ಮಾತೃಭಾಷೆಯನ್ನೇ ಸರಿಯಾಗಿ ಕಲಿಯಲಾರದ ಮಗುವಿಗೆ ಅಪರಿಚಿತವಾದ ಇನ್ನೊಂದು ಭಾಷೆ ಬೌದ್ಧಿಕ ಹೊರೆಯಾಗುವುದು. ಹಾಗಾಗಿ ಹೆತ್ತವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕನಿಷ್ಟ ಐದನೇ ತರಗತಿಯವರೆಗಾದರೂ ಮಕ್ಕಳಿಗೆ ತಮ್ಮ ಮಾತೃಭಾಷೆಯ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಬೇಕು ಎಂದು ಪ್ರಖ್ಯಾತ ಚಿಂತನಕಾರ ಪೊÅà.ಕನರಾಡಿ ವಾದಿರಾಜ ಭಟ್ ಅಭಿಪ್ರಾಯ ಪಟ್ಟರು.
Advertisement
ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯ ಜೀವನ್ ಹುಟ್ಟು ಹಬ್ಬದ ಪ್ರಯುಕ್ತ ತಾಯಿ ತಂದೆ ಜ್ಯೋತಿ-ಚಂದ್ರ ಅವರು ಪ್ರಾಯೋಜಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಪತ್ರಿಕೆಯ 6ನೇ ಸಂಚಿಕೆ ಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ 2017-18ನೇ ಸಾಲಿನ ತಿಂಗಳ ಕಲಿಕಾ ಪ್ರದರ್ಶನದ ಎರಡನೇ ಕಾರ್ಯಕ್ರಮ, ದಶಪ್ರಶ್ನೆ ಎಂಬ ವಿಶಿಷ್ಟ ಸ್ಪರ್ಧಾ ಕಾರ್ಯಕ್ರಮ ಹಾಗೂ ಸರ್ವಪೋಷಕರ ಸಭೆಯು ಶಾಲಾ ಮುಖ್ಯೋಪಾಧ್ಯಾಯರಾದ ನಾಗರತ್ನಾ ಹೆಬ್ಟಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.