Advertisement
ಅದೇನೋ ಎಲ್ಲವನ್ನು ಸೈರಿಸುವ ಅದ್ಭುತ ಸಾಮರ್ಥ್ಯ ಆ ದೇವತೆಗಿದೆ. ಹೌದು ಒಂದೊಂದು ದಿನಗಳಿಗೂ ಅದರದೇ ಆದ ಮಹತ್ವವಿದೆ.
Related Articles
Advertisement
ಈ ಲಾಕ್ ಡೌನ್ ರಜೆಯಲ್ಲಂತೂ ತಾಯಂದಿರಿಗೆ ಬಿಡುವಿಲ್ಲದ ಕಾಯಕ. ಬೆಳಗ್ಗಿನ ಉಪಾಹಾರದಿಂದ ಹಿಡಿದು ರಾತ್ರಿಯ ಭೋಜನದವರೆಗೆ ಆಕೆ ಎಲ್ಲರ ಹೊಟ್ಟೆ ತಣಿಸುವಲ್ಲೇ ಕಷ್ಟ ಪಡುತ್ತಾ ದಿನ ದೂಡುತ್ತಾಳೆ.
ಸಂಬಳವಿಲ್ಲದೆ ದುಡಿಯುವ ಆ ಮನಸ್ಸಿಗೆ ಮತ್ತು ದೇಹಕ್ಕೆ ಎಂದೂ ದಣಿಯದು. ತನ್ನ ಕುಟುಂಬವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಆಕೆ ಹೊಸ ಯುಗವಿದ್ದಂತೆ.
ತನ್ನ ಹೆಗಲಿಗೆ ಕೈ ಇತ್ತು ಬಾಳ ದಾರಿಯಲ್ಲಿ ಸಂಗಾತಿಯಾಗಿರುವ ಗಂಡನ ಮೇಲೆ ಅದೆಷ್ಟೋ ಬೆಟ್ಟದಷ್ಟು ಆಸೆ ಕನಸ ಹೊತ್ತು ನಮಗಾಗಿ ಜೀವದ ಹಂಗು ತೊರೆದು ಬಾಳ ಸವೆಸುವ ಪ್ರಪಂಚದ ಏಕೈಕ ಜೀವ ಎಂದರೆ ಅದು ಜನ್ಮವಿತ್ತ ಜನನಿ.
ತಾಯಂದಿರ ದಿನಾಚರಣೆಯ ಈ ಶುಭ ಘಳಿಗೆ ಕೇಳುವುದೊಂದೇ ಗೆಳೆಯರೇ ಅದೆಷ್ಟೋ ಅನಾಥ ಮಕ್ಕಳು ಅಮ್ಮಾ ಎಂದು ಕರೆಯಲು ಹಾತೊರೆಯುತ್ತಿರಲು, ಅದ ಕರೆಯೋ ಭಾಗ್ಯ ನಮ್ಮ ಹಣೆಬರಹದಲ್ಲಿಲ್ಲ ಎಂದು ಶಪಿಸಲು ಇರುವಷ್ಟು ದಿನ ಮಾತೆಯಂದಿರನ್ನು ಪ್ರೀತಿಯಿಂದ ಸಲಹಿ, ಅವರ ಕನಸ ಬೆನ್ನ ಹತ್ತಿ ಸಾಗಿ.
ಬೆಳೆದು ದೊಡ್ಡವಳಾದಾಗ ವರ್ಷಂಪ್ರತಿ ಈ ದಿನ ಎಚ್ಚರಿಸುತ್ತದೆ ಲೇಖನಿಯು ಗೀಚುವ ಅಕ್ಷರದೊಳು ಅದ ಹಿಡಿದ ಹಸ್ತದೊಳು ನೀ ಸ್ಪರ್ಶವಿತ್ತಂತೆ ಭಾಸ ಮಾಡುತ್ತಾ ಕೋರಲು ಶುಭಾಶಯ.
ಮಿಸ್ ಯೂ ಅಮ್ಮ…
– ಅರ್ಪಿತಾ ಕುಂದರ್, MCJ, ವಿವೇಕಾನಂದ ಕಾಲೇಜು, ಪುತ್ತೂರು