Advertisement

IMDbಯ 2024 ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ: ಸ್ಥಾನ ಪಡೆದ ಕನ್ನಡದ ಏಕೈಕ ಸಿನಿಮಾ

04:23 PM Jan 09, 2024 | Team Udayavani |

ಮುಂಬಯಿ: ಈ ವರ್ಷ ಸಿನಿರಂಗದಲ್ಲಿ ನೂರಾರು ಸಿನಿಮಾಗಳು ತೆರೆ ಕಾಣಲಿವೆ. ವರ್ಷದ ಆರಂಭದಲ್ಲೇ ಪ್ರಮುಖವಾಗಿ ದಕ್ಷಿಣ ಸಿನಿಮಾರಂಗದ ಕಾಲಿವುಡ್‌, ಟಾಲಿವುಡ್‌ ನಲ್ಲಿ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲಿವೆ.

Advertisement

ಸಿನಿಮಾಗಳಿಗೆ ರೇಟಿಂಗ್‌ ನೀಡುವ ಐಎಂಡಿಬಿ ಈ ವರ್ಷ ತೆರೆ ಕಾಣುವ ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ರಿಲೀಸ್‌ ಮಾಡಿದೆ. ಇದರಲ್ಲಿ ಕನ್ನಡದ  ಒಂದೇ ಒಂದು ಸಿನಿಮಾ ಸ್ಥಾನ ಪಡೆದುಕೊಂಡಿದೆ.

ಫೈಟರ್:‌ ಈ ಸಿನಿಮಾದಲ್ಲಿ ಹೃತಿಕ್‌ ರೋಷನ್‌, ದೀಪಿಕಾ ಪಡುಕೋಣೆ ಹಾಗೂ ಅನಿಲ್‌ ಕಪೂರ್‌ ನಟಿಸಿದ್ದಾರೆ. ಇದೇ  ಜ.25 ರಂದು ಸಿನಿಮಾ ತೆರೆ ಕಾಣಲಿದೆ.

ಪುಷ್ಪ-2: ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ, ಫಾಹದ್‌ ಫಾಸಿಲ್‌ ಸೇರಿದಂತೆ ಇತರೆ ಪ್ರಮುಖರು ನಟಿಸಿರುವ ʼಪುಷ್ಪ-2ʼ  ಆಗಸ್ಟ್‌ 15 ರಂದು ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ರಿಲೀಸ್‌ ಆಗಲಿದೆ.

ವೆಲ್‌ ಕಮ್‌ ಟು ದಿ ಜಂಗಲ್:‌  ಅಹ್ಮದ್ ಖಾನ್ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರೀಕ್ಷೆ ಹುಟ್ಟಿಸಿರುವ ಬಾಲಿವುಡ್‌ ನ ಈ ಸಿನಿಮಾ ಡಿ.20 ರಂದು ರಿಲೀಸ್ ಆಗಲಿದೆ.

Advertisement

ಸಿಂಗಂ ಅಗೈನ್‌: ರೋಹಿತ್‌ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ʼಸಿಂಗಂ ಅಗೈನ್‌ʼ ಸಿನಿಮಾದಲ್ಲಿ  ಅಜಯ್‌ ದೇವಗನ್‌,ಅಕ್ಷಯ್‌ ಕುಮಾರ್‌,ದೀಪಿಕಾ ಪಡುಕೋಣೆ,ಟೈಗರ್‌ ಶ್ರಾಫ್,ರಣ್ವೀರ್‌ ಕಪೂರ್‌  ಮುಂತಾದ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್‌ 15 ರಂದು ಸಿನಿಮಾ ರಿಲೀಸ್‌ ಆಗಗುವ ಸಾಧ್ಯತೆಯಿದೆ.

ಕಲ್ಕಿ 2898 AD : ಈ ವರ್ಷದ ಬಹುದೊಡ್ಡ ಹಾಗೂ ದುಬಾರಿ ಸಿನಿಮಾಗಳಲಿ ಕಲ್ಕಿ ʼ2898 AD ʼ ಸಿನಿಮಾ ಕೂಡ ಒಂದು. ನಾಗ್‌ ಅಶ್ವಿನ್‌ ಅವರ ಈ ಸಿನಿಮಾದಲ್ಲಿ ಪ್ರಭಾಸ್‌‌, ಅಮಿತಾಭ್‌ ಬಚ್ಚನ್‌, ದೀಪಿಕಾ, ಕಮಲ್‌ ಹಾಸನ್‌, ದಿಶಾ ಪಟಾನಿ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಇದರ ಅಧಿಕೃತ ರಿಲೀಸ್‌ ಡೇಟ್‌ ಇನ್ನಷ್ಟೇ ಹೊರಬೀಳಬೇಕಿದೆ.

ಬಘೀರ: ಈ ಸಾಲಿನಲ್ಲಿ ಸೇರಿಕೊಂಡಿರುವ ಕನ್ನಡದ ಏಕೈಕ ಸಿನಿಮಾ ʼಬಘೀರʼ ಶ್ರೀಮುರಳಿ ಅಭಿನಯದ ಮಾಸ್‌ ಸಿನಿಮಾ ಸಿಕ್ಕಾಪಟ್ಟೆ ಹೈಪ್‌ ಹೆಚ್ಚಿಸಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಬಘೀರʼದ ಟೀಸರ್‌ ಇತ್ತೀಚೆಗೆ ರಿಲೀಸ್‌ ಆಗಿ ಸಖತ್‌ ಸದ್ದು ಮಾಡಿದೆ. ಶ್ರೀಮುರಳಿ ಖಾಕಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್‌ ನೀಲ್‌ ʼಬಘೀರʼ ಕಥೆ ಬರೆದಿದ್ದು, ಡಾ.ಸೂರಿ ನಿರ್ದೇಶನ ಮಾಡಿದ್ದಾರೆ. ರಿಲೀಸ್‌ ಡೇಟ್‌ ಇನ್ನಷ್ಟೇ ಅನೌನ್ಸ್‌ ಆಗಬೇಕಿದೆ.

ಹನುಮಾನ್:‌ ತೇಜಾ ಸಜ್ಜಾ ಅವರ ಬಹು ನಿರೀಕ್ಷಿತ ಅಡ್ವೆಂಚರ್‌ – ಫ್ಯಾಂಟಸಿ ʼಹನುಮಾನ್‌ʼ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್‌ ಆಗಲಿದೆ. ಈಗಾಗಲೇ ತನ್ನ ಟ್ರೇಲರ್‌ ನಿಂದಲೇ ಗಮನ ಸೆಳೆದಿರುವ ಈ ಸಿನಿಮಾ ಇದೇ ಜ.12 ರಂದು ಅದ್ಧೂರಿಯಾಗಿ ತೆರೆ ಕಾಣಲಿದೆ. ಅಮೃತಾ ಅಯ್ಯರ್ · ವರಲಕ್ಷ್ಮಿ ಶರತ್ ಕುಮಾರ್ ವಿನಯ್ ರೈ ಮುಂತಾದವರು ನಟಿಸಿದ್ದಾರೆ.

ಬಡೇ ಮಿಯಾನ್ ಛೋಟೆ ಮಿಯಾನ್: ಬಾಲಿವುಡ್‌ ಸಿನಿರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್ ಅಭಿನಯದ ʼ ಬಡೇ ಮಿಯಾನ್ ಛೋಟೆ ಮಿಯಾನ್ʼ ಸಿನಿಮಾ ಕೂಡ ಒಂದು. ಏ.10 ರಂದು ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

ಕಂಗುವ: ಸೂರ್ಯ ವೃತ್ತಿ ಬದುಕಿನಲ್ಲಿ ಬಹುದೊಡ್ಡ ಸಿನಿಮಾಗಳಲ್ಲಿ ಒಂದಾಗಿರುವ ಶಿವ ನಿರ್ದೇಶನದ ʼಕಂಗುವʼ ತನ್ನ ಪೋಸ್ಟರ್‌ ಹಾಗು ಲುಕ್‌ ಗಳಿಂದಲೇ ಸಿಕ್ಕಾಪಟ್ಟೆ ಹೈಪ್‌ ಹುಟ್ಟಿಸಿದೆ. ಸೂರ್ಯ, ಬಾಬಿ ಡಿಯೋಲ್‌, ದಿಶಾ ಪಟಾನಿ ಮುಂತಾದವರು ಕಾಣಿಸಿಕೊಳ್ಳಲಿದ್ದು, ಇದರ ರಿಲೀಸ್‌ ಡೇಟ್‌ ಇನ್ನಷ್ಟೇ ಅನೌನ್ಸ್‌ ಆಗಬೇಕಿದೆ.

ದೇವರ ಪಾರ್ಟ್‌ -1: ಜೂ.ಎನ್‌ ಟಿಆರ್‌ ಅಭಿನಯದ ʼದೇವರ ಪಾರ್ಟ್‌ -1ʼ ಈ ವರ್ಷ ತೆರೆ ಕಾಣಲಿರುವ ಬಹುದೊಡ್ಡ ಸಿನಿಮಾಗಳಲ್ಲೊಂದು. ಜೂ.ಎನ್‌ ಟಿಆರ್‌, ಜಾಹ್ನವಿ ಕಪೂರ್‌, ಸೈಫ್‌ ಆಲಿಖಾನ್‌ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಕೊರಟಾಲ ಶಿವ  ಅವರ ನಿರ್ದೇಶನ ಸಿನಿಮಾಕ್ಕಿದೆ. ಏ.5 ರಂದು ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿದೆ.

ಚಾವಾ: ವಿಕ್ಕಿ ಕೌಶಲ್‌ – ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ರಿಲೀಸ್‌ ಡೇಡ್‌ ಇನ್ನಷ್ಟೇ ಅನೌನ್ಸ್ ಆಗಬೇಕಿದೆ.

ಗುಂಟೂರು ಖಾರಂ: ಮಹೇಶ್‌ ಬಾಬು, ಶ್ರೀಲೀಲಾ ಅಭಿನಯದ ʼಗುಂಟೂರು ಖಾರಂʼ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದೆ. ನಿರೀಕ್ಷೆಯಂತೆ ಟ್ರೇಲರ್‌ ಗೆ ಅಮೋಘ ರಸ್ಪಾನ್ಸ್‌ ಸಿಕ್ಕಿದೆ. ಇದೇ ಜ.12 ರಂದು ಸಿನಿಮಾ ಅದ್ಧೂರಿಯಾಗಿ ತೆರೆ ಕಾಣಲಿದೆ.

ಮಲೈಕೊಟ್ಟೈ ವಾಲಿಬನ್: ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ಅವರ ಈ ಸಿನಿಮಾ ಇದೇ ಜ.25 ರಂದು ತೆರೆ ಕಾಣಲಿದೆ.

ಮೇರಿ ಕ್ರಿಸ್ಮಸ್: ವಿಜಯ್ ಸೇತುಪತಿ- ಕತ್ರಿನಾ ಕೈಫ್‌ ಜೊತೆಯಾಗಿ ಕಾಣಸಿಕೊಂಡಿರುವ ಬಹು ನಿರೀಕ್ಷಿತ ʼಮೇರಿ ಕ್ರಿಸ್ಮಸ್‌ʼ ಇದೇ ಜ.12 ರಂದು ರಿಲೀಸ್‌ ಆಗಲಿದೆ.

ಕ್ಯಾಪ್ಟನ್‌ ಮಿಲ್ಲರ್:‌ ಟ್ರೇಲರ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಧನುಷ್‌ – ಶಿವರಾಜ್‌ ಕುಮಾರ್‌ ಅವರ ʼಕ್ಯಾಪ್ಟನ್‌ ಮಿಲ್ಲರ್‌ʼ ಇದೇ ಜ.12 ರಂದು ರಿಲೀಸ್ ಆಗಲಿದೆ.

ತಂಗಲಾನ್:‌ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಪಾ ರಂಜಿತ್‌ ಅವರ , ವಿಕ್ರಮ್‌ ಅಭಿನಯದ ʼ ತಂಗಲಾನ್ʼ ಸಿನಿಮಾ ಕೂಡ ಒಂದು.ಇದೇ ತಿಂಗಳ 26 ರಂದು ಸಿನಿಮಾ ತೆರೆ ಕಾಣಲಿದೆ.

ಇಂಡಿಯನ್‌ -2: ಶಂಕರ್‌ – ಕಮಲ್‌ ಹಾಸನ್‌ ಅವರ ʼಇಂಡಿಯನ್‌ -2ʼ ಅನೌನ್ಸ್‌ ಆದ ದಿನದಿಂದಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ಅಧಿಕೃತ ರಿಲೀಸ್‌ ಡೇಟ್‌ ಇನ್ನಷ್ಟೇ ಹೊರಬೀಳಬೇಕಿದೆ.

ಯೋಧ: ಸಿದ್ದಾರ್ಥ್‌ ಮಲ್ಹೋತ್ರಾ ಅಭಿನಯದ ಹಿಂದಿಯ ʼಯೋಧʼ ಮಾರ್ಚ್‌ 15 ರಂದು ತೆರೆ ಕಾಣಲಿದೆ.

ಮೈ ಅಟಲ್​ ಹು: ವಾಜಪೇಯಿ ಬಯೋಪಿಕ್‌ ಆಗಿರುವ ‘ಮೈ ಅಟಲ್​ ಹು’ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಪಂಕಜ್‌ ತ್ರಿಪಾಠಿ ಕಾಣಿಸಿಕೊಳ್ಳಲಿದ್ದಾರೆ.ಇದೇ ಜ.19 ರಂದು ಸಿನಿಮಾ ರಿಲೀಸ್‌ ಆಗಲಿದೆ.

ಜಿಗ್ರಾ: ವಾಸನ್ ಬಾಲಾ – ಆಲಿಯಾ ಭಟ್ ಅವರ ʼಜಿಗ್ರಾʼ ಐಎಂಡಿಬಿ ಬಹು ನಿರೀಕ್ಷಿತ ಸಿನಿಮಾದಲ್ಲಿ 20ನೇ ಸ್ಥಾನವನ್ನು ಪಡೆದುಕೊಂಡಿದೆ. ಇದರ ಅಧಿಕೃತ ರಿಲೀಸ್‌ ಡೇಟ್‌ ಇನ್ನಷ್ಟೇ ಹೊರಬೀಳಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next