Advertisement

ನವಭಾರತ ನಿರ್ಮಾಣವೇ ಧ್ಯೇಯ

12:12 PM Aug 16, 2017 | Team Udayavani |

ಸೇಡಂ: ದೇಶವನ್ನು ಕಾಡುತ್ತಿರುವ ಬಡತನ ಮತ್ತು ಅನಕ್ಷರತೆ ಎನ್ನುವ ಪಿಡುಗುಗಳನ್ನು ಹೋಗಲಾಡಿಸುವ ಮೂಲಕ ನವಭಾರತ ನಿರ್ಮಾಣದ ಕನಸನ್ನು ಯುವ ಜನತೆ ಹೊಂದಬೇಕು ಎಂದು ಸಹಾಯಕ ಆಯುಕ್ತ ಪರಶುರಾಮ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
1947 ರಲ್ಲಿ ದೊರೆತ ಸ್ವಾತಂತ್ರ್ಯ ಅನೇಕ ಮಹಾನ್‌ ಪುರುಷರ ಬಲಿದಾನ ಮತ್ತು ತ್ಯಾಗದ ಪ್ರತೀಕವಾಗಿದೆ. ಆಗ ದೊರೆತದ್ದು
ಕೇವಲ ಬ್ರಿಟಿಷರ ದಾಸ್ಯದಿಂದ ಮುಕ್ತಿ. ಆದರೆ ಇಂದಿಗೂ ಸಹ ಭಾರತ ಬಡತನ, ಭ್ರಷ್ಟಾಚಾರ ಮತ್ತು ಅನಕ್ಷರತೆಯಿಂದ ಮುಕ್ತಿ ಪಡೆದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ ಸದಸ್ಯ ದಾಮೋದರರೆಡ್ಡಿ ಮಾತನಾಡಿದರು. ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ಶಶಿಧರ ಬಿರಾದಾರ, ಹಾಪಕಾಮ್ಸ್‌ ರಾಜ್ಯ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ಸುದರ್ಶನರೆಡ್ಡಿ ಪಾಟೀಲ, ನಗರಾಭಿವೃದ್ಧಿ
ಪ್ರಾಧಿ ಕಾರದ ಅಧ್ಯಕ್ಷ ನಾಗೇಶ್ವರರಾವ್‌ ಮಾಲಿಪಾಟೀಲ, ದೈಹಿಕ ಶಿಕ್ಷಕರಾದ ಮಣಿಸಿಂಗ ಚವ್ಹಾಣ, ದೇವಿಂದ್ರಪ್ಪ ಪಂಚಾಳ, ಜಿಪಂ ಸದಸ್ಯೆ ದೇವಮ್ಮ ಕರೆಪ್ಪ ಪಿಲ್ಲಿ, ಶಾರದಮ್ಮ ಜೈಪಾಲರೆಡ್ಡಿ, ಗೌರಮ್ಮ ಜೈಭೀಮ, ತಾಪಂ ಅಧ್ಯಕ್ಷ ಸುರೇಖಾ ಪುರಾಣಿಕ, ಎಪಿಎಂಸಿ ಅಧ್ಯಕ್ಷ ಗುರುನಾಥರೆಡ್ಡಿ ಪಾಟೀಲ, ಸಿಪಿಐ ಪಂಚಾಕ್ಷರಿ ಸಾಲಿಮಠ ವೇದಿಕೆಯಲ್ಲಿದ್ದರು. ರವಿ ಕುದುರೇನ ನಿರೂಪಿಸಿದರು. ಸುಬ್ಬಣ್ಣ ಜಮಖಂಡಿ ಸ್ವಾಗತಿಸಿ, ವಂದಿಸಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಲ್ಯಾಪ್‌ಟಾಪ್‌
ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next