವರ ಪಾತ್ರ ಮಾಡಬೇಕೆಂಬ ಆಶಯ ಹೊಂದಿದ್ದೇನೆ ಎಂದು ನವಾಜುದ್ದೀನ್‌ ಸಿದ್ದಿಕಿ ತಿಳಿಸಿದ್ದಾರೆ. ಇಲ್ಲಿ ನಡೆಯುತ್ತಿ ರುವ ಇಫಿ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿ ದರು. ಈಗಾಗಲೇ ಹಲವಾರು ರೀತಿಯ ಪಾತ್ರಗಳನ್ನು ಮಾಡಿದ್ದೇನೆ.

Advertisement

ಓಶೋ ಅವರ ಪಾತ್ರ ಮಾಡಬೇಕೆಂದು ಬಹಳ ಸಮಯದಿಂದ ಕಾಯುತ್ತಿದ್ದೇನೆ. ಈಗಂತೂ ಚಿತ್ರರಂಗ ಸಾಕಷ್ಟು ಬೆಳೆದಿದೆ. ಸಣ್ಣ ಸಣ್ಣ ಹಳ್ಳಿಗಳಿಂದಲೂ ಉತ್ತಮ ಚಿತ್ರಗಳು ಬರುತ್ತಿವೆ. ಅಂದರೆ ನಗರದಲ್ಲಿ ಇಲ್ಲ ಎಂದಲ್ಲ. ಆದರೆ ಉತ್ತಮವಾದ ಹೊಸ ಬೆಳವಣಿಗೆಯೊಂದು ನಡೆಯುತ್ತಿದೆ ಎಂದರು. ನಾನು ಯಾವತ್ತೂ ಪಾತ್ರಗಳ ಹಿಂದೆ ಹೋಗುತ್ತೇನೆ. ಸ್ಟಾರ್‌ಗಳಿಗಿಂತ ಹೆಚ್ಚಾಗಿ ಪಾತ್ರಗಳೇ ಮುಖ್ಯ. ಚಿತ್ರಕಥೆಯ ಆಯ್ಕೆಯ ವೇಳೆ ಪಾತ್ರಕ್ಕಿರುವ ಸಾಧ್ಯತೆಯನ್ನು ನೋಡಿ ಆಯ್ಕೆ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next