Advertisement

Haveri; ಯುವತಿಯ ಅಪಹರಣ ಆರೋಪ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

10:46 AM May 03, 2024 | Team Udayavani |

ಹಾವೇರಿ: ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆಯು ಜನಮಾನಸದಿಂದ ಮಾಸುವ ಮುನ್ನವೇ ಹಾವೇರಿ ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದಿದೆ. ಯುವತಿಯೊಬ್ಬಳನ್ನು ಯುವಕ ಪ್ರೀತಿಸಿ ಅಪಹರಿಸಿದ್ದಾನೆ ಎಂಬ ಆರೋಪದಡಿ ಆತನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ.

Advertisement

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲುಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಹನಮವ್ವ ದುರಗಪ್ಪ ಮೆಡ್ಲೇರಿ (50 ವ) ಎಂಬ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಲಾಗಿದೆ.

ಹನಮವ್ವಳ ಮಗ ಮಂಜುನಾಥ ಅದೇ ಗ್ರಾಮದ ಯುವತಿಯನ್ನು ಅಪಹರಿಸಿದ ಬಗ್ಗೆ ಆರೋಪಿಸಲಾಗಿದೆ. ಇದರಿಂದ ಕ್ರೋಧಗೊಂಡ ಯುವತಿಯ ಕಡೆಯವರು ಯುವಕನ ತಾಯಿಗೆ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ.

ಮನೆಗೆ ನುಗ್ಗಿ ಆಕೆಯನ್ನು ಎಳೆದು ತಂದು ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೊ ಇಚ್ಚೆ ಹಲ್ಲೆ ಮಾಡಿದ್ದು, ‘ನಿನ್ನ ಮಗ ಎಲ್ಲಿದ್ದಾನೆ’ ಎಂದು ಪ್ರಶ್ನಿಸಿದ್ದಾನೆ. ಅದೇ ಗ್ರಾಮದ ಚಂದ್ರಪ್ಪ, ಗಂಗಪ್ಪ, ಗುತ್ತೆವ್ವ ಹಲ್ಲೆ ಮಾಡಿದ ಆರೋಪಿಗಳಾಗಿದ್ದಾರೆ.

ಗಾಯಗೊಂಡ ಹನಮವ್ವಳಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರಾಣೇಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next