Advertisement

ತಾಯಿಯ ಸ್ಥಾನ ಪೂಜ್ಯವಾದುದು: ಪಲಿಮಾರು ಶ್ರೀ

08:43 PM Jun 08, 2019 | mahesh |

ಉಡುಪಿ: ಭೂಮಿಯಲ್ಲಿ ಮಹಿಳೆಯರಿಗೆ ಶ್ರೇಷ್ಠವಾದ ಸ್ಥಾನವಿದೆ. ಮಗು ಮೊದಲು ತಾಯಿಯನ್ನು ನೋಡಿ ಅನಂತರ ತಂದೆಯನ್ನು ನೋಡುವುದೇ ನಮ್ಮ ದೇಶದ ಸಂಸ್ಕೃತಿ. ಮಹಿಳೆಯರು ಮಗುವಿನ ಭವಿಷ್ಯವನ್ನು ರಕ್ಷಣೆ ಮಾಡು ತ್ತಾರೆ. ಈ ಕಾರಣಕ್ಕಾಗಿಯೇ ತಾಯಿಯ ಸ್ಥಾನ ಪೂಜ್ಯವಾದುದು ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.

Advertisement

ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆ ಯುತ್ತಿರುವ ಸುವರ್ಣ ಗೋಪುರ ಸಮ ರ್ಪಣೋತ್ಸವ ಹಾಗೂ ಹ್ಮಕಲಶಾಭಿಷೇಕದ ಪ್ರಯುಕ್ತ ಶುಕ್ರವಾರ ರಾಜಾಂಗಣದಲ್ಲಿ ನಡೆದ ವನಿತಾಗೋಪುರಮ್‌ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು. ನಾವು ಮಕ್ಕಳಿಗೆ ತಿಳಿಸುವ ಸಂಸ್ಕೃತಿಯೇ ನಮಗೆ ಮರಳಿ ಲಭಿಸುತ್ತದೆ. ಸಮಾಜದಲ್ಲಿ ವಿಚ್ಛೇದನ ಎಂಬುದು ಇರಬಾರದು. ಇದಕ್ಕಾಗಿ ಹಿರಿಯರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು. ವಿಭಕ್ತ ಕುಟುಂಬವನ್ನು ಮಹಿಳೆಯರು ತಪ್ಪಿಸಿ ಅವಿಭಕ್ತ ಕುಟುಂಬ ಬೆಳೆಸುವಂತೆ ಪ್ರೋತ್ಸಾಹ ನೀಡಬೇಕು. ಈ ಕಾರ್ಯ ಮಹಿಳೆಯರಿಂದ ಮಾತ್ರ ಸಾಧ್ಯ ಎಂದರು.

ಸಹನೆ ಅಗತ್ಯ
ವಿದ್ವಾನ್‌ ಶ್ರೀ ಅರುಣಾಚಾರ್ಯ ಕಾಖಂಡಕಿ ಅಧ್ಯಕ್ಷತೆ ವಹಿಸಿ, ಬುದ್ಧಿಮಟ್ಟದ ಪ್ರತಿಭಾ ಸಾಮರ್ಥ್ಯದಲ್ಲಿ ಮಹಿಳೆ ಯರು ಯಾವತ್ತಿಗೂ ಮುಂದಿರುತ್ತಾರೆ. ಮಹಿಳೆಯರಿಗೆ ಸಹನೆ ಅತೀ ಅಗತ್ಯವಾಗಿದ್ದು, ಶಿಕ್ಷಣ, ಧರ್ಮನೀತಿ, ಆರೋಗ್ಯ ಸರಿಯಾಗಿದ್ದರೆ ಸಹನೆ, ಧರ್ಮ ತಾನಾಗಿಯೇ ಸಿದ್ಧಿªಸುತ್ತದೆ ಎಂದರು.

ಸ್ತ್ರೀಯರಲ್ಲಿ ಧೈರ್ಯ ಹೆಚ್ಚು
ಧೈರ್ಯಕ್ಕೆ ಬೇಕಿರುವ ಎಲ್ಲ ಗುಣ ಗಳೂ ಸ್ತ್ರೀಯರಲ್ಲಿವೆ. ಅರ್ಥಶಾಸ್ತ್ರದಲ್ಲಿ ಮಹಿಳೆಯರು ಅಪಾರ ಪ್ರಾವೀಣ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ಸನಾತನ ಧರ್ಮದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನ ನೀಡಲಾಗಿದೆ. ಮಹಿಳೆಯರಲ್ಲಿ ಅಪಾರ ವಿಶ್ವಾಸವಿದೆ. ಇದೇ ಕಾರಣಕ್ಕೆ ಇವರು ಮನೆಯ ಅರ್ಥವ್ಯವಸ್ಥೆಯನ್ನು ನಿಭಾಯಿಸುತ್ತಾರೆ. ಇತ್ತೀಚಿನ ಕೆಲವು ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಲಕ್ಷಣದಿಂದಾಗಿ ಮಹಿಳೆಯರು ಅತೀ ಆಸೆಗೆ ಬೀಳುತ್ತಿದ್ದಾರೆ. ಇದರಿಂದ ಪುರುಷರ ಮೇಲೆ ಸಹಜವಾಗಿಯೇ ಒತ್ತಡ ಬೀಳುತ್ತಿದೆ. ಇದು ಕೂಡ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ. ಪ್ರತೀ ಮನೆಯ ಅರ್ಥವ್ಯವಸ್ಥೆ ಚೆನ್ನಾಗಿದ್ದರೆ ಭ್ರಷ್ಟಾಚಾರವನ್ನು ತೊಲಗಿಸಬಹುದು. ಇದರಲ್ಲಿ ಮಹಿಳೆಯರ ಪಾತ್ರ ಅಪಾರ ಎಂದರು. ರಕ್ಷಣೆಯ ವಿಚಾರದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ಧರ್ಮಜಾಗೃತಿ
ಶ್ರೀರಂಗಮ್‌ನ ವಿದ್ವಾಂಸರಾದ ಸರಸ್ವತೀ ಶ್ರೀಪತಿ ಮಾತನಾಡಿ, ಧಾರ್ಮಿಕ ಚಿಂತನೆ ಮೈಗೂಡಿಸಿ ಕೊಳ್ಳುವುದರಿಂದ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಲು ಸಾಧ್ಯ. ಒಬ್ಬಳು ಮಹಿಳೆಯಿಂದ ಒಂದು ಕುಟುಂಬ ಸುಖವಾಗಿರಲು ಸಾಧ್ಯ ಎಂದರು.

Advertisement

ದಾನದಿಂದ ಪುಣ್ಯ ಪ್ರಾಪ್ತಿ
ಸ್ವಸ್ಥ ಜೀವನಕ್ಕೆ ಹಣದ ಆವಶ್ಯಕತೆಯ ಬಗ್ಗೆ ಮಾತನಾಡಿದ ಶೋಭಾ ಉಪಾಧ್ಯಾಯ, ಮನುಷ್ಯ ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗಿ ಮತ್ತಷ್ಟು ಹಣ ಲಭಿಸುತ್ತದೆ. ಹೆಣ್ಣಿಗೆ ಮನೆಯಲ್ಲಿ ಗೌರವ ಸಿಕ್ಕಿದರೆ ಮನೆಯಲ್ಲಿ ಲಕ್ಷ್ಮೀ ಪ್ರಾಪ್ತಿಯಾಗುತ್ತದೆ ಎಂದರು. ಸುಲಕ್ಷಣಾ ವೆಂಕಟಾಚಾರ್ಯ, ಡಾ| ಪರಿಮಳಾ ಅವರು ಸ್ವಸ್ಥ ಜೀವನದ ಬಗ್ಗೆ ಮಾಹಿತಿ ನೀಡಿದರು. ವೆಂಕಟೇಶ ಆಚಾರ್ಯ ಸ್ವಾಗತಿಸಿ, ವಂದಿಸಿದರು. ಸರಸ್ವತೀ ಶ್ರೀಪತಿ ನಿರೂಪಿಸಿದರು.

ಆಧುನಿಕ ಶಿಕ್ಷಣದಿಂದ ನೆಮ್ಮದಿ ದೂರ
ಸ್ವಸ್ಥ ಜೀವನದಲ್ಲಿ ಶಿಕ್ಷಣದ ಪಾತ್ರದ ಬಗ್ಗೆ ಆಶಾ ಪೆಜತ್ತಾಯ ಮಾಹಿತಿ ನೀಡಿ, ಧರ್ಮಪರಿಪಾಲನ ಶಕ್ತಿಯನ್ನು ದೇವರು ನಮಗೆ ಕರುಣಿಸಿದ್ದು, ಅದನ್ನು ನಾವು ಉಳಿಸಿಕೊಳ್ಳಬೇಕಿದೆ. ಹಿಂದೆ ಭಾರತದಲ್ಲಿದ್ದ ಗುರುಕುಲ ಪದ್ಧತಿಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಬ್ರಿಟಿಷರು ಮಾಹಿತಿ ಕಲೆ ಹಾಕಿ ಅದನ್ನು ಅವನತಿ ಮಾಡುವ ನಿಟ್ಟಿನಲ್ಲಿಯೇ ಆಧುನಿಕತೆಯ ಭರದಲ್ಲಿ ಆಂಗ್ಲಭಾಷಾ ಶಿಕ್ಷಣ ಪ್ರಾರಂಭಿಸಿದರು. ಇದರಿಂದ ನಾವು ಬ್ರಿಟಿಷರ ಗುಲಾಮರಾಗಬೇಕಾಯಿತು ಎಂದರು. ಆಧುನಿಕ ಶಿಕ್ಷಣದಿಂದ ನೆಮ್ಮದಿ ದೂರವಾಗಿದೆ. ಕೃಷಿ ಮಾಡಿ ಶುದ್ಧ ಆಹಾರ ಪಡೆಯುವುದು, ಗೋ ಸೇವೆಯ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸುವಂತಹ ಕೆಲಸ ಆಗಬೇಕಿದ್ದು, ಇದಕ್ಕೆ ಧಾರ್ಮಿಕ ಶಿಕ್ಷಣ ಅತೀ ಅಗತ್ಯ. ಮಕ್ಕಳಿಗೆ ಲೌಕಿಕ ಶಿಕ್ಷಣ ನೀಡುವುದರ ಜತೆಗೆ ಧಾರ್ಮಿಕ ಶಿಕ್ಷಣ ನೀಡುವಂತಹ ಕೆಲಸ ಆಗಬೇಕು ಎಂದರು.

ಸ್ತ್ರೀ ಸಹನಾ ಮೂರ್ತಿ
ವಿದ್ವಾಂಸರಾದ ಶಾಂತಾ ಉಪಾಧ್ಯಾಯ ಅವರು ಸ್ವಸ್ಥ ಜೀವನದಲ್ಲಿ ಸ್ತ್ರೀಯರ ಪಾತ್ರದ ಬಗ್ಗೆ ಉಪನ್ಯಾಸ ನೀಡಿ, ಸ್ತ್ರೀ ಸಹನಾ ಮೂರ್ತಿ. ಸಹನೆಯಿಂದ ಕೋಪ ನಿಯಂತ್ರಣ ಸಾಧ್ಯ, ಇದನ್ನು ಮಹಿಳೆ ಮಾತ್ರ ಮಾಡಬಲ್ಲಳು. ಮಹಿಳೆಯ ಉನ್ನತಿ, ಅವನತಿ ಸ್ತ್ರೀಯರ ಕೈಯಲ್ಲಿರುತ್ತದೆ. ಕಷ್ಟ ಬಂದರೂ ಛಲ ಬಿಡದೆ ಮುನ್ನುಗ್ಗುವ ಗುಣ ಮಹಿಳೆಯರಲ್ಲಿದೆ. ಸಹನೆ, ಅಹಂ, ತಾಳ್ಮೆ ಈ ಮೂರು ಅಂಶ ಮಹಿಳೆಯರಿಗೆ ಅತೀ ಅಗತ್ಯ ಎಂದು ಪಲಿಮಾರುಶ್ರೀ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next