Advertisement
ಕೂಗಿನ ಮೂಲಕವೇ ತನ್ನ ಇರುನೆಲೆಯ ವ್ಯಾಪ್ತಿಯನ್ನು, ಬೆದರಿಕೆಯನ್ನು ಹಾಕುತ್ತದೆ. ಇಂತಹ ಕೂಗು ತನ್ನ ಸಂಗಾತಿಯನ್ನು ಅರಸಲು, ಕರೆಯಲು ಇಲ್ಲವೇ ಗೂಡು ನಿರ್ಮಿಸಲು…ಹೀಗೆ ಭಿನ್ನದನಿಯನ್ನು ತೆಗೆಯುವ ನೈಪುಣ್ಯ ಈ ಬೆಟ್ಟದಗುಟುರ ಹಕ್ಕಿಗೆ ಇದೆ. ದಟ್ಟ ಕಾಡಿನ ದೊಡ್ಡ ಮರಗಳ ನಡುವೆಯೇ ಇರುವುದರಿಂದ ಇದು ಕಾಣುವುದು ಅಪರೂಪ.
ವಯಸ್ಸಾದಂತೆ ಈಗೆರೆಯೂ ದೊಡ್ಡದಾಗುವುದೋ ಹೇಗೆ ಎಂಬುದನ್ನು ಅಧ್ಯಯನದಿಂದ ತಿಳಿಯಬೇಕಾಗಿದೆ. ಇತರ ಬಾರ್ಬೆಟ್ ಅಥವಾ ಗುಟುರಗಳಿಗೆ ಹೋಲಿಸಿದರೆ ಇದರ ಕೂಗೂ ಭಿನ್ನವಾಗಿದೆ. ಕಂದುಕಪ್ಪು ಬಣ್ಣದ ತಲೆ ಇದರ ಕೆಳಗೆ ಸ್ವಲ್ಪ ಹಳದಿ ಕುತ್ತಿಗೆ ಪಟ್ಟಿ, ಬಾಲದ ಬುಡದಲ್ಲಿ ಅಂದರೆ ರೆಂಪ್‌ನಲ್ಲಿ ಇರುವ ಕೆಂಪುಬಣ್ಣ ಇದನ್ನು ಗುರುತಿಸಲು ಸಹಕಾರಿ. ಬೆಟ್ಟದ ಗುಟುರವನ್ನು ಭಾರತದ ಪರ್ವತದ ಹಕ್ಕಿ ಅಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ವಲಸೆ ಹೋಗುವುದು ಕಡಿಮೆ. ಇರುವ ಜಾಗದಲ್ಲೇ ಇರುತ್ತದೆ. ಕೆಲವೊಮ್ಮೆ ಆಹಾರದ ಅಭಾವ, ಇಲ್ಲವೇ ಇರುನೆಲೆಯಲ್ಲಿ ತೊಂದರೆಯಾದರೆ ಮಾತ್ರ ಬೇರೆಡೆ ಹೋಗುವುದು. ಇತರ ಹಕ್ಕಿಗಳಂತೆ ಇದು ಪ್ರತಿ ವರ್ಷ ಅದೇ ಸಮಯದಲ್ಲಿ ವಲಸೆ ಹೋಗುವುದು ಕಡಿಮೆ. ಹಾಗಾಗಿ ಇದು ವಲಸೆ ಹಕ್ಕಿಯಲ್ಲ. ಹೊಟ್ಟೆಯ ಕೆಳಭಾಗದಲ್ಲಿ ಕಂದು ಬಣ್ಣದಗೆರೆ ಸೂಕ್ಷ್ಮವಾಗಿ ಗಮನಿಸಿದರೆ ಕಾಣುತ್ತದೆ. ನಮ್ಮ ರಾಜ್ಯದಲ್ಲಿ ಆಲ, ಬಸರಿ,
ಅತ್ತಿ ಹಣ್ಣು ಬಿಟ್ಟಾಗ ಅಲ್ಲೆ ಮರದಲ್ಲಿ ಕುಳಿತು ಟುಕ್, ಟುಕ್‌ಎಂದು ಕೂಗುತ್ತದೆ ಕೆಂಪು ಎದೆಗುಟರ. ಊರ ಮಧ್ಯೆ ಇಲ್ಲವೇ ಕಾಡಿನ ಮರಗಳಲ್ಲಿ ಕಾಣುವುದೂ ಕೂಡ ಈ ಗುಟುರದ ಪ್ರಬೇಧ.
Related Articles
ತತ್ತಿ ಇಟ್ಟು ಕಾವು ಕೊಟ್ಟು ಮರಿಮಾಡುತ್ತದೆ. ಗಂಡು -ಹೆಣ್ಣು ಸೇರಿ ಮರಿಗಳ ರಕ್ಷಣೆ ಮಾಡುತ್ತದೆ. ಗುಟುಕು ನೀಡುತ್ತವೆ. ಹಾರಲು ಕಲಿಸುತ್ತದೆ. ಮರಿ ಬಲಿತು ದೊಡ್ಡದಾಗಿ ಸ್ವತಂತ್ರವಾಗಿ ಬದುಕಲು ಬೇಕಾದ ತರಬೇತಿಯನ್ನು ತಂದೆತಾಯಿಯ ಜೊತೆಯಲ್ಲೆ ಕಲಿಯುತ್ತದೆ.
ಕಾಡಿನ ಅಳಿವು ,ದೊಡ್ಡ ಮರಗಳು ಕಡಿಮೆಯಾಗುತ್ತಿರುವುದರಿಂದ ಇದರ ಇರುನೆಲೆಗಳಿಗೆ ಸಂಚಕಾರ ಬಂದು, ಸಂಖ್ಯೆ ಕಡಿಮೆಯಾಗುತ್ತಿದೆ. ಈ ಸುಂದರ ಪಕ್ಷಿಯ ಉಳಿವಿಗಾಗಿ, ಕಾಡು ಬೆಳೆಸಿ, ಅಲ್ಲಿ ದೊಡ್ಡ ಮರಗಳನ್ನು ರಕ್ಷಿಸಬೇಕಾಗಿದೆ.
Advertisement
ಪಿ. ವಿ. ಭಟ್ ಮೂರೂರು