Advertisement
ಈ ಹಿನ್ನೆಲೆಯಲ್ಲಿ ಭಜನೆಯನ್ನು ಜನಪ್ರಿಯಗೊಳಿಸುವ ಸಲುವಾಗಿ ಇತ್ತೀಚಿಗೆ ಕಾಸರಗೋಡಿನ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನಡೆದ “ಮಾತೃ ಕೀರ್ತನಾ’ ಕಾರ್ಯಕ್ರಮ ಸ್ತುತ್ಯರ್ಹ. ಸಾಂಸ್ಕೃತಿಕ ಮತ್ತು ಸಾಮಾಜಿಕ ಕಳಕಳಿಯ ಸಂಸ್ಥೆಯಾದ ರಂಗಚಿನ್ನಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದನ್ನು ಸಂಘಟಿಸಿತ್ತು. ರಾಮಕೃಷ್ಣ ಕಾಟುಕುಕ್ಕೆ ಮತ್ತು ಜಯಾನಂದ ಕುಮಾರ್ ಹೊಸದುರ್ಗ ಇವರ ನೇತೃತ್ವದಲ್ಲಿ ಕಾಸರಗೋಡು, ಕಾಂಞಂಗಾಡ್, ಮಂಗಳೂರು, ಪುತ್ತೂರು ಮುಂತಾದ ಕಡೆಗಳಿಂದ ಬಂದ 35 ತಂಡಗಳ ಸುಮಾರು 500 ಮಹಿಳೆಯರು ದಾಸಕೀರ್ತನೆಯನ್ನು ಹಾಡಿದರು. ಅಪರಾಹ್ನ ಸಂಶೋಧಕಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಉಪನ್ಯಾಸ ನೀಡಿದರು.ಕೊನೆಗೆ ಭಜನೆಗಳನ್ನು ಹಾಡುವ ವಿಧಾನದ ಬಗ್ಗೆ ಖ್ಯಾತಗಾಯಕರಾದ ಶಂಕರ್ ಶ್ಯಾನುಭೋಗ್ ಪ್ರಾತ್ಯಕ್ಷಿಕೆ ನೀಡಿದರು. Advertisement
ಮಹಿಳೆಯರನ್ನು ಸಂಘಟಿಸಿದ ಮಾತೃ ಕೀರ್ತನಾ
06:00 AM Jul 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.