Advertisement

ಮಾರುಕಟ್ಟೆಗೆ ಲಗ್ಗೆ ಇಡಲಿರುವ  Moto E7 Power…ವೈಶಿಷ್ಟ್ಯತೆಗಳೇನು?

12:54 PM Feb 19, 2021 | Team Udayavani |

ನವದೆಹಲಿ: ಪ್ರಸಿದ್ದ ಮೊಟೊರೊಲಾ  ಕಂಪನಿಯು  ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ತನ್ನ Moto E7 Power ಆವೃತ್ತಿಯ ಸ್ಮಾರ್ಟ್ ಪೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ.

Advertisement

ಬರೋಬ್ಬರಿ 5000 mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಈ ಮೊಬೈಲ್ ಪೋನ್ ತನ್ನಲ್ಲಿ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಪ್ರಸಿದ್ದ ಆನ್ ಲೈನ್ ಮಾರುಕಟ್ಟೆಯಾಗಿರುವ ಫ್ಲಿಪ್ ಕಾರ್ಟ್ ಈ ಪೋನ್ ಗಳನ್ನು ಮಾರಾಟ ಮಾಡುತ್ತಿದೆ.

Moto E7 Power ವೈಶಿಷ್ಟ್ಯತೆಗಳು

ಕೇಲವ 10,000 ದ  ಒಳಗೆ ಬಳಕೆದಾರರನ್ನು ತಲುಪಲಿರುವ ಈ ಸ್ಮಾರ್ಟ್ ಪೋನ್ ಗಳ ವೈಶಿಷ್ಟ್ಯತೆಗಳ ಕುರಿತಾದ ಮಾಹಿತಿಗಳನ್ನು ಮೊಟೊರೊಲಾ ತನ್ನ  ಟ್ಟೀಟರ್ ಖಾತೆಯ ಮಾಲಕ ಹಂಚಿಕೊಂಡಿದೆ.

ಇದನ್ನೂ ಓದಿ:ದೇಣಿಗೆ ಲೆಕ್ಕ ಕೇಳಲು ಸಿದ್ದರಾಮಯ್ಯ ಯಾವನು? ಸಚಿವ ಈಶ್ವರಪ್ಪ ವಾಗ್ದಾಳಿ

Advertisement

ಕ್ಯಾಮರಾ: Moto E7 Power ಹಿಂಭಾಗದಲ್ಲಿ 2 ಅತ್ಯುತ್ತಮ ಕ್ಯಾಮರಾವನ್ನು ಒಳಗೊಂಡಿದ್ದು, 13 MP ಪ್ರಾಥಮಿಕ ಕ್ಯಾಮರಾ ಇದ್ದು, 2MP ಸೆಕೆಂಡ್ ಸೆನ್ಸಾರ್ ಕ್ಯಾಮರಾವನ್ನು  ಹೊಂದಿದೆ. ಮತ್ತು ಮುಂಭಾಗದಲ್ಲಿ 5 MP ಸೆಲ್ಫಿ ಕ್ಯಾಮರಾ ಇದರಲ್ಲಿದೆ.

ಡಿಸ್ ಪ್ಲೇ: ಆ್ಯಂಡ್ರಾಯ್ಡ್ 10 ಮೂಲಕ ಕಾರ್ಯ ನಿರ್ವಹಿಸುವ ಈ ಸ್ಮಾರ್ಟ್ ಫೋನ್ 6.5 HD +LCD ಡಿಸ್ ಪ್ಲೇ ಅನ್ನು ಒಳಗೊಂಡಿದ್ದು, ವಾಟರ್ ಡ್ರಾಪ್ ವಿನ್ಯಾಸದಲ್ಲಿ ಇದರ ಡಿಸ್ ಪ್ಲೇ ಇರಲಿದೆ.

ಸ್ಟೋರೇಜ್: ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿರುವ ಈ ಮೊಬೈಲ್ ಪೋನಿನಲ್ಲಿ 4 GB RAM ಜೊತೆಗೆ 64 GB ಸ್ಟೋರೇಜ್ ಇರಲಿದೆ. ಅಲ್ಲದೆ ಮೈಕ್ರೋ SD ಕಾರ್ಡ್ ಮೂಲಕ 1 TB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ.

Moto E7 Power ಮೊಬೈಲ್ ಫೋನ್, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಬಳಕೆದಾರರಿಗೆ ಲಭ್ಯಗೊಳ್ಳಲಿದ್ದು, ಚಾರ್ಜಿಂಗ್ ಗಾಗಿ USB ಟೈಪ್ C ಪೋರ್ಟ್ ಅನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next