ಸಮ್ಮೇಳನ ಉದ್ಘಾಟಿಸಿದ ನಿವೃತ್ತ ಉಪನ್ಯಾಸಕ ಡಾ| ಪಾದೆಕಲ್ಲು ವಿಷ್ಣು ಭಟ್ ಮಾತನಾಡಿ, ಹೆಚ್ಚು ಭಾಷೆಗಳನ್ನು ಅರಿತು ಕೊಳ್ಳುವುದು ಮಾತೃಭಾಷೆಗೆ ವಿರುದ್ಧ ಎಂದು ಭಾವಿಸುವುದು ಸರಿಯಲ್ಲ. ಭಾಷೆಯ ಬಗ್ಗೆ ಮೇಲು-ಕೀಳು ಎಂಬ ಬೇಧ ಭಾವ ಇಲ್ಲ ಎಂದರು. ಓದುವ ಮನಸ್ಥಿತಿ ಕಡಿಮೆ ಎಂಬ ಅಭಿಪ್ರಾಯಗಳಿವೆ. ಇದಕ್ಕೆ ಪರಿಹಾರ ಅಂದರೆ, ಶಿಕ್ಷಕರು ಓದಬೇಕು. ಆ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದರು.
ಕಡಬ ಸಮನ್ವಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಶಾಸಕ ಎಸ್. ಅಂಗಾರ ಮಾತನಾಡಿ, ಸಾಹಿತ್ಯ ಸಮ್ಮೇಳನಗಳ ಮೂಲಕ ಮನುಷ್ಯ-ಮನುಷ್ಯನ ಮಧ್ಯೆ
ಸಂಬಂಧಗಳು ಬಲಗೊಳ್ಳಬೇಕು. ತೋರ್ಪಡಿಕೆಯ ಭಾವನೆಗಳು ತೆರೆಗೆ ಸರಿಯಬೇಕು ಎಂದರು.
ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ, ಭಾಷಣದಿಂದ ಬಹುತ್ವದ ಚಿಂತನೆ ಅಳವಡಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ನಾವು ಪ್ರತ್ಯೇಕತೆಯ ಚಿಂತನೆಯನ್ನು ಮಾಡಿಲ್ಲ. ಬಹುತ್ವದ ಸಂಸ್ಕೃತಿ ನಮ್ಮ ರಕ್ತದಲ್ಲಿಯೇ ಇದೆ ಎಂದರು.
ಹಿಂದಿನ ಸಮ್ಮೇಳನದ ಅಧ್ಯಕ್ಷ ಪ್ರೊ| ಹರಿನಾರಾಯಣ ಮಾಡಾವು ಮಾತನಾಡಿದರು. ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ ವರ್ಗೀಸ್, ತಾ.ಪಂ.ಸದಸ್ಯ ಫಝಲ್ ಕೋಡಿಂಬಾಡಿ, ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮೊಗೇರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ತಾಲೂಕು ಪಂಚಾಯತ್ ಇ.ಓ ಜಗದೀಶ್ ಎಸ್, ಸಲಹಾ ಸಮಿತಿ ಸದಸ್ಯ ರೆ.ಫಾ.ರೊನಾಲ್ಡ್ ಲೋಬೋ, ಸ್ವಾಗತ ಸಮಿತಿ ಅಧ್ಯಕ್ಷ ಮಹಮ್ಮದ್ ಕುಂಞಿ, ಆರ್ಥಿಕ ಸಮಿತಿ ಸಂಚಾಲಕ ಗಣೇಶ್ ಕೈಕುರೆ, ಕಡಬ ಸ.ಪೂ.ಕಾಲೇಜಿನ ಪ್ರಾಂಶುಪಾಲ ಇ.ಸಿ.ಚೆರಿಯನ್ ಬೇಬಿ, ಉಪ ಪ್ರಾಂಶುಪಾಲೆ ವೇದಾವತಿ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಐತ್ತಪ್ಪ ನಾಯ್ಕ ಪ್ರಸ್ತಾವನೆಗೈದರು. ಡಾ| ಶ್ರೀಧರ ಎಚ್.ಜಿ. ಸಮ್ಮೇಳನಾಧ್ಯಕ್ಷರನ್ನು ಮತ್ತು ನಾರಾಯಣ ಭಟ್ ಟಿ. ರಾಮಕುಂಜ ಉದ್ಘಾಟಕರನ್ನು ಪರಿಚಯಿಸಿದರು.ಸ್ವಾಗತ ಸಮಿತಿ ಗೌರವಾಧ್ಯಕ್ಷ ಜನಾರ್ದನ ಗೌಡ ಪಿ. ಸ್ವಾಗತಿಸಿ, ರಾಮಕೃಷ್ಣ ಮಲ್ಲಾರ ವಂದಿಸಿದರು. ವಾಸುದೇವ ಗೌಡ ಕೋಲ್ಪೆ ನಿರೂಪಿಸಿದರು. ಮಹೇಶ್ ನಿಟಿಲಾಪುರ ಸಹಕರಿಸಿದರು.