“ಪ್ರತಿಯೊಬ್ಬರ ಸಾಧನೆಯ ಹಿಂದೆ ಗುರು ಹಿರಿಯರ, ಪೋಷಕರ ಅಶೀರ್ವಾದ ಇದ್ದೇ ಇರುತ್ತದೆ. ಅದೇ ರೀತಿ ನನ್ನ ಸಾಧನೆಗೂ ಅಮ್ಮನೇ ಪ್ರೇರಣೆ. ನಾನು ಕಾಲು ನೋವಿನಿಂದ ಬಳಲುತ್ತಿದ್ದಾಗ ಅಮ್ಮ ತನ್ನ ಕಾಲಿನ ಮೇಲೆ ಮಲಗಿಸಿ ಮದ್ದು ಹಚ್ಚುತ್ತಿದ್ದಳು. ನೋವಿದ್ದ ಜಾಗಕ್ಕೆ ಐಸ್‌ಪ್ಯಾಕ್ ಇಟ್ಟು ಸಂತೈಸುತ್ತಿದ್ದಳು. ಸೋಲು-ಗೆಲುವು ಏನೇ ಇದ್ದರೂ, ಸ್ಪರ್ಧಿಸಿ ದೇಶಕ್ಕೆ ಹೆಸರು ತಂದುಕೊಡು ಎಂದು ಹಾರೈಸುತ್ತಿದ್ದ ಅಮ್ಮನೇ ನನಗೆ ಸ್ಫೂರ್ತಿ’ ಎನ್ನುತ್ತಾರೆ ಮಂಗಳೂರಿನ ಕೂಳೂರು ಮೂಲದ ದೇಹದಾರ್ಢ್ಯ ಪಟು ಮೊಹಮ್ಮದ್ ರಮೀಜ್.
ಒಂದೆಡೆ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು, ಮತ್ತೂಂದೆಡೆ ಅನಾರೋಗ್ಯಕ್ಕೆ ತುತ್ತಾದ ಅಮ್ಮ. ಮನೆಯ ಎಲ್ಲಾ ಜವಾಬ್ದಾರಿಯನ್ನು ತಾನೇ ನಿರ್ವಹಿಸ ಬೇಕಾದ ಒತ್ತಡ. ಇದರ ನಡುವೆಯೂ, ಮಲೇಷ್ಯಾದಲ್ಲಿ ಇತ್ತೀಚೆಗೆ ನಡೆದ “ಗ್ರ್ಯಾನ್ ಪ್ರೀ ಏಷ್ಯಾ 2018′ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, 4ನೇ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮುಂದಿನ ತಿಂಗಳು ಸಿಂಗಾಪುರದಲ್ಲಿ ನಡೆಯಲಿರುವ ಡಬ್ಲೂ$Âಎಫ್‌ಎಫ್ ಅಂತಾರಾಷ್ಟ್ರೀಯ μಸಿಕ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿದ್ದಾರೆ.
ಮಲೇಷ್ಯಾದ ಕೌಲಾಲಂಪುರದಲ್ಲಿ ಇತ್ತೀಚೆಗೆ ನಡೆದ ಗ್ರ್ಯಾನ್ ಪ್ರೀಏಷ್ಯಾ 2018 ದೇಹದಾರ್ಢ್ಯ ಸ್ಪರ್ಧೆ ಯಲ್ಲಿ ಒಟ್ಟಾರೆ 19 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು. ಒಟ್ಟಾರೆ 32 ಮಂದಿ ಭಾಗವಹಿಸಿದ್ದ ಸ್ಪರ್ಧೆ ಯಲ್ಲಿ ರಮೀಜ್ ಅವರು ಭಾರತದ ಪರ ಸ್ಪರ್ಧಿಸಿದ್ದರು. ಕೊನೇಕ್ಷಣದವರೆಗೂ, ಉತ್ತಮ ಪ್ರದರ್ಶನ ತೋರಿದ ಇವರು 4ನೇ ಸ್ಥಾನ ಪಡೆಯುವುದರ ಮೂಲಕ ಕರಾವಳಿಗೆ ಕೀರ್ತಿ ತಂದಿದ್ದಾರೆ. ದೇಹದಾರ್ಢ್ಯ ತರಬೇತಿಯನ್ನು ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಮೈಜಿಮ್ ನಲ್ಲಿ ಪಡೆಯು ತ್ತಿದ್ದು, ಪವರ್‌ಲಿμrಂಗ್ ತರಬೇತಿಯನ್ನು ರಥಬೀದಿಯ ಬಾಲಾಂಜನೇಯ ಜಿಮ್ನಾಶಿಯಂನಲ್ಲಿ ಪಡೆಯುತ್ತಿದ್ದಾರೆ.
ಅಂದಹಾಗೆ, ರಮೀಜ್ ಅವರು ಪವರ್ ಲಿμrಂಗ್ ಕ್ಷೇತ್ರಕ್ಕೆ ಬಂದದ್ದು ಆಕಸ್ಮಿಕ. ಇವರ ತೆಳ್ಳಗಿನ ಶರೀರ ಗಮನಿಸಿದ ಕೆಲ ಮಂದಿ “ನಿನ್ನಿಂದ ಏನೂ ಸಾಧಿಸಲು ಸಾಧ್ಯವಿಲ್ಲ’ ಎಂದು ಹೀಯಾಳಿಸಿದ್ದರಂತೆ. ಇದನ್ನೇ ಸವಾಲಾಗಿ ತೆಗೆದುಕೊಂಡ ರಮೀಜ್ ಅವರು ಅದೇ ಶರೀರವನ್ನಿಟ್ಟು ಕಸರತ್ತು ಪ್ರಾರಂಭಿಸಿ ಪವರ್‌ಲಿμrಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಇಲ್ಲಿಯವರೆಗೆ 53 ಕೆ.ಜಿ., 59 ಕೆ.ಜಿ., 66 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. ಇವರ ಕಟ್ಟು ಮಸ್ತಾದ ದೇಹವನ್ನು ಕಂಡ ತರಬೇತುದಾರರು ದೇಹದಾಡ್ಯì ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳಲು ಸಲಹೆ ನೀಡಿದರು. ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿದ ರಮೀಜ್ ಅವರು ಇಂದು ಅಂತಾರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಟುವಾಗಿ ಬೆಳೆದಿದ್ದಾರೆ.
ಸದ್ಯ ಮೈ ಜಿಮ್ ಎಂಬ ಫಿಟ್‌ನೆಸ್ ಕ್ಲಬ್‌ನಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿರುವ ಮೊಹಮ್ಮದ್ ರಮೀಜ್ ಅವರ ಈ ಸಾಧನೆಗೆ ಗುರುಗಳಾದ ಸತೀಶ್ ಕುಮಾರ್ ಕುದ್ರೋಳಿ, ಪ್ರದೀಪ್ ಕುಮಾರ್, ಶ್ರೇಯಸ್ ಕಾಮತ್, ಜೋಶುವ ಬಂಗೇರ ಮತ್ತು ತಾಯಿ ಮುಮ್ತಾಜ್ ಅವರ ಸಹಕಾರವೇ ಕಾರಣವಂತೆ.
ಆರ್ಥಿಕ ಪರಿಸ್ಥಿತಿ ಕೈಕೊಟ್ಟಿತ್ತು
ಮನೆಯಲ್ಲಿ ಇವರ ಆರ್ಥಿಕ ಪರಿಸ್ಥಿತಿ ಎಷ್ಟು ಕೈಕೊಟ್ಟಿತ್ತು ಅಂದರೆ, ಇವರು ಕಾಲೇಜಿನಲ್ಲಿ ಕಲಿಯುತ್ತಿರುವಾಗ ಬೆಳಗ್ಗೆ ಮತ್ತು ಸಂಜೆ ಜಿಮ್‌ನಲ್ಲಿ ತರಬೇತುದಾರರಾಗಿ ದುಡಿಯುತ್ತಿದ್ದರು. ಅದರಿಂದ ಬಂದ ಹಣದಿಂದ ಮನೆಯ ಆರ್ಥಿಕ ಪರಿಸ್ಥಿತಿ ನಿಭಾಯಿಸಬೇಕಿತ್ತು. ಜೊತೆಗೆ ಕಾಲೇಜು ಪರೀಕ್ಷಾ ಶುಲ್ಕ ಕಟ್ಟಬೇಕಿತ್ತು. ಅಲ್ಲದೆ, ನಾಲ್ಕು ಬಾರಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರೂ, ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಇತ್ತೀಚೆಗೆ ಯಷ್ಟೇ ಮಲೇಷ್ಯಾದಲ್ಲಿ ನಡೆದ ಗ್ರ್ಯಾನ್ ಪ್ರೀ ಏಷ್ಯಾ 2018 ನಲ್ಲಿ ಸ್ಪರ್ಧಿಸಲು ಸ್ನೇಹಿತರಿಂದ ಸಾಲ ಪಡೆದು ತೆರಳಿದ್ದರು.
ನವೀನ್ ಭಟ್ ಇಳಂತಿಲ