Advertisement

ಮಣಿಪಾಲ: ನರ್ಸಿಂಗ್‌ ತರಬೇತಿ ಕೇಂದ್ರಕ್ಕೆ ಎಂಒಯು

10:12 AM Dec 06, 2018 | |

ಉಡುಪಿ: ಮಣಿಪಾಲ ಮಾಹೆ ವಿವಿ, ಯುನೈಟೆಡ್‌ ಕಿಂಗ್‌ಡಮ್‌ನ ಅಂತಾರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (ಐಎಸ್‌ಡಿಸಿ), ವೆಸ್ಟ್‌ ಆಫ್ ಸ್ಕಾಟ್ಲಂಡ್‌ ವಿವಿ ಗಳು ಮಣಿಪಾಲದಲ್ಲಿ ಅತ್ಯಾಧುನಿಕ ನರ್ಸಿಂಗ್‌ ತರಬೇತಿ ಕೇಂದ್ರ ತೆರೆಯುವ ಕುರಿತು ತಿಳಿವಳಿಕೆ ಪತ್ರಕ್ಕೆ (ಎಂಒಯು) ಬುಧವಾರ ಸಹಿ ಮಾಡಿವೆ. ಮಣಿಪಾಲದ ನರ್ಸಿಂಗ್‌ ಕಾಲೇಜು ತೆರೆಯುವ ತರಬೇತಿ ಕೇಂದ್ರ ದೇಶದಲ್ಲೇ ಪ್ರಥಮದ್ದಾಗಿದೆ.

Advertisement

ಮಾಹೆ ವಿ.ವಿ. ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಉಪಸ್ಥಿತಿಯಲ್ಲಿ ನರ್ಸಿಂಗ್‌ ಕಾಲೇಜಿನ ಡೀನ್‌ ಡಾ| ಅನಿಸ್‌ ಜಾರ್ಜ್‌, ಮೆಡಿಕಲ್‌ ಸರ್ಜಿಕಲ್‌ ನರ್ಸಿಂಗ್‌ ವಿಭಾಗದ ಪ್ರಾಧ್ಯಾಪಕಿ, ವಿಭಾಗ ಮುಖ್ಯಸ್ಥೆ ಡಾ| ಎಲ್ಸಾ ಸನತೋಂಬಿ ಮತ್ತು ಸ್ಕಾಟ್ಲಂಡ್‌ ವಿ.ವಿ. ಸ್ಕೂಲ್‌ ಆಫ್ ಹೆಲ್ತ್‌ ಆ್ಯಂಡ್‌ ಲೈಫ್ ಸೈನ್ಸಸ್‌ ಸಹಾಯಕ ಡೀನ್‌ ಡಾ| ಕ್ಲೇರ್‌ ಚಾಲ್ಮರ್, ಐಎಸ್‌ಡಿಸಿ ಯೋಜನ ಮುಖ್ಯಸ್ಥ ಜೊವೆಲ್‌ ಕುಟಿನೊ ಒಪ್ಪಂದ ಪತ್ರಕ್ಕೆ ಸಹಿ ಮಾಡಿದರು.

ಭಾರತೀಯ ನರ್ಸಿಂಗ್‌ ಪದವೀಧರರನ್ನು ಯುನೈಟೆಡ್‌ ಕಿಂಗ್‌ಡಮ್‌ ಮತ್ತು ಸ್ಕಾಟ್ಲಂಡ್‌ ಪರೀಕ್ಷೆಗಳಿಗೆ ಅರ್ಹರನ್ನಾಗಿಸುವ ಮತ್ತು ಜಾಗತಿಕವಾಗಿ ಉದ್ಯೋಗಾರ್ಹರನ್ನಾಗಿಸುವ ಉದ್ದೇಶವನ್ನು ಹೊಂದಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next