Advertisement

ಮೌನಂ “ಯು/ಎ’ಸರ್ಟಿಫಿಕೆಟ್‌

10:03 AM Dec 18, 2019 | Team Udayavani |

ನಿಹಾರಿಕಾ ಮೂವೀಸ್‌ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ಮೌನಂ ಚಿತ್ರಕ್ಕೆ ಕಳೆದ ವಾರ ಸೆನ್ಸಾರ್‌ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಫಿಕೆಟ್‌ ನೀಡಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ರಾಜ್‌ ಪಂಡಿತ್‌ ಅವರದು.

Advertisement

ಚಿತ್ರಕ್ಕೆ ಶಂಕರ್‌ ಛಾಯಾಗ್ರಹಣ, ಆರವ್‌ ರಿಶಿಕ್‌ ಸಂಗೀತ, ಗುರುಮೂರ್ತಿ ಹೆಗಡೆ ಸಂಕಲನ, ಕೌರವ ವೆಂಕಟೇಶ್‌, ಅಲ್ಟಿಮೇಟ್‌ ಶಿವು ಸಾಹಸವಿದೆ. ತಾರಾಗಣದಲ್ಲಿ ಅವಿನಾಶ್‌, ಮಯೂರಿ (ಕೃಷ್ಣಲೀಲಾ) ಹೋಮ್ಲಿ ಮತ್ತು ಆ್ಯಕ್ಷನ್‌ ಸೀಕ್ವೆನ್ಸ್‌ಗಳಲ್ಲಿ ಮಿಂಚಿದ್ದಾರೆ.

ಬಾಲಾಜಿ ಶರ್ಮಾ, ಹನುಮಂತೇಗೌಡ, ರಿತೇಶ್‌, ಕೆಂಪೇಗೌಡ, ಗುಣವಂತ ಮಂಜು, ನಯನ, ಸಿಂಚನ, ಮಂಜುಳಾ ರೆಡ್ಡಿ, ಮುಂತಾದವರಿದ್ದಾರೆ. ಮನುಷ್ಯನಿಗೆ ಮನುಷ್ಯನೇ ಶತ್ರು, ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next