ಗದಗ: ಇಲ್ಲಿನ ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನಡೆಯುತ್ತಿರುವ 17ನೇ ರಾಷ್ಟಿÅàಯ ಸೀನಿಯರ್, ಜ್ಯೂನಿಯರ್ ಮತ್ತು ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನ ಮೊದಲ ದಿನವಾದ ಶುಕ್ರವಾರ 5 ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, 10 ಸ್ಪರ್ಧಾಳುಗಳು ಜಯ ಸಾಧಿಸಿದ್ದಾರೆ.
ಅಲ್ಲದೇ, ಗದಗ ಜಿಲ್ಲೆ, ಶಿರಹಟ್ಟಿ ತಾಲೂಕು ಕಡಕೋಳ ಗ್ರಾಮದ ಪವಿತ್ರಾ ಕುರ್ತಕೋಟಿ ಇಂಡಿವಿಜುವಲ್ ಟೈಮ್ ಟ್ರಯಲ್ 10ಕಿ.ಮೀ. ದೂರದ 16ವರ್ಷದೊಳಿಗಿನ ಬಾಲಕಿಯರ ವಿಭಾಗದಲ್ಲಿ ತೃತೀಯರಾಗಿ ಗುರಿ ಮುಟ್ಟುವ ಮೂಲಕ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿವಿಜುವಲ್ ಟೈಮ್ ಟ್ರಯಲ್ 10ಕಿ.ಮೀ. ದೂರದ 14 ವರ್ಷದೊಳಿಗಿನ ಬಾಲಕರ ವಿಭಾಗದಲ್ಲಿ ಮಹಾರಾಷ್ಟ್ರದ ಅದೀಪ ವಘಾ(ಪ್ರಥಮ), ಕರ್ನಾಟಕದ ಸಮರ್ಪಣ ಜೈನ್(ದ್ವಿತೀಯ), ಅಸ್ಸಾಂ ರಾಜ್ಯದ ಮಲವ ದತ್ತಾ(ತೃತೀಯ) ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.
ಇಂಡಿವಿಜುವಲ್ ಟೈಮ್ ಟ್ರಯಲ್ 10ಕಿ. ಮೀ. ದೂರದ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರ ಸಿದ್ಧಿ ಶಿರ್ಕೇ(ಪ್ರಥಮ), ಶರವನಿ ಪರಿತ್(ದ್ವಿತೀಯ), ಕರ್ನಾಟಕ ಚಾಯಾ ನಾಗಶೇಟ್ಟಿ ತೃತೀಯರಾಗಿ ಗುರಿ ತಲುಪಿದ್ದಾರೆ. ಇಂಡಿವಿಜುವಲ್ ಟೈಮ್ ಟ್ರಯಲ್ 10ಕಿ. ಮೀ. ದೂರದ 16 ವರ್ಷದೊಳಿಗಿನ ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಕರಿನ್ ಮರ್ಶಲ್
(ಪ್ರಥಮ), ಕೇರಳದ ಅಗಸಾ ಅನ್ನ ಥೊಮಸ್ (ದ್ವಿತೀಯ), ಕರ್ನಾಟಕದ ಗದಗ ಜಿಲ್ಲೆ, ಶಿರಹಟ್ಟಿ ತಾಲೂಕು ಕಡಕೋಳ ಗ್ರಾಮದ ಪವಿತ್ರಾ ಕುರ್ತಕೋಟಿ ತೃತೀಯರಾಗಿ ಗುರಿ ಮುಟ್ಟಿದರು.
ಇಂಡಿಜ್ವಲ್ ಟೈಮ್ ಟ್ರಯಲ್ 10ಕಿ.ಮೀ. ದೂರದ 16 ವರ್ಷದೊಳಿಗಿನ ಬಾಲಕರ ವಿಭಾಗದಲ್ಲಿ ಕರ್ನಾಟಕದ ಚರಿತ ಗೌಡ(ಪ್ರಥಮ), ಕೇರಳದ ಅದೈಥ್ ಸನ್ಕರ್(ದ್ವಿತೀಯ), ಪಶ್ಚಿಮ ಬಂಗಾಳದ ಸುಧನಸು ಲಿಮಬು(ತೃತೀಯ) ಸ್ಥಾನದಲ್ಲಿ ಗೆಲುವು ಸಾಧಿಸಿದರು.
ಇಂಡಿಜ್ವಲ್ ಟೈಮ್ ಟ್ರಯಲ್ 10ಕಿ.ಮೀ. ದೂರದ 18 ವರ್ಷದೊಳಿಗಿನ ಬಾಲಕರ ವಿಭಾಗದಲ್ಲಿ ಕರ್ನಾಟಕದ ಅಡೋನಿಸ್ ತನಗ್ಪು(ಪ್ರಥಮ), ಕರ್ನಾಟಕ ಹರ್ಷಿತ ಕೆ.ಜೆ.(ದ್ವಿತೀಯ), ಪಶ್ಚಿಮ ಬಂಗಾಳ ರಾಜಕುಮಾರ ರಾಯ್ ತೃತೀಯ ಸ್ಥಾನದಲ್ಲಿ ಗುರಿ ಮುಟ್ಟಿದರು.