Advertisement

ಹೆತ್ತ ತಾಯಿ ಬಿಟ್ಟು ಹೋದ ಹೆಣ್ಣು ಮಗು ಪಡೆಯಲು ಆಸ್ಪತ್ರೆಯಲ್ಲಿ ನೂಕುನುಗ್ಗಲು

09:44 AM Feb 17, 2020 | keerthan |

ಚಿಕ್ಕಬಳ್ಳಾಪುರ: ಎರಡು ತಿಂಗಳ ಹಸೂಗೂಸನ್ನು ಆಸ್ಪತ್ರೆಯ ಆವಣರದಲ್ಲಿ ಬಿಟ್ಟು ತಾಯಿ ಪರಾರಿಯಾಗಿರುವ ಘಟನೆ‌ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ‌ ಭಾನುವಾರ ಮಧ್ಯಾಹ್ನ ನಡೆದಿದೆ.

Advertisement

ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಆಗಮಿಸಿದ್ದ ತಾಯಿ ಎರಡು ತಿಂಗಳ ಹೆಣ್ಣು ಮಗುವಿನ ಜೊತೆ ಆಗಮಿಸಿದ್ದರು. ಮೆಡಿಕಲ್ ಶಾಪ್ ನಲ್ಲಿ ಮಾತ್ರೆ, ಸಿರಪ್ ತಗೊಂಡು ಬರಬೇಕೆಂದು ಹೇಳಿ ಆಸ್ಪತ್ರೆ ಆವರಣದಲ್ಲಿ ಮಗುವನ್ನು ಮಲಗಿಸಿ ಹೋದ ತಾಯಿ ಮರಳಿ ವಾಪಸ್ಸು ಬಂದಿಲ್ಲ.

ಈ ವೇಳೆ ಮಗು ಆಸ್ಪತ್ರೆಯಲ್ಲಿ ಚೀರಾಟ ಕೇಳಿ ಚಿಕಿತ್ಸೆಗೆ ಬಂದಿದ್ದ ರೋಗಿಗಳು, ಸಾರ್ವಜನಿಕರು ಮಗುವಿನ ಪೋಷಕರ ಪತ್ತೆಗೆ ಪ್ರಯತ್ನ ನಡೆಸಿದರೂ ತಾಯಿ ಪತ್ತೆಯಾಗಲಿಲ್ಲ. ಕೊನೆಗೆ‌ ಮಗುವನ್ನು ಆಸ್ಪತ್ರೆಯ ದಾದಿಯರು ಪಡೆದು ಆರೈಕೆ ಮಾಡುತ್ತಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ ಎನ್ನಲಾಗಿದೆ.

ವಿಷಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಮನಕ್ಕೆ ತಂದಿದ್ದು ವಿಚಾರ ತಿಳಿದ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಮತ್ತೊಂದಡೆ ಬಿಟ್ಟು ಹೋಗಿರುವ ಹೆಣ್ಣು ಮಗು ಪಡೆಯಲು ಹಲವರು ಆಸ್ಪತ್ರೆಗೆ ದಾಂಗುಡಿ ಇಟ್ಟಿದ್ದಾರೆ. ಮಗುವನ್ನು ತಮಗೆ ನೀಡಿ, ತಾವು ಸಾಕುತ್ತೇವೆ ಎಂದು ಆಸ್ಪತ್ರೆಯ ಸಿಬ್ಬಂದಿಯ ಬಳಿ ಕೇಳಿಕೊಂಡ ಪ್ರಕರಣವೂ ನಡೆಯಿತು. ಆದರೆ ಆಸ್ಪತ್ರೆಯ ಸಿಬ್ಬಂದಿ ಅವಕಾಶ ಕೊಡಲಿಲ್ಲ. ನಿಯಮಾನುಸಾರ ಮಗುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next