Advertisement

ಹನ್ನೊಂದು ತಿಂಗಳ ನಂತರ ಚಲನಚಿತ್ರ ಮಂದಿರ ಓಪನ್‌

07:28 PM Feb 06, 2021 | Team Udayavani |

ಗದಗ: ಕೊರೊನಾ ಲಾಕ್‌ಡೌನ್‌ನಿಂದಾಗಿ ಬರೋಬ್ಬರಿ 11 ತಿಂಗಳ ಬಳಿಕ ಚಲನಚಿತ್ರ ಮಂದಿರಗಳು ಬಾಗಿಲು ತೆರೆದಿವೆ. ಜಿಲ್ಲೆಯ ಚಿತ್ರಮಂದಿರಗಳಲ್ಲಿ ಶುಕ್ರವಾರದಿಂದ ಚಲನಚಿತ್ರಗಳ ಪ್ರದರ್ಶನ ಶುರುವಾಗಿದೆ. ಆದರೆ, ಚಲನಚಿತ್ರಗಳ ಪ್ರದರ್ಶನಕ್ಕೆ ಪ್ರೇಕ್ಷಕರ ಕೊರತೆ ಕಂಡುಬಂದಿತು.

Advertisement

ಪ್ರೇಕ್ಷಕರಿಲ್ಲದೇ ಚಿತ್ರಮಂದಿರಗಳ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಜಿಲ್ಲೆಯಲ್ಲಿ ಒಟ್ಟು 12 ಚಿತ್ರಮಂದಿರಗಳಿದ್ದು, ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ಶುರುವಾಗಿದೆ. ಗದಗ- ಬೆಟಗೇರಿಯ ನಾಲ್ಕು ಚಿತ್ರಮಂದಿರಗಳ ಪೈಕಿ ವೆಂಕಟೇಶ, ಶಾಂತಿ ಮತ್ತು ಮಹಾಲಕ್ಷಿ$¾à ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭಗೊಂಡಿದೆ. ಆದರೆ ಕೃಷ್ಣಾ ಚಿತ್ರಮಂದಿರಕ್ಕೆ ಯಾವುದೇ ಚಿತ್ರಗಳು ಸಿಗಲಿಲ್ಲ ಎನ್ನಲಾಗಿದೆ. ಚಿತ್ರಮಂದಿರಗಳ ಮಾಲೀಕರ ಸಂಘ ಹಾಗೂ ಸ್ಯಾಂಡಲ್‌ವುಡ್‌ನ‌ ಒತ್ತಡಕ್ಕೆ ಮಣಿದ ಸರಕಾರ ಶೇ. 100ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದೆ.

ಸರ್ಕಾರದ ಸೂಚನೆಯಂತೆ ಚಿತ್ರಮಂದಿರಗಳಲ್ಲಿ ಕೋವಿಡ್‌ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಲಾಗುತ್ತಿದೆ. ಚಿತ್ರವೀಕ್ಷಣೆಗೆ  ಬರುವಂತಹ ಜನರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಪ್ರತಿಯೊಬ್ಬ ಪ್ರೇಕ್ಷಕರ ಮೊಬೈಲ್‌ ಸಂಖ್ಯೆಯನ್ನೂ ಸಂಗ್ರಹಿಸಲಾಗುತ್ತಿದೆ.

ಇದನ್ನೂ ಓದಿ :ಸಿಪಿಐ ವರ್ತನೆ ಖಂಡಿಸಿ ವಕೀಲರ ಪ್ರತಿಭಟನೆ

ಮುಖಕ್ಕೆ ಮಾಸ್ಕ್ ಇಲ್ಲದೇ ಬಂದಿದ್ದ ಅನೇಕ ಯುವಕರಿಗೆ ಚಿತ್ರಮಂದಿರ ಸಿಬ್ಬಂದಿ ಟಿಕೆಟ್‌ ನೀಡಲು ನಿರಾಕರಿಸಲಾಯಿತು. ಹೀಗಾಗಿ ಕೆಲವರು ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳಲ್ಲಿ ಮಾಸ್ಕ್ ಖರೀದಿಸಿ ತಂದರೆ, ಇನ್ನೂ ಕೆಲವರು ಬೇಸರದಿಂದಲೇ ಮರಳಿ ಹೋದರು ಎನ್ನುತ್ತಾರೆ ಚಿತ್ರಮಂದಿರದ ಸಿಬ್ಬಂದಿ ವೆಂಕಟೇಶ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next