ಶಿರ್ವ : ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಆಟ, ಪಾಠ ಬೋಧನೆ ಅಷ್ಟೊಂದು ಆಸಕ್ತಿ ವಹಿಸುವ ಸಂಗತಿ ಗಳಲ್ಲ. ಬೋಧನೆಗಿಂತ ಸಂಗೀತವು ಎಲ್ಲ ಮಕ್ಕಳಲ್ಲಿ ಶೋಭೆ, ಸಂತೃಪ್ತಿ ತರುತ್ತ¨. ೆ ಅದರಲ್ಲೂ ಕೊಳಲು ವಾದನ ಭಿನ್ನ ಸಾಮರ್ಥ್ಯದ ಮಕ್ಕಳ ಸಂತೋಷದಲ್ಲಿ ಶಾಂತತೆ ತರುವುದರೊಂದಿಗೆ ಮನಸ್ಸಿಗೆ ಮುದ ನೀಡಿ ಪ್ರೇರಣಾ ಶಕ್ತಿ ನೀಡುತ್ತದೆ ಎಂದು ಕೆಥೋಲಿಕ್ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ರೆ|ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.
ಅವರು ಬುಧವಾರ ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದಲ್ಲಿ ಮುಂಬಯಿಯ ಅನಾಂ ಪ್ರೇಮ್ ಪರಿವಾರದ ಮುಖ್ಯಸ್ಥ ಪಂಡಿತ್ ಕೇಶವ್‌ಜೀ ಗಿಂಡೆ ಹಾಗೂ ಶಿಷ್ಯವೃಂದ ನಡೆಸಿದ ಆಧ್ಯಾತ್ಮಿಕ ಕೊಳಲು ವಾದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಆಧ್ಯಾತ್ಮಿಕ ಕೊಳಲು ವಾದನ ನಡೆಸಿಕೊಟ್ಟ ಪಂಡಿತ್ ಕೇಶವ್‌ಜೀ ಗಿಂಡೆ ಮತ್ತು ಬೆಳ್ಮಣ್ ಹ್ಯುಮಾನಿಟಿ ಟ್ರಸ್ಟ್‌ನ ಸಂಸ್ಥಾಪಕ ರೋಷನ್ ಡಿ‡’ಸೋಜಾ ಬೆಳ್ಮಣ್ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.ಶಿಕ್ಷಕಿ ಅಶ್ವಿನಿ ಪರಿಚಯಿಸಿದರು. ಪಂಡಿತ್ ಕೇಶವ್‌ಜೀ ಗಿಂಡೆ ಮತ್ತು ರೋಷನ್ ಡಿ‡’ಸೋಜಾ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲೆ ಸಿ| ಅನ್ಸಿಲ್ಲಾ ಫೆರ್ನಾಂಡಿಸ್ ಮತ್ತು ಬಂಟಕಲ್ಲು ವಿಷ್ಣುಮೂರ್ತಿ ನಾಯಕ್ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ನಿರ್ದೇಶಕ ಡಾ| ಎಡ್ವರ್ಡ್ ಲೋಬೋ, ಡಾ| ಜೆರಾಲ್ಡ್ ಪಿಂಟೋ, ಸೈಮನ್ ಡಿ‡’ಸೋಜಾ, ವಲೇರಿಯನ್ ಫೆರ್ನಾಂಡಿಸ್, ಐಡಾ ಕರ್ನೇಲಿಯೋ, ಮೂಡುಬೆಳ್ಳೆಯ ಕೊಮೊಡೊರ್ ಜೆರೋಮ್ ಕ್ಯಾಸ್ತಲಿನೊ, ಅನಾಮ್ ಪ್ರೇಮ್ ಸಂಸ್ಥೆಯ ಮುಂಬಯಿ ಪರಿವಾರ್‌ನ ಸತೀಶ್ ನಗರೆ, ವಿಮಾ ನಗರೆ, ಸೌರಭ್ ನಗರೆ, ಹಿನ್ನೆಲೆ ವಾದಕರಾದ ಯೋಗೀಶ್ ಅಂಬೇಕರ್, ಶ್ರೀಯಾ ಭಟ್, ಪರಂತಪ್ ಮಯೇಕರ್, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಹೆತ್ತವರು, ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಾನಸ ಪುನರ್ವಸತಿ , ತರಬೇತಿ ಕೇಂದ್ರದ ಅಧ್ಯಕ್ಷ ಹೆನ್ರಿ ಕ್ಯಾಸ್ತಲಿನೊ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಮ್ಯೂರಲ್ ಪ್ರೇಮಲತಾ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಜೋಸೆಫ್ ನೊರೊನ್ಹಾ ವಂದಿಸಿದರು.
ಕೊಳಲಿನ ನಾದಕ್ಕೆ ರೋಗ ರುಜಿನ ದೂರ
ಭಗವಾನ್ ಶ್ರೀಕೃಷ್ಣ ಜಗತ್ತಿಗೆ ನೀಡಿದ ಕೊಡುಗೆ ಶ್ರೀಮದ್ಭಗವದ್ಗೀತಾ ಮತ್ತು ಕೊಳಲು. ಶ್ರೀಕೃಷ್ಣ ನವವಿಧಗಳಲ್ಲಿ ಕೊಳಲು ವಾದನದ ಮೂಲಕ ಜ್ಞಾನಿ, ಅಜ್ಞಾನಿಗಳಲ್ಲದೆ, ಪಶುಪಕ್ಷಿಗಳು, ಸಮಸ್ತ ಪ್ರಕೃತಿಯಲ್ಲಿಯೇ ಸಂಚಲನ ಮೂಡಿಸುತ್ತಿದ್ದ.ರೋಗರುಜಿನಗಳನ್ನು ದೂರ ಮಾಡುವಂತಹ ವಿಶೇಷ ಸಾಮರ್ಥ್ಯ ಕೊಳಲಿನ ನಾದಕ್ಕೆ ಇದೆ .
– ಪಂಡಿತ್ ಕೇಶವ್‌ಜೀ ಗಿಂಡೆ