Advertisement

ಕಪ್ಪು ಶಾಲು ಧರಿಸಿ ಚಳವಳಿ

10:39 AM Jun 25, 2019 | Suhan S |

ಸಾಗರ: ಸತತ 16 ವರ್ಷಗಳಿಂದ ಕಪ್ಪು ಶಾಲು ಹೊದ್ದುಕೊಂಡು ಕಾವೇರಿ ಚಳವಳಿ ನಡೆಸಿರುವ ಇಲ್ಲಿನ ವಿವೇಕ ನಗರದ ವಾಸಿ ಶೇಖರ್‌ ತಮ್ಮ ನಿಲುವಿನಲ್ಲಿ ಹೊಸ ಸೇರ್ಪಡೆ ಮಾಡಿಕೊಂಡಿದ್ದು, ಅಂದು ಕಾವೇರಿಗಾಗಿ, ಇಂದು ಶರಾವತಿಗಾಗಿ ಎಂಬ ನಿಲುವಿನಿಂದ ಸೋಮವಾರ ನಗರದಲ್ಲಿ ಸಂಚರಿಸುವಾಗ ಕಪ್ಪು ಶಾಲಿನ ಜೊತೆ ಮಲೆನಾಡು ವಿರೋಧಿ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಪ್ರದರ್ಶಿಸಿದರು.

Advertisement

2003ರಲ್ಲಿ ಕಾವೇರಿ ನದಿ ಸಮಸ್ಯೆಯ ಸಂದರ್ಭದಲ್ಲಿ ರಾಜ್ಯದ ಪರ ತೀರ್ಪು ಬರುವ ತನಕ, ಸಮಸ್ಯೆ ಬಗೆಹರಿಯುವ ತನಕ ಕಪ್ಪು ಪಟ್ಟಿ ಧರಿಸುವ ಶಪಥ ಮಾಡಿದ್ದ ಶೇಖರ್‌, ತಮ್ಮೊಂದಿಗೆ ಸದಾ ಕಪ್ಪು ಶಾಲು ಹಾಕಿಕೊಂಡೇ ಸಂಚರಿಸುತ್ತಾರೆ. ಈ ವ್ರತ ಇಲ್ಲಿಯವರೆಗೆ ಒಂದು ದಿನ ಕೈಬಿಟ್ಟಿಲ್ಲ. ಕನ್ನಡಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ, ಅತ್ಯುತ್ತಮ ಕಲಾವಿದರಾಗಿ, ಬ್ಯಾನರ್‌ ಬರಹಗಾರರಾಗಿ ಶೇಖರ್‌ ಈ ಸಮಯದಲ್ಲಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆಯ ವಿರುದ್ಧದ ತಮ್ಮ ಪ್ರತಿಭಟನೆ ದಾಖಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next