Advertisement

‘ಹೊಸತನ ಸೃಷ್ಟಿಗೆ ಚಲನಚಿತ್ರ ಪ್ರೇರಣೆ’

11:54 PM Jul 20, 2019 | Team Udayavani |

ಸುಳ್ಯ : ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು, ಕನಕಮಜಲು ಯುವಕ ಮಂಡಲ ಇವರ ಆಶ್ರಯದಲ್ಲಿ ಮಕ್ಕಳ ಚಲನಚಿತ್ರೋತ್ಸವ ಎರಡು ದಿನದ ವಿನೂತನ ಕಾರ್ಯಕ್ರಮಕ್ಕೆ ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ರೈತಭವನದಲ್ಲಿ ಶನಿವಾರ ಚಾಲನೆ ನೀಡಲಾಯಿತು.

Advertisement

ಚಲನಚಿತ್ರ ನಿರ್ದೇಶಕ ರಿಷಭ್‌ ಶೆಟ್ಟಿ ಉದ್ಘಾಟಿಸಿ, ಸಿನೆಮಾ ವೀಕ್ಷಣೆಯಿಂದ ಮಕ್ಕಳ ಮನಸ್ಸಿನಲ್ಲಿಯೂ ಸೃಜನಶೀಲತೆ, ಹೊಸತನ ಮೂಡಲು ಸಾಧ್ಯವಿದೆ. ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳ ಚಲನಚಿತ್ರೋತ್ಸವ ಪ್ರದರ್ಶನ ಪ್ರಯತ್ನ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸುಳ್ಯ ಭಟ್ ಅಸೋಸಿಯೇಟ್‌ನ ಚಾರ್ಟರ್ಡ್‌ ಅಕೌಂಟೆಂಟ್ ಗಣೇಶ್‌ ಭಟ್ ಅವರು ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್‌ ಬಾಬ್ಲುಬೆಟ್ಟು, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸತೀಶ್‌ ಕೆಮನಬಳ್ಳಿ, ಸರಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಪಾತ್ರಧಾರಿಗಳಾದ ರಂಜನ್‌, ಸಪ್ತ ಪಾವೂರು, ಸನಿಲ್ಗುರು, ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್‌ ಕಾರಿಂಜ, ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಲಕ್ಷ್ಮೀನಾರಾಯಣ ಕಜೆಗದ್ದೆ ಮೊದಲಾದವರು ಉಪಸ್ಥಿತರಿದ್ದರು.

ಜು. 21 ರಂದು ಬೆಳಗ್ಗೆ 10 ಗಂಟೆಗೆ ಕಾರಂತಜ್ಜನಿಗೊಂದು ಪತ್ರ, ಮಧ್ಯಾಹ್ನ 1.30ಕ್ಕೆ ರೈಲ್ವೇ ಚಿಲ್ಡ್ರನ್‌ ಚಲನಚಿತ್ರ ಪ್ರದರ್ಶನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next