Advertisement

ಸುಪ್ರೀಂಕೋರ್ಟ್‌ ನಲ್ಲಿ ಲಾಪತಾ ಲೇಡೀಸ್‌ ಸಿನೆಮಾ ಪ್ರದರ್ಶನ

01:20 AM Aug 10, 2024 | Team Udayavani |

ಹೊಸದಿಲ್ಲಿ: ನ್ಯಾಯಮೂರ್ತಿಗಳು, ಕುಟುಂಬ ಸದಸ್ಯರು, ರಿಜಿಸ್ಟ್ರಿಯ ಅಧಿಕಾರಿಗಳಿಗಾಗಿ ಶುಕ್ರವಾರ ಸರ್ವೋಚ್ಚ ನ್ಯಾಯಾಲಯದಲ್ಲೇ “ಲಾಪತಾ ಲೇಡೀಸ್‌’ ಸಿನೆಮಾ ಪ್ರದರ್ಶಿಸಲಾಯಿತು.
ಕೋರ್ಟ್‌ಗೆ ಬಂದ ನಟ ಅಮೀರ್‌ ಖಾನ್‌ರನ್ನು ಸಿಜೆಐ ಡಿ.ವೈ.ಚಂದ್ರಚೂಡ್‌ ಸ್ವಾಗತಿಸಿ, “ಕೋರ್ಟ್‌ನಲ್ಲಿ ಕಾಲು¤ಳಿತ ಆಗುವುದು ನಮಗೆ ಇಷ್ಟ ಇಲ್ಲ. ಆದರೂ ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. ಕಿರಣ್‌ ರಾವ್‌ ಅವರೂ ಆಗಮಿಸಲಿದ್ದಾರೆ’ ಎಂದು ಹೇಳಿದರು. ಸುಪ್ರೀಂ ಕೋರ್ಟ್‌ ಸ್ಥಾಪನೆಯ 75ನೇ ವಾರ್ಷಿಕೋತ್ಸವದ ಭಾಗವಾಗಿ ಲಿಂಗ ಸಮಾನತೆ ಸಂದೇಶ ಸಾರುವ ಚಿತ್ರದ ಪ್ರದರ್ಶನ ಏರ್ಪಡಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next