Advertisement

“ಮಕ್ಕಳ ಪೋಷಣೆಯಲ್ಲಿ ತಾಯಂದಿರ ತ್ಯಾಗ ,ಶ್ರಮ ಶ್ಲಾಘನೀಯ’

10:37 PM Sep 11, 2019 | Sriram |

ಕಾಪು: ಮಕ್ಕಳ ಪೋಷಣೆ ತಾಯಂದಿರ ಅತ್ಯಗತ್ಯದ‌ ಜವಾಬ್ದಾರಿ. ಮಗುವಿನ ಪೋಷಣೆಯ ಹಿಂದೆ ತಾಯಿಯ ತ್ಯಾಗ, ಶ್ರಮ ಮತ್ತು ಕರ್ತವ್ಯ ಪ್ರಶಂಸನೀಯ ಎಂದು ಹಿರಿಯ ನ್ಯಾಯಾಧೀಶೆ ಕಾವೇರಿ ಹೇಳಿದರು.

Advertisement

ಕಾಪು ಜೇಸಿಐನ ಜೇಸಿ ಸಪ್ತಾಹದ ಅಂಗವಾಗಿ ಜೇಸಿಐ ಕಾಪು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಕಾಪು ಪುರಸಭೆ ಮತ್ತು ನಗರಾಭಿವೃದ್ಧಿ ಕೋಶ ಉಡುಪಿ ಇವರ ಸಹಕಾರದೊಂದಿಗೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾಭವನದಲ್ಲಿ ಜರಗಿದ ತಾಲೂಕು ಮಟ್ಟದ ಪೋಷಣ್‌ ಅಭಿಯಾನ್‌, ಪೋಷಣ್‌ ಮಾಸ ಮತ್ತು ಆರೋಗ್ಯವಂತ ಶಿಶು ಸ್ಪರ್ಧೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜೇಸಿಐ ಭಾರತದ ರಾಷ್ಟ್ರೀಯ ನಿರ್ದೇಶಕ ಸಂದೀಪ್‌ ಕುಮಾರ್‌ ಜೇಸಿ ಸಪ್ತಾಹ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌ ಮಾತನಾಡಿದರು.

ಇಲ್ಲಿನ ಪುರಸಭಾ ಮುಖ್ಯಾಧಿಕಾರಿ ರಾಯಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ| ಅಮರನಾಥ ಶಾಸಿŒ, ಜೇಸಿಐ ನಿಕಟಪೂರ್ವಾಧ್ಯಕ್ಷರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣ್‌ ಪ್ರಭಾ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಕೌಶಲಾಭಿವೃದ್ಧಿ ಅಧಿಕಾರಿ ಗೀತಾ, ಕುಷ್ಠ ರೋಗ ನಿವಾರಣಾ ಅಧಿಕಾರಿ ಡಾ| ನಿಂಬಾಳ್ಕರ್‌, ಆಯುಷ್ಮಾನ್‌ ಭಾರತ್‌ ಯೋಜನೆಯ ಜಿಲ್ಲಾ ಸಂಯೋಜಕ ಜಗನ್ನಾಥ್‌, ಕಾಪು ಜೇಸಿಐ ಪೂರ್ವಾಧ್ಯಕ್ಷ ಅರುಣ್‌ ಶೆಟ್ಟಿ ಪಾದೂರು ಮುಖ್ಯ ಅತಿಥಿಗಳಾಗಿದ್ದರು.

ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ವಲಯ ನಿರ್ದೇಶಕಿ ಸೌಮ್ಯಾ ರಾಕೇಶ್‌, ಕಾಪು ಜೇಸಿಐನ ನಿಕಟ ಪೂರ್ವಾಧ್ಯಕ್ಷ ರಮೇಶ್‌ ನಾಯ್ಕ, ಸಪ್ತಾಹದ ಮಹಾನಿರ್ದೇಶಕಿ ಸಾವಿತ್ರಿ ನಾಯ್ಕ ಉಪಸ್ಥಿತರಿದ್ದರು.

Advertisement

ಜೋಸೆಫ್‌ ಎಂ. ರೆಬೆಲ್ಲೊ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪೌಷ್ಟಿಕಾಂಶಯುತ ಆಹಾರ ಪದಾರ್ಥಗಳ ಪ್ರದರ್ಶನ ವಿವಿಧ ಅಂಗನವಾಡಿ ಕಾರ್ಯ ಕರ್ತರು ಪೌಷ್ಟಿಕಾಂಶ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ತಂದು, ಅದರ ಬಗ್ಗೆ ಮಾಹಿತಿ ನೀಡಿದರು. ಕಳತ್ತೂರು ಶಾಲೆಗೆ ವಾಷ್‌ ಬೇಸಿನ್‌ ನೀಡಲಾಯಿತು. ಸುತ್ತಮುತ್ತಲಿನ ವಿವಿಧ ಅಂಗನವಾಡಿ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ಆರೋಗ್ಯವಂತ ಶಿಶು ಸ್ಪರ್ಧೆ ನಡೆಸಿ, ಬಹುಮಾನ ವಿತರಿಸಲಾಯಿತು.ಜೇಸಿಐನ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ ಸ್ವಾಗತಿಸಿದರು. ಕಾರ್ಯದರ್ಶಿ ಸುಖಲಾಕ್ಷಿ ಬಂಗೇರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next