ಸ್ಫೂರ್ತಿದಾಯಕವೂ ಹೌದು, ಪ್ರಾಣಘಾತುಕವೂ ಹೌದು. ಭೂಮಿ ಮೇಲೆ ಒಂದು ಜಾಗವಿದೆ. ಆ ಜಾಗದಲ್ಲಿ ಇಲಿಯಾಗಿ ನೂರು ದಿನ ಹೋಗಲಿ ಒಂದು ದಿನವೂ ಬಾಳಲಾಗುವುದಿಲ್ಲ. ಯಾಕೆ ಗೊತ್ತಾ? ಅದು ಜಗತ್ತಿನ ಇಲಿ ಮುಕ್ತ ಪ್ರದೇಶ. ಉತ್ತರ ಧ್ರುವ, ದಕ್ಷಿಣ ಧ್ರುವ ಎನ್ನದಿರಿ.
Advertisement
ಏಕೆಂದರೆ ಇದು ಜನವಸತಿ ಇರುವ ಪ್ರದೇಶ. ಕೆನಡಾದ ಅಲ್ಬರ್ಟಾ ನಗರವೇ ಇಲಿ ರಹಿತ ನಗರವೆಂಬ ಖ್ಯಾತಿಗೆ ಪಾತ್ರವಾಗಿರುವುದು. ಇಲ್ಲಿ ಇಲಿಗಳ ನಿರ್ಮೂಲನಕ್ಕೆ ಪ್ರತ್ಯೇಕ ತಂಡವೇ ಕಾರ್ಯಾಚರಿಸುತ್ತಿದೆ. ಆರೇಳು ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ.
ಕ್ಯಾರಾವಾನುಗಳಲ್ಲಿ ಬರುವ ಪ್ರವಾಸಿಗರೇ ಕಾರಣ ಎನ್ನುವುದು ಇಲಿ ನಿರ್ಮೂಲನಾ ಅಧಿಕಾರಿಗಳ ದೂರು!