ನವದೆಹಲಿ: ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರೇರಕ ಭಾಷಣಕಾರ ವಿವೇಕ್ ಬಿಂದ್ರಾ ವಿರುದ್ಧ ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಎಫ್‌ಐಆರ್ ದಾಖಲಿಸಿರುವುದಾಗಿ ವರದಿಯಾಗಿದೆ.
ವಿವೇಕ್ ಬಿಂದ್ರಾ ಡಿಸೆಂಬರ್ 6 ರಂದು ಯಾನಿಕಾಳನ್ನು ವಿವಾಹವಾದರು. ಆದರೆ ಎಂಟು ದಿನಗಳ ಬಳಿಕ ಡಿಸೆಂಬರ್ 14 ರಂದು, ಬಿಂದ್ರಾ ವಿರುದ್ಧ ನೋಯ್ಡಾ ಸೆಕ್ಟರ್ 126 ಪೊಲೀಸ್ ಠಾಣೆಯಲ್ಲಿ ತನ್ನ ಹೆಂಡತಿಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಬಡಾ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ಉತ್ತಮ ಪ್ರೇರಕ ಭಾಷಣಕಾರ ಬಿಂದ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 323, 504, 427 ಮತ್ತು 325 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ನೋಯ್ಡಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಮತ್ತು ಆರೋಪದ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಯಾನಿಕಾ ಅವರ ಸಹೋದರ ವೈಭವ್ ಅವರು ದೂರು ದಾಖಲಿಸಿದ್ದು, ಬಿಂದ್ರಾ ಅವರು ತಮ್ಮ ಸಹೋದರಿಯನ್ನು ಕೊಠಡಿಯೊಳಗೆ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾರೆ ಇದರಿಂದ ಆಕೆಯ ದೇಹದ ಮೇಲೆ ಗಾಯಗಳಾಗಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ:e-KYC: ಗ್ಯಾಸ್ ಸಿಲಿಂಡರ್ ವಿತರಣಾ ಕೇಂದ್ರದಲ್ಲಿ ಇ-ಕೆವೈಸಿಗೆ ಮುಗಿಬಿದ್ದ ಗ್ರಾಹಕರು