Advertisement

ಅಮಲಿನಲ್ಲಿ ಅರಳಿದ ಒಂಥರಾ ಪ್ರೀತಿ!

12:22 PM Dec 19, 2020 | Suhan S |

ಚಿತ್ರದ ನಾಯಕ ಅವನಿಗೆ ಬೇಕಾದಂತೆ ಬದುಕುತ್ತಿರುತ್ತಾನೆ. ಕುಡಿಬೇಕು ಎಂದಾಗಕುಡೀತಾನೆ, ಪ್ರೀತಿಸಬೇಕು ಎಂದಾಗ ಪ್ರೀತಿಸುತ್ತಾನೆ…. ಹೀಗೆ ತನಗೆ ಏನು ಅನಿಸುತ್ತದೆ ಅದನ್ನು ಮಾಡುತ್ತಾನೆ. ಆತನ ವ್ಯಕ್ತಿತ್ವವೇ ಒಂಥರಾ …. ಅದೇ ಕಾರಣದಿಂದ ಈ ಚಿತ್ರಕ್ಕೆ “ನಾನೊಂಥರ’ ಎಂಬ ಟೈಟಲ್‌ ಇಡಲಾಗಿದೆ.

Advertisement

ಹೌದು, ಈ ವಾರ ತೆರೆಕಂಡಿರುವ “ನಾನೊಂಥರ’ ಚಿತ್ರದ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ ಇಲ್ಲಿ ಪ್ರೀತಿ, ಪ್ರೇಮ, ಹೊಡೆದಾಟ, ಬಡಿದಾಟ, ಅತಿಯಾದ ಕುಡಿತ ಎಲ್ಲವೂ ಇದೆ. ಇಡೀ ಸಿನಿಮಾವನ್ನು ಪಕ್ಕಾ ಕಮರ್ಷಿಯಲ್‌ ಆಗಿ ಕಟ್ಟಿಕೊಡಬೇಕೆಂಬ ಉದ್ದೇಶದಿಂದ ನಿರ್ದೇಶಕರು ಸಿನಿಮಾದಲ್ಲಿ ಗಾಂಧಿನಗರದ ಸಿದ್ಧಸೂತ್ರಗಳನ್ನು ಯಥೇತ್ಛವಾಗಿ ಬಳಸಿದ್ದಾರೆ. ಅದೇ ಕಾರಣದಿಂದ ಚಿತ್ರದಲ್ಲಿ ಭರ್ಜರಿ ಹೊಡೆದಾಟ, ಬಡಿದಾಟ, ಮಾಸ್‌ ಸಾಂಗ್‌, ಐಟಂ ಸಾಂಗ್‌, ಪಂಚಿಂಗ್‌ ಡೈಲಾಗ್ಸ್. ಹೀಗೆ ಎಲ್ಲವೂ ಸಿಗುತ್ತದೆ. ಹಾಗಾಗಿ, ಪಕ್ಕಾ ಕಮರ್ಷಿಯಲ್‌ ಸಿನಿಮಾಗಳನ್ನು ಇಷ್ಟಪಡುವವರಿಗೆ “ನಾನೊಂಥರ’ ಚಿತ್ರ ಇಷ್ಟವಾಗಬಹುದು.

ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು. ಸದಾ ಕುಡಿಯುತ್ತಿರುವ ಅಣ್ಣ, ಆತನಿಗೆ ಸಹಾಯ ಮಾಡುವ ತಮ್ಮ, ಇಬ್ಬರನ್ನು ಸಹಿಸಿಕೊಂಡು ಹೋಗುತ್ತಿರುವ ತಂದೆ, ಈ ಮಧ್ಯೆ

ಒಂದು ಲವ್‌ ಸ್ಟೋರಿ, ಜೊತೆಗೆ ದೂರದಿಂದಲೇ ಸ್ಕೆಚ್‌ ಹಾಕುತ್ತಿರುವ ವಿಲನ್‌… ಹೀಗೆ ಸಾಗುವ ಸಿನಿಮಾದಲ್ಲಿ ಒಂದಷ್ಟು ಟ್ವಿಸ್ಟ್‌ಗಳಿವೆ. ಅದೇನೆಂಬುದನ್ನು ನೀವು ತೆರೆಮೇಲೆಯೇ ನೋಡಬೇಕು. ಮೊದಲೇ ಹೇಳಿದಂತೆ ಗಾಂಧಿನಗರದ ಸಿದ್ಧಸೂತ್ರಗಳಿರುವ ಸಿನಿಮಾವಾದ್ದರಿಂದ ಈ ಚಿತ್ರಕ್ಕೆ ಕಥೆಯ ಹಂಗಿಲ್ಲ. ಸನ್ನಿವೇಶಗಳ ಮೂಲಕ ಸಿನಿಮಾವನ್ನುಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.

ಇನ್ನೊಂದಿಷ್ಟು ಪೂರ್ವತಯಾರಿ ಮಾಡಿಕೊಂಡಿದ್ದರೆ ಸಿನಿಮಾವನ್ನು ಚೆನ್ನಾಗಿ ಕಟ್ಟಿಕೊಡುವ ಅವಕಾಶ ನಿರ್ದೇಶಕರಿಗಿತ್ತು. ಸಿನಿಮಾವನ್ನು ತೀರಾ ಗಂಭೀರವಾಗಿ ಪರಿಗಣಿಸದೇ ಟೈಮ್‌ಪಾಸ್‌ ಮಾಡುವ “ಮಾಸ್‌ ಆಡಿಯನ್ಸ್‌’ಗೆ ಚಿತ್ರ ಹಿಡಿಸಬಹುದು.

Advertisement

ಚಿತ್ರದಲ್ಲಿ ನಟಿಸಿರುವ ನಾಯಕ ತಾರಕ್‌, ರಕ್ಷಿಕಾ, ದೇವರಾಜ್‌, ಜೈಸನ್‌ಸೇರಿದಂತೆ ಪ್ರತಿಯೊಬ್ಬರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ.

 

ಚಿತ್ರ: ನಾನೊಂಥರ

ನಿರ್ದೇಶನ: ರಮೇಶ್‌ ಕಗ್ಗಲ್ಲು

ನಿರ್ಮಾಣ: ಜಾಕ್ಲಿನ್‌ ಫ್ರಾನ್ಸಿಸ್‌

ತಾರಾಗಣ: ತಾರಕ್‌, ರಕ್ಷಿಕಾ, ದೇವರಾಜ್‌, ಜೈಸನ್‌ ಮತ್ತಿತರರು.

 

 -ಆರ್‌.ಪಿ

Advertisement

Udayavani is now on Telegram. Click here to join our channel and stay updated with the latest news.

Next