Advertisement

“ನಿತ್ಯೋತ್ಸವ’ತವರಲ್ಲಿ ಶೋಕ ಸಾಗರ

04:11 PM May 04, 2020 | Team Udayavani |

ದೇವನಹಳ್ಳಿ: ನಿತ್ಯೋತ್ಸವ ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ನಿಧನರಾಗಿದ್ದು ಅವರ ತವರೂರಾದ ದೇವನಹಳ್ಳಿ ಶೋಕ ಸಾಗರದಲ್ಲಿ ಮುಳುಗಿದೆ.  ಫೆ.5ರ 1936 ರಲ್ಲಿ ದೇವನಹಳ್ಳಿಯಲ್ಲಿ ಜನಿಸಿದ ನಿಸಾರ್‌ ಅಹ ಮದ್‌, ಅವರು ಪ್ರಾಥಮಿಕ ಶಿಕ್ಷಣ ದೇವನ ಹಳ್ಳಿಯಲ್ಲಿಯೇ ಪಡೆದ ಬಳಿಕ, ಹೊಸಕೋಟೆ ಯಲ್ಲೂ ವ್ಯಾಸಂಗ ಮಾಡಿದ್ದಾರೆ.

Advertisement

ನಗರದ ಯಲಹಂಕ ಬೀದಿಯಲ್ಲಿ ನಿಸಾರ್‌ ಅಹಮದ್‌ ಅವರ ತಾಯಿ ಅನಿದಾ ಬೇಗಮ್‌ ವಾಸವಾಗಿದ್ದರು. ಇವರ ತಂದೆ ಕೊಕ್ಕರೆ ಹೊಸ ಹಳ್ಳಿ ಶೇಕ್‌ ಹೈದರ್‌, ದೇವನಹಳ್ಳಿ ಪುರಸಭೆ ಆರೋಗ್ಯಾಧಿಕಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಶಿಕ್ಷಕರಾಗಿ ಕಂದಾಯ ಇಲಾಖೆಗೆ ವರ್ಗಾವಣೆಗೊಂಡ ನಂತರ ಹೊಸಕೋಟೆಯಿಂದ ಬೆಂಗಳೂರಿಗೆ ವರ್ಗಾವಣೆ ಆಗಿದ್ದರು. ನಂತರ ನಿಸಾರ್‌ ಅಹಮದ್‌ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದರು. 21 ಕವನ ಸಂಕಲನ, 14 ವೈಚಾರಿಕ ಕೃತಿ ಸೇರಿದಂತೆ, ಮಕ್ಕಳ ಸಾಹಿತ್ಯ ಅನುವಾದ ಕೃತಿಗಳು ಮತ್ತು ಸಂಪಾದನ ಗ್ರಂಥ ಪ್ರಕಟವಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ದೇವನಹಳ್ಳಿಯಲ್ಲಿ ಜನಿಸಿರುವುದರಿಂದ ಇವರ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next