Advertisement

ಮೌಂಟ್‌ ಎವರೆಸ್ಟ್‌ಗೂ ಕೋವಿಡ್‌ -19?

12:06 PM Apr 19, 2020 | Sriram |

ಮಣಿಪಾಲ: ಪರ್ವತಾರೋಹಿಗಳ ಸಾಲಿನೊಂದಿಗೆ ತುಳುಕುತ್ತಿದ್ದ ಜಗತ್ತಿನ ಅತೀ ದೊಡ್ಡ ಹಿಮಾಲಯ ಶಿಖರ ಈಗ ಮೌನ ಮತ್ತು ಏಕಾಂಗಿ.
ಐದು ವರ್ಷಗಳಲ್ಲಿ ಎರಡನೇ ಬಾರಿಗೆ ಎವರೆಸ್ಟ್‌ ತನ್ನ ಹಿಮಭರಿತ ಇಳಿಜಾರು ಪ್ರದೇಶಗಳಲ್ಲಿ ಯಾವುದೇ ಸಾಹಸಿಗನಿಲ್ಲದೇ ಬಿಕೋ ಎನ್ನುತ್ತಿದೆ.
ಕೋವಿಡ್‌-19 ವೈರಸ್‌ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‌ 11ರಂದು ಚೀನ ಟಿಬೆಟಿಯನ್‌ ಕಡೆಯಿಂದ ಹತ್ತುವ ಎಲ್ಲಾ ಯಾತ್ರೆಗಳನ್ನು ಸ್ಥಗಿತಗೊಳಿಸಿದೆ. ಚೀನದ ಈ ಕ್ರಮವನ್ನು ನೆರೆಹೊರೆಯ ನೇಪಾಲವು ಬೆಂಬಲಿಸಿದೆ.

Advertisement

ಪರ್ವತದ ಬದಿಯಲ್ಲಿ ಈಗ ಕ್ಲೈಂಬಿಂಗ್‌ ನಡೆಯುವ ಋತುವಾಗಿದ್ದರೂ ನೇಪಾಲ ಅದನ್ನು ಸ್ಥಗಿತಗೊಳಿಸಿದೆ. ಈ ಮೂಲಕ 5 ವರ್ಷಗಳ ಹಿಂದಿನ ಘಟನೆಯೊಂದನ್ನು ನೆನಪಿಸಿದಂತಾಗಿದೆ. 2015ರಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಆ ವರ್ಷ ಪ್ರದೇಶದಲ್ಲಿ ಭಾರೀ ಭೂಕಂಪಗಳು ಸಂಭವಿಸಿದಾಗ ಮುಂಜಾಗೃತಾ ಕ್ರಮವಾಗಿ ಸಂಚಾರ ನಿರ್ಬಂಧಿಸಲಾಗಿತ್ತು.

ಎವರೆಸ್ಟ್‌ ಮತ್ತು ನೇಪಾಲ
ಕೋವಿಡ್‌ -19 ಪ್ರವಾಸೋದ್ಯಮದ ದೃಷ್ಟಿಯಿಂದ ಜಗತ್ತಿನಾದ್ಯಂತ ಅಗಾಧ ಆರ್ಥಿಕ ಪರಿಣಾಮ ಬೀರಿದೆ. ಸಾಹಸ ಪ್ರವಾಸೋದ್ಯಮವು ನೇಪಾಲದ ಆರ್ಥಿಕತೆಯ ಬೆನ್ನೆಲುಬು ಎಂಬುದು ಅಷ್ಟೇ ಸತ್ಯ. ವಿಶೇಷವಾಗಿ ಈ ಋತುವಿನಲ್ಲಿ ಸುಮಾರು ಒಂದು ಮಿಲಿಯನ್‌ ಜನರ ಜೀವನೋಪಾಯದ ಹಾದಿ ನೆಲೆಯಾಗಿತ್ತು. ಪರ್ವತ ಮಾರ್ಗದರ್ಶಿಗಳು ಮತ್ತು ಶೆರ್‌ಪಾಗಳು, ಅಂಗಡಿಗಳು, ರೆಸ್ಟೋರೆಂಟ್‌ಗಳು, ಸಾರಿಗೆ, ಹೋಟೆಲ್‌ಗ‌ಳು, ಚಹಾ ಅಂಗಡಿಗಳು ಸೇರಿದಂತೆ ಇತರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಕೆಲಸ ಮಾಡುವವರ ಮೇಲೆ ಪರಿಣಾಮ ಬೀರಿದೆ.

ಉದ್ಯೋಗದಾತ
ಕಳೆದ ವರ್ಷ ಪರ್ವತದ ಮೇಲೆ ಸಂಭವಿಸಿದ ಟ್ರಾಫಿಕ್‌ ಜಾಮ್‌ 11 ಪರ್ವತಾರೋಹಿಗಳ ಸಾವಿಗೆ ಕಾರಣವಾಗಿತ್ತು. ಪರ್ವತಾರೋಹಣವು ರೋಮಾಂಚಕ ಮತ್ತು ಸವಾಲಿನ ಕ್ರೀಡೆ ಎಂಬುದು ಎಷ್ಟು ನಿಜವೋ ಅಷ್ಟೇ ಮಹತ್ವದ ವ್ಯಾಪಾರ ನೇಪಾಲ ರಾಷ್ಟ್ರಕ್ಕೆ ಆಗುತ್ತದೆ. ಎವರೆಸ್ಟ್‌ ಕ್ಲೈಂಬಿಂಗ್‌ ಉದ್ಯಮವು ಸಾವಿರಾರು ಕೈಗಳಿಗೆ ಉದ್ಯೋಗವನ್ನು ನೀಡಿದೆ. 2019ರಲ್ಲಿ ನೇಪಾಲವು ಪ್ರವಾಸೋದ್ಯಮದಿಂದ 240 ಬಿಲಿಯನ್‌ ನೇಪಾಳಿ ರೂ.ಗಳನ್ನು ಸಂಪಾದಿಸಿತ್ತು. 2018 ಮತ್ತು 2019 ಕ್ಲೈಂಬಿಂಗ್‌ ಸೀಸನ್‌ ನಲ್ಲಿ ಎವರೆಸ್ಟ್‌ ದಾಖಲೆ ನಿರ್ಮಿಸಿದೆ. 2019ರಲ್ಲಿ ಅತೀ ಹೆಚ್ಚಿನ ಪ್ರಮಾಣದ ಪರ್ವತಾರೋಹಿಗಳು ಈ ಶಿಖರವನ್ನು ಏರಿದ್ದರು.

ಈ ಬಾರಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸರಕಾರ ಕೈಗೊಂಡ ನಿರ್ಧಾರವನ್ನು ಉದ್ಯಮವು ಒಪ್ಪಿಕೊಂಡಿದೆ. ಅತ್ಯಂತ ಕಡಿಮೆ ಜನಸಂಖ್ಯೆ ಇರುವ ನೇಪಾಲದಲ್ಲಿ ವೈದ್ಯಕೀಯ ಸವಲತ್ತುಗಳೂ ಕಡಿಮೆ ಇವೆ. ಇಂಥ ಸಂದರ್ಭದಲ್ಲಿ ಸರಕಾರ ಸರಿಯಾದ ಕ್ರಮಕೈಗೊಂಡಿದೆ. ನಿಯಮ

Advertisement

ಪರಿಷ್ಕರಣೆ
ಕಳೆದ ವರ್ಷದ ಋತುವಿನ ನಡೆದ ದುರಂತದ ಅನಂತರ ನೇಪಾಲ ಸರಕಾರ ತನ್ನ ಕ್ಲೈಂಬಿಂಗ್‌ ನೀತಿಯನ್ನು ಪರಿಷ್ಕರಿಸಿತ್ತು. ಪರ್ವತಾರೋಹಿಗಳು ಎತ್ತರದ ಪರ್ವತಾರೋಹಣದ ಅನುಭವವನ್ನು ಹೊಂದಿದ್ದಾರೆ ಎಂಬುದನ್ನು ಸಾಬೀತು ಪಡಿಸಬೇಕಿದೆ. ಇದಕ್ಕಾಗಿ ಸಾಕಷ್ಟು ಪರಿಣತಿಯನ್ನು ಪಡೆದಿರು ವುದರ ಜತೆಗೆ ಆರೋಗ್ಯದ ಪುರಾವೆಗಳನ್ನು (ಹೆಲ್ತ್‌ ಸರ್ಟಿ ಫಿಕೆಟ್‌) ಒದಗಿಸಬೇಕು. ಸರಕಾರದಿಂದ ಅನುಮೋದಿತ ಗೊಂಡ ಪ್ರವಾಸೋದ್ಯಮ ಕಂಪನಿಗಳು ಯಾತ್ರೆಗಳನ್ನು ಆಯೋಜಿಸುವುದಾದರೆ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು. ಮಾತ್ರವಲ್ಲದೇ ನೇಪಾಲದ ನಾಗರಿಕರು ಮಾತ್ರ ಆ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕು ಎಂದಿದೆ.ಇಷ್ಟೆಲ್ಲಾ ಭದ್ರತಾ ಕ್ರಮಗಳೊಂದಿಗೆ ನೇಪಾಲ ಪ್ರವಾಸೋದ್ಯ ಮಕ್ಕೆ ಯೋಜನೆ ಹಾಕಿಕೊಂಡಿತ್ತು. ಆದರೆ ಸದ್ಯದ ಮಟ್ಟಿಗೆ ಶಿಖರ ಏರುವುದು ದೂರದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next